More

    ವೇಗಿ ಭುವನೇಶ್ವರ್ ಕುಮಾರ್‌ಗೆ ಮಾದರಿ ಯಾರು ಗೊತ್ತ….

    ನವದೆಹಲಿ: ಭಾರತದ ವೇಗಿ ಭುವನೇಶ್ವರ್ ಕುಮಾರ್ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರು ಎನ್ನುವುದರಲ್ಲಿ ಎರಡು ಮಾತಿಲ್ಲ. ಕೆಲ ವರ್ಷಗಳಿಂದ ರಾಷ್ಟ್ರೀಯ ತಂಡದ ಭಾಗವಾಗಿರುವ ಭುವನೇಶ್ವರ್ ಕುಮಾರ್ ಐಪಿಎಲ್ ಫ್ರಾಂಚೈಸಿ ಸನ್‌ರೈಸರ್ಸ್‌ ತಂಡಕ್ಕೆ ಪ್ರಮುಖ ಅಸವೂ ಆಗಿದ್ದಾರೆ. ಭಾರತೀಯ ಕ್ರಿಕೆಟ್‌ನಲ್ಲಿ ಡೆತ್ ಓವರ್ ಸ್ಪೆಷಲಿಸ್ಟ್ ಎನಿಸಿಕೊಂಡಿದ್ದಾರೆ. ಇದಕ್ಕೆ ಸನ್‌ರೈಸರ್ಸ್‌ ತಂಡವೇ ಕಾರಣ ಎನ್ನುತ್ತಾರೆ ಉತ್ತರಪ್ರದೇಶದ ಬೌಲರ್. ಸನ್‌ರೈಸರ್ಸ್‌ ಸೇರಿದ ಬಳಿಕ ವೃತ್ತಿಜೀವನಕ್ಕೆ ಮಹತ್ವ ತಿರುವು ಪಡೆಯಿತು ಎನ್ನುತ್ತಾರೆ ಭುವಿ. ಅದಕ್ಕಿಂತ ಹೆಚ್ಚಾಗಿ, ಮೈದಾನದಲ್ಲಿ ಅವರಿಗೆ ಮಾಜಿ ನಾಯಕ ಧೋನಿಯೇ ಮಾದರಿಯಂತೆ.

    ಇದನ್ನೂ ಓದಿ:ಕಿಂಗ್ಸ್ ಇಲೆವೆನ್ ಪಂಜಾಬ್ ಸುಂದರಿಯರಿಗೆ ಅಭಿಮಾನಿಗಳು ಫಿದಾ!

    ಜಸ್‌ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಮೊಹಮದ್ ಶಮಿಯಂಥ ಸ್ಟಾರ್ ವೇಗಿಗಳನ್ನು ಹೊಂದಿರುವ ಭಾರತದ ವೇಗದ ಬೌಲಿಂಗ್ ಪಡೆ ವಿಶ್ವದಲ್ಲೇ ಅತ್ಯುತ್ತಮವಾಗಿದೆ. ಅತ್ಯುತ್ತಮ ಯಾರ್ಕರ್ ಎಸೆತಗಳಿಗೆ ಹೆಸರಾಗಿರುವ ಭುವನೇಶ್ವರ್ ಕುಮಾರ್, ತಂಡದ ಪಾಲಿಗೆ ಆಧಾರ ಸ್ತಂಭವಾಗಿದ್ದಾರೆ. ಅದರಲ್ಲೂ ಐಪಿಎಲ್‌ನ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಪ್ರಮುಖ ಆಸವಾಗಿದ್ದಾರೆ. 2014ರಿಂದಲೂ ತಂಡದ ಪ್ರಮುಖ ಬೌಲರ್ ಆಗಿರುವ ಭುವನೇಶ್ವರ್, ಡೆತ್ ಓವರ್ ಎಸೆಯುವಾಗ ಒತ್ತಡ ಪರಿಸ್ಥಿತಿ ನಿಭಾಯಿಸುವುದನ್ನು ತಂಡದಿಂದ ಕಲಿತುಕೊಂಡೆ ಎನ್ನುತ್ತಾರೆ. ‘ಇನಿಂಗ್ಸ್‌ನ ಆರಂಭ ಹಾಗೂ ಕೊನೆಯಲ್ಲಿ ಬೌಲಿಂಗ್ ಮಾಡಬೇಕೆಂದು ತಂಡ ನನ್ನಿಂದ ಬಯಸುತ್ತದೆ’ ಎಂದು ಭುವಿ ಹೇಳಿದ್ದಾರೆ. ಮೈದಾನದಲ್ಲಿ ಧೋನಿ ಮಾದರಿಯನ್ನೇ ಅನುಸರಿಸಲು ಇಷ್ಟಪಡುತ್ತೇನೆ. ನನ್ನ ತನ ಉಳಿಸಿಕೊಂಡರೆ, ಲಿತಾಂಶ ತಾನಾಗಿಯೇ ಬರುತ್ತದೆ ಎಂದರು.ವೇಗಿ ಭುವನೇಶ್ವರ್ ಕುಮಾರ್‌ಗೆ ಮಾದರಿ ಯಾರು ಗೊತ್ತ....

    ಇದನ್ನೂ ಓದಿ:ನೆಪೋಟಿಸಂ: ಹಾಗಂತ ಎಲ್ಲರೂ ಉದ್ಧಾರ ಆದ್ರು ಅಂತ ಹೇಳೋದು ಕಷ್ಟ


    ಭಾರತ ತಂಡದ ಪರ 132 ಏಕದಿನ ಹಾಗೂ 63 ಟೆಸ್ಟ್ ವಿಕೆಟ್ ಕಬಳಿಸಿರುವ ಭುವನೇಶ್ವರ್‌ಕುಮಾರ್, ಇತ್ತೀಚಿನ ದಿನಗಳಲ್ಲಿ ಸರ್ವಶ್ರೇಷ್ಠ ಬೌಲರ್‌ಗಳ ಸಾಲಿನಲ್ಲಿ ನಿಲ್ಲುತ್ತಾರೆ. ಲಾಕ್‌ಡೌನ್‌ನ ಆರಂಭಿಕ 15 ದಿನಗಳ ಕಾಲ ಸಾಕಷ್ಟು ಕಷ್ಟವಾಯಿತು. ಬಳಿಕ ದಿನ ಕಳೆದಂತೆ ಎಲ್ಲವೂ ಸರಿಯಾಯಿತು ಎಂದು ಹೇಳುತ್ತಾರೆ ಭುವನೇಶ್ವರ್ ಕುಮಾರ್.

    ಚಹಾ ಕುಡಿಯುವಾಗ ಹೊಳೆದಿತ್ತು ಐಪಿಎಲ್ ಆಟಗಾರರ ಹರಾಜು ಕಾನ್ಸೆಪ್ಟ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts