More

    ಬಣವಿಕಲ್ಲು ಗ್ರಾಮದಲ್ಲಿ ಮೆಕ್ಕೆಜೋಳ ನಾಶ

    ಕಾನಹೊಸಹಳ್ಳಿ: ಸಮೀಪದ ಬಣವಿಕಲ್ಲು ಗ್ರಾಮದಲ್ಲಿ ಎರಡು ದಿನಗಳಿಂದ ಕಾಡು ಹಂದಿಗಳು ಹಾವಳಿ ಹೆಚ್ಚಿದ್ದು, ಮೆಕ್ಕೆಜೋಳ ಬಿತ್ತನೆ ಬೀಜ ತಿಂದು ಹೊಲ ಹಾಳು ಮಾಡಿವೆ.

    ಗ್ರಾಮದ ಡಿ.ನಾಗರಾಜ ಅವರು ಎಂಟು ಎಕರೆಯಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದು, ಕಾಡು ಹಂದಿಗಳು ಭಾಗಶಃ ನಾಶಗೊಳಿಸಿವೆ. ಈವರೆಗೂ ನಿರೀಕ್ಷಿತ ಮಳೆಯಾಗದೇ ಆಗಾಗ್ಗೆ ಸುರಿದ ಅಲ್ಪ ಮಳೆಗೆ ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ. ಆದರೆ, ಬಿತ್ತಿದ ಬೀಜಗಳು ಕಾಡು ಹಂದಿಗಳ ಪಾಲಾಗುತ್ತಿವೆ.

    ಇದನ್ನೂ ಓದಿ: https://www.vijayavani.net/disabled-department-director-transfer-cancellation

    ರೈತರು ಬೀಜ, ಗೊಬ್ಬರ, ಬಿತ್ತನೆ ಕೂಲಿಗಾಗಿ ಎಕರೆಗೆ 10 ಸಾವಿರದಿಂದ 15 ಸಾವಿರ ರೂ. ಖರ್ಚು ಮಾಡಿದ್ದಾರೆ. ಬಿತ್ತನೆ ಮಾಡಿದ ದಿನದಿಂದ ಅಕ್ಕ ಪಕ್ಕದ ರೈತರೊಂದಿಗೆ ಹೊಲಕ್ಕೆ ಹೋಗಿ, ಹಗಲು ರಾತ್ರಿ ಹಂದಿಗಳನ್ನು ಕಾಯುತ್ತೇವೆ.

    ಯಾವುದೋ ಸಮಯದಲ್ಲಿ ಹಂದಿಗಳು ಬಂದು ಹೊಲವನ್ನು ಕೆದಕಿ, ಬಿತ್ತಿದ್ದ ಬೀಜವನ್ನು ತಿಂದು ಹಾಕುತ್ತಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಪರಿಹಾರ ಒದಗಿಸಬೇಕು. ಹಂದಿಗಳ ಹಾವಳಿ ತಪ್ಪಿಸಬೇಕು ಎಂದು ರೈತರು ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts