More

    ಮಾರಕ ದುಶ್ಚಟಗಳಿಂದ ದೂರವಿರಿ

    ದೇವರಹಿಪ್ಪರಗಿ: ಮದ್ಯ ಸೇರಿದಂತೆ ಮಾದಕ ಹಾಗೂ ಮಾರಕ ದುಶ್ಚಟಗಳಿಂದ ದೂರವಿದ್ದಾಗ ಮಾತ್ರ ದೈನಂದಿನ ಜೀವನ ಸುಖಮಯ, ಸುಗಮವಾಗಿ ಸಾಗಲು ಸಾಧ್ಯ ಎಂದು ಗದ್ದುಗೆಮಠದ ಮಡಿವಾಳೇಶ್ವರ ಸ್ವಾಮೀಜಿ ಹೇಳಿದರು.

    ಪಟ್ಟಣದ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಬುಧವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ದೇವರಹಿಪ್ಪರಗಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 1699ನೇ ಮದ್ಯವರ್ಜನ ಶಿಬಿರಕ್ಕೆ ದೀಪ ಬೆಳಗಿಸಿ ಅವರು ಚಾಲನೆ ನೀಡಿ ಮಾತನಾಡಿದರು.

    12ನೇ ಶತಮಾನದಲ್ಲೇ ಶರಣರು ತಮ್ಮ ವಚನಗಳ ಮೂಲಕ ದುಶ್ಚಟಗಳಿಂದ ದೂರವಿರುವಂತೆ ನಮ್ಮನ್ನೆಲ್ಲ ಎಚ್ಚರಿಸಿದ್ದಾರೆ ಎಂದರು.
    ಮಾಜಿ ಶಾಸಕ ಸೋಮನಗೌಡ ಪಾಟೀಲ (ಸಾಸನೂರ), ಖ್ಯಾತ ನೇತ್ರತಜ್ಞ ಪ್ರಭುಗೌಡ ಲಿಂಗದಳ್ಳಿ (ಚಬನೂರ), ಪಿಎಸ್‌ಐ ಆರ್.ವೈ.ಬೀಳಗಿ, ಶಿಬಿರದ ಅಧ್ಯಕ್ಷ ಪಿ.ಎಸ್.ಮಿಂಚನಾಳ ಮಾತನಾಡಿದರು. ಜನಜಾಗೃತಿ ವೇದಿಕೆ ಪ್ರಾದೇಶಿಕ ಕಚೇರಿ ಕಲಬುರಗಿಯ ರಾಜೇಶ ಪ್ರಾಸ್ತಾವಿಕವಾಗಿ ಮಾತನಾಡಿದರು.

    ಗೌರವಾಧ್ಯಕ್ಷ ಡಾ. ಆರ್.ಆರ್. ನಾಯಿಕ, ಸಂಚಾಲಕ ಗಿರೀಶಕುಮಾರ, ಹೆಸ್ಕಾಂ ಎಇಇ ವಿಜಯಕುಮಾರ ಹವಾಲ್ದಾರ್, ಪಟ್ಟಣ ಪಂಚಾಯಿತಿ ಸದಸ್ಯ ರಮೇಶ ಮಸಬಿನಾಳ, ಬಸಯ್ಯ ಮಲ್ಲಿಕಾರ್ಜುನಮಠ, ಎಸ್.ಎನ್. ಬಸವರಡ್ಡಿ, ಸಿ.ಕೆ. ಕುದರಿ, ಬಂಡೆಪ್ಪ ದಿಂಡವಾರ, ಎ.ಎಚ್. ವಾಲಿಕಾರ, ಜಿ.ಪಿ. ಬಿರಾದಾರ, ಸೋಮಶೇಖರ ಹಿರೇಮಠ, ವೀರೇಶ ಕುದರಿ, ಆನಂದ ಜಡಿಮಠ, ಈರಣ್ಣ ವಸದ, ಸಂಗಮೇಶ ಹಳಿಮನಿ, ರಾಜು ದೇವರಮನಿ, ಬಾಬುರಾವ್ ಗೋಣಿ, ವಿಶ್ವನಾಥ ಸದಲಗೆ, ಎಸ್.ವಿ. ಕೋಟಿನ್, ಎಂ.ಜಿ. ಯಂಕಂಚಿ ಸೇರಿದಂತೆ 80ಕ್ಕೂ ಹೆಚ್ಚು ಶಿಬಿರಾರ್ಥಿಗಳು, ಸೇವಾಪ್ರತಿನಿಧಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts