More

    ಅಂಫಾನ್​ ಚಂಡಮಾರುತಕ್ಕೆ ಬುಡ ಸಮೇತ ಉರುಳಿದ 270 ವರ್ಷದ ಬೃಹತ್​ ಆಲದ ಮರ

    ಕೋಲ್ಕತ್ತಾ: ಅಂಫಾನ್​ ಚಂಡಮಾರುತ ಪಶ್ಚಿಮ ಬಂಗಾಳದ 270 ವರ್ಷ ಪುರಾತನ ಬೃಹತ್​ ಆಲದ ಮರವನ್ನು ಬುಡದ ಸಮೇತ ಉರುಳಿಸಿದೆ.

    ಹೌರಾ ಜಿಲ್ಲೆಯ ಶಿಬ್​ಪುರ್​ದ ಭಾರತೀಯ ಉದ್ಯಾನದ 4.67 ಎಕರೆಯಲ್ಲಿ ಹರಡಿಕೊಂಡಿದ್ದ ಆಲದ ಮರಕ್ಕೆ ಚಂಡಮಾರತು ಅಪ್ಪಳಿಸಿದ ಪರಿಣಾಮ ನೆಲಕ್ಕುರುಳಿದೆ.

    ಬೃಹತ್​ ಆಲದ ಮರಕ್ಕೆ ಚಂಡಮಾರುತದ ದಾಳಿ ಇದೆ ಮೊದಲೇನಲ್ಲ 1864 ಹಾಗೂ 1867ರಲ್ಲಿ ಚಂಡಮಾರುತ ಅಪ್ಪಳಿಸಿದ ಪರಿಣಾಮ ಮರದ ಕಾಂಡಕ್ಕೆ ಹಾನಿಯಾಗಿತ್ತು. ಕಾಂಡ ಹಾನಿಯಾಗಿದ್ದರೂ ಮರದ ಬೇರು ಗಟ್ಟಿಯಾಗಿದ್ದವು. ಆದರೆ ಅಂಫಾನ್​ ಚಂಡ ಮಾರುತ ಬೇರು ಸಮೇತ ಮರವನ್ನು ಉರುಳಿಸಿದೆ.

    ಇದನ್ನೂ ಓದಿ  ಪಶ್ಚಿಮ ಬಂಗಾಳಕ್ಕೆ 1 ಸಾವಿರ ಕೋಟಿ ರೂ. ನೆರವು ಘೋಷಿಸಿದ ಪ್ರಧಾನಿ ಮೋದಿ

    ಅತೀ ಹೆಚ್ಚು ಮಂದಿ ಪ್ರವಾಸಿಗರು ಭೇಟಿ ನೀಡುತ್ತಿದ್ದ ಸಸ್ಯ ಉದ್ಯಾನವನ ಇದಾಗಿದೆ. ಅಂಫಾನ್​ ಚಂಡಮಾರುತದಿಂದ 273 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಸಾವಿರ ಮರಗಳು ನೆಲಕ್ಕುರುಳಿವೆ. ನೂರು ವರ್ಷಕ್ಕಿಂತಲೂ ಅಧಿಕ ವರ್ಷದ ಮರಗಳು ಹಾನಿಯಾಗಿವೆ ಎಂದು ಹಿರಿಯ ಅರಣ್ಯ ವಿಜ್ಞಾನಿ ಬಸಂತ್ ಕುಮಾರ್ ಸಿಂಗ್ ಹೇಳಿದ್ದಾರೆ.

    ಚಂಡಮಾರುತಕ್ಕೆ ಇಡೀ ಉದ್ಯಾನವನ ಹಾನಿಗೆ ಒಳಗಾಗಿದೆ. ನೆಲಕ್ಕೆ ಉರುಳಿದ ಮರಗಳನ್ನು ತೆರವುಗೊಳಿಸಲಾಗುತ್ತಿದೆ. ಈಗಲೇ ನಷ್ಟದ ಅಂದಾಜು ಮಾಡಲು ಸಾಧ್ಯವಿಲ್ಲ ಎಂದು ಉದ್ಯಾನವನದ ನಿದೇರ್ಶಕ ಕನಕದಾಸ್​ ತಿಳಿಸಿದ್ದಾರೆ. (ಏಜೆನ್ಸೀಸ್​)

    VIDEO: ತೊಂಬತ್ತಕ್ಕೂ ಹೆಚ್ಚು ಜನರಿದ್ದ ಪಾಕಿಸ್ತಾನದ ವಿಮಾನ ಪತನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts