More

    ವಾಸ್ತವ ಗಡಿರೇಖೆ ಬಳಿ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಳಿಸಿದರೆ ಬಿಕ್ಕಟ್ಟು ಶಮನ

    ನವದೆಹಲಿ: ವಾಸ್ತವ ಗಡಿರೇಖೆಯ ಬಳಿಯ ತನ್ನ ಗಡಿ ಪ್ರದೇಶದೊಳಗೆ ಭಾರತ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಸ್ಥಗಿತಗೊಳಿಸಿದರೆ ಮಾತ್ರ ಲಡಾಖ್​ ಪ್ರದೇಶದಲ್ಲಿ ಉಂಟಾಗಿರುವ ಬಿಕ್ಕಟ್ಟು ಶಮನವಾಗಲು ಸಾಧ್ಯ ಎಂದು ಚೀನಾ ಷರತ್ತು ವಿಧಿಸಿದೆ. ಈ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್​ ಬಿಪಿನ್​ ರಾವತ್​ ಹಾಗೂ ರಕ್ಷಣಾ ಪಡೆಯ ಮೂರು ವಿಭಾಗಗಳ ಮುಖ್ಯಸ್ಥರ ಜತೆ ಮಂಗಳವಾರ ವಿಸ್ತೃತ ಚರ್ಚೆ ನಡೆಸಿದರು.

    ವಾಸ್ತವ ಗಡಿರೇಖೆಯ ಬಳಿ ಪ್ರಸ್ತುತ ಇರುವ ಪರಿಸ್ಥಿತಿ ಕುರಿತು ಸೇನಾಪಡೆ ಮುಖ್ಯಸ್ಥ ಜನರಲ್​ ಎಂ.ಎಂ. ನವರಾಣೆ ವಿವರಣೆ ನಿಡಿದರು. ಲೇಹ್​ಗೆ ದಿಢೀರ್​ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿ ಅವಲೋಕಿಸಿದ ನಂತರದಲ್ಲಿ ತಾವು ಪಡೆದುಕೊಂಡಿದ್ದ ಸಂಪೂರ್ಣ ವಿವರಗಳನ್ನು ರಕ್ಷಣಾ ಸಚಿವರಿಗೆ ನೀಡಿದರು.

    ಇದನ್ನೂ ಓದಿ: ಲಡಾಖ್​ನಲ್ಲಿ ಘರ್ಷಣೆ ವೇಳೆ ಅಮಾನವೀಯವಾಗಿ ವರ್ತಿಸಿದ ಚೀನಿ ಯೋಧರು

    ಮೇ 5ರಂದು ಮೊದಲ ಘರ್ಷಣೆ ಉಂಟಾದ ನಂತರದಲ್ಲಿ ಭಾರತ ಮತ್ತು ಚೀನಾದ ಸ್ಥಳೀಯ ಮುಖ್ಯಸ್ಥರ ನಡುವೆ ಆರು ಸುತ್ತಿನ ಮಾತುಕತೆ ನಡೆಸಿದೆ. ಈ ಮಾತುಕತೆಗಳೆಲ್ಲವೂ ವಿಫಲವಾಗಿವೆ. ಈ ಹಿನ್ನೆಲೆಯಲ್ಲಿ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ.

    ಚೀನಿ ಯೋಧರು ವಾಸ್ತವ ಗಡಿರೇಖೆಯ ಬಳಿ ಗಡಿಯೊಳಗೆ ಭಾರತ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಎಲ್ಲಿ ಹೇಗಿದೆಯೋ ಹಾಗೆ ಸ್ಥಗಿತಗೊಳಿಸಬೇಕು ಎಂಬುದು ಚೀನಿಯರ ಷರತ್ತಾಗಿದೆ. ಇದಕ್ಕೆ ಪ್ರತಿಯಾಗಿ ಭಾರತ ಕೂಡ ವಾಸ್ತವ ಗಡಿರೇಖೆಯುದ್ದಕ್ಕೂ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಚೀನಾಕ್ಕೆ ಷರತ್ತು ಹಾಕಿದೆ. ಆದರೆ ಈ ಷರತ್ತುಗಳನ್ನು ಒಪ್ಪಲು ಉಭಯ ಬಣಗಳು ನಿರಾಕರಿಸುತ್ತಿವೆ ಎನ್ನಲಾಗಿದೆ.

    ಸುಂದರಿ ಸಿಕ್ಕಳೆಂದು ಜತೆಗಿದ್ದವಳ ದೇಹ ತುಂಡರಿಸಿ ಸೂಟ್​ಕೇಸ್​ನಲ್ಲಿ ತುಂಬಿದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts