More

    ಪಾರ್ಲಿಮೆಂಟ್​ ಒಪ್ಪಿಗೆ ನೀಡಿದ ಕಾಯ್ದೆಗಳನ್ನು ಜಾರಿ ಮಾಡುವುದಿಲ್ಲ ಎಂದು ರಾಜ್ಯಗಳು ಹೇಳುವಂತಿಲ್ಲ: ಕಾಂಗ್ರೆಸ್​ ಹಿರಿಯ ಮುಖಂಡ ಕಪಿಲ್​ ಸಿಬಿಲ್​

    ಕೋಳಿಕ್ಕೋಡ್​ (ಕೇರಳ): ಪಾರ್ಲಿಮೆಂಟ್​ನಲ್ಲಿ ಒಪ್ಪಿಗೆ ಪಡೆದ ಕಾಯ್ದೆಗಳನ್ನು ರಾಜ್ಯಗಳು ಜಾರಿ ತರಲಾಗುವುದಿಲ್ಲ ಎಂದು ಹೇಳುವಂತಿಲ್ಲ ಎಂದು ಕಾಂಗ್ರೆಸ್​ ಹಿರಿಯ ಮುಖಂಡ ಕಪಿಲ್​ ಸಿಬಲ್​ ಅಭಿಪ್ರಾಯಪಟ್ಟಿದ್ದಾರೆ.

    ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ ಬಗ್ಗೆ ವಿವಿಧ ರಾಜ್ಯಗಳು ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿವೆ. ಆದರೆ ಎನ್​ಆರ್​ಸಿ ಸ್ಥಳೀಯ ನೋಂದಣಾಧಿಕಾರಿಗಳಿಂದ ಆಗುವಂತದ್ದು ಎಂದರು.

    ಕೇರಳ ಸಾಹಿತ್ಯ ಉತ್ಸವದಲ್ಲಿ ಭಾಗವಹಿಸಿದ್ದ ಕಪಿಲ್​ ಸಿಬಲ್​ ಅವರು, ಸಾಂವಿಧಾನಿಕವಾಗಿ ರಾಜ್ಯಗಳು ಸಂಸತ್​ನಿಂದ ಹೊರಬಂದ ಕಾಯ್ದೆಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಹೇಳುವಂತಿಲ್ಲ ಎಂದರು.

    ಹೀಗೆ ರಾಜ್ಯಗಳು ತಮ್ಮ ವಿರೋಧ ಅಭಿಪ್ರಾಯವನ್ನು ಹೊಂದಿದ್ದರೆ ಆಗ ನಾವು ಸುಪ್ರೀಂಕೋರ್ಟ್​ನ ತೀರ್ಮಾನಕ್ಕಾಗಿ ಕಾಯಬೇಕಾಗುತ್ತದೆ ಎಂದು ಹೇಳಿದರು.

    ಸಿಎಎಯನ್ನು ಕಳೆದ ತಿಂಗಳು ಒಪ್ಪಿದ ಸಂಸತ್​ ಮೊದಲ ಬಾರಿಗೆ ಪೌರತ್ವದ ವಿಷಯವನ್ನು ಧಾರ್ಮಿಕವಾಗಿ ನೋಡಿತು ಎಂದು ಅವರು ಅಭಿಪ್ರಾಯಪಟ್ಟರು. ಇನ್ನೊಂದು ಕಡೆ ನಾಗರಿಕ ನೋಂದಣಿ ಬಗ್ಗೆಯೂ ಅಪಸ್ವರವಿದೆ. ಇದು ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲಿದೆ. ಇದು ಮುಗಿಯುವ ಹೊತ್ತಿಗೆ ಮುಸ್ಲಿಂರನ್ನು ಸಂಕಷ್ಟಕ್ಕೆ ತಂದೊಡ್ಡುತ್ತದೆ ಎಂದರು.

    ಇಂದು ಬೆಳಗ್ಗೆ ಅವರು ಮಾಡಿದ ಟ್ವೀಟ್​ನಲ್ಲಿ, ಸಿಎಎಯನ್ನು ಅಸಾಂವಿಧಾನಿಕ ಎಂದು ಕಪಿಲ್​ ಕರೆದಿದ್ದರು, ಅಲ್ಲದೆ, ಇದನ್ನು ರಾಜ್ಯಗಳು ಇದನ್ನು ತಿರಸ್ಕರಿಸಲು ಒತ್ತಾಯಿಸಬೇಕು. ಆದರೆ ಯಾವ ಕಾಯ್ದೆಯನ್ನು ಸುಪ್ರೀಂಕೋರ್ಟ್​ ಅನುಮೋದಿಸುತ್ತದೋ ಅಂತಹದ್ದನ್ನು ವಿರೋಧಿಸಲು ಸಾಧ್ಯವಿಲ್ಲ ಎಂದು ಬರೆದಿಕೊಂಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts