More

    ಸದಸ್ಯತ್ವ ನೋಂದಣಿ ಅವಧಿ ವಿಸ್ತರಿಸಿದ ರಾಜ್ಯ ಒಕ್ಕಲಿಗರ ಸಂಘ

    ಬೆಂಗಳೂರು: ಸಮುದಾಯದ ಜನರಿಂದ ಬೇಡಿಕೆ ಬಂದ ಹಿನ್ನೆಲೆಯಲ್ಲಿ ರಾಜ್ಯ ಒಕ್ಕಲಿಗರ ಸಂಘ, ಹೊಸ ಸದಸ್ಯತ್ವ ಪಡೆಯಲು ನೀಡಿದ್ದ ಕಾಲಾವಕಾಶವನ್ನು ಮತ್ತೆ ಮುಂದಿನ ಮೂರು ತಿಂಗಳ ಕಾಲ ವಿಸ್ತರಿಸಿದೆ.

    ಫೆ.17ರಿಂದ ಆ.31ರವರೆಗೆ ಸದಸ್ಯತ್ವ ಪಡೆಯಲು ಅವಕಾಶ ನೀಡಲಾಗಿತ್ತು. ಆದರೆ, ಸಮುದಾಯದ ಜನರಿಂದ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಸಂಘವು, ಸೆ.1ರಿಂದ ನ.30ರವರೆಗೆ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಲು ಮತ್ತೊಂದು ಅವಕಾಶ ನೀಡಲಾಗಿತ್ತು. ಇದೀಗ ಸಮುದಾಯ ಜನರಿಂದ ಮತ್ತೊಮ್ಮೆ ಸದಸ್ಯತ್ವ ಅವಧಿ ವಿಸ್ತರಿಸುವಂತೆ ಬೇಡಿಕೆ ಬಂದಿದೆ. ಈ ಕಾರಣಕ್ಕಾಗಿ ಡಿ.1ರಿಂದ ಮುಂದಿನ ಮೂರು ತಿಂಗಳ ಕಾಲ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಲು ಕಾಲಾವಕಾಶ ವಿಸ್ತರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಡಿ.ಹನುಮಂತಯ್ಯ ಮಾಹಿತಿ ನೀಡಿದರು.

    ಫೆ.17ರಿಂದ ಆ.31ರವರೆಗೆ ಸಂಘದ ಸದಸ್ಯತ್ವ ಪಡೆಯಲು ಅರ್ಜಿ ಸಲ್ಲಿಕೆಗೆ ಚಾಲನೆ ನೀಡಲಾಗಿತ್ತು. ಈ ಅವಧಿಯಲ್ಲಿ ಆಪ್‌ಲೈನ್‌ನಲ್ಲಿ 49,522 ಮಂದಿ ಹಾಗೂ ಆನ್‌ಲೈನ್‌ನಲ್ಲಿ 7,637 ಮಂದಿ ಸೇರಿ ಒಟ್ಟು 56,889 ಮಂದಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಶುಲ್ಕ 8.5 ಕೋಟಿ ರೂ.ಸಂಗ್ರಹವಾಗಿತ್ತು. ಸೆ.1ರಿಂದ ನ.30ರವರೆಗೆ ಸಾವಿರಾರು ಮಂದಿ ಅರ್ಜಿ ಸಲ್ಲಿಸಿದ್ದು, ಹತ್ತಾರು ಕೋಟಿ ರೂ. ಹಣ ಸಂಗ್ರಹವಾಗಿದೆ. ಆಯಾ ಜಿಲ್ಲೆಯ ಡಿಸಿಸಿ ಬ್ಯಾಂಕ್‌ಗಳಲ್ಲಿ 1,650 ರೂ.ಶುಲ್ಕ ಪಾವತಿಸಿ ಅರ್ಜಿ ಪಡೆಯಬಹುದು. ಅರ್ಜಿ ಪಡೆದ ದಿನದಿಂದ 30 ದಿನದೊಳಗೆ ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ ಅಥವಾ ಶಾಲಾ ಟಿಸಿ, ಎರಡು ಭಾವಚಿತ್ರ ಸಹಿತ ಇತರ ದಾಖಲೆಗಳೊಂದಿಗೆ ಅರ್ಜಿಯನ್ನು ಬ್ಯಾಂಕಿಗೆ ಹಿಂದಿರುಗಿಸಬೇಕು. 18 ವರ್ಷ ತುಂಬಿದವರು ಸದಸ್ಯತ್ವ ಪಡೆಯಬಹುದು.

    ಇದನ್ನೂ ಓದಿ:ರೂ. 45,000 ಕೋಟಿ ಬೆಲೆಯ ಖನಿಜಗಳ ಗಣಿ ಹರಾಜು; ಜಗತ್ತಿನ ಉದ್ದಿಮೆದಾರರನ್ನು ಆಹ್ವಾನಿಸಿದ ಪ್ರಲ್ಹಾದ ಜೋಶಿ

    ಬೆಂಗಳೂರು, ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ದಕ್ಷಿಣ ಕನ್ನಡ, ಶಿವಮೊಗ್ಗ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಸೇರಿ ರಾಜ್ಯದ 11 ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದ ಜನರು ಇದ್ದಾರೆ. ಸಂಘದಲ್ಲಿ ಸದ್ಯ 5,22,454 ಮಂದಿ ಅಜೀವ ಸದಸ್ಯತ್ವ ಪಡೆದಿದ್ದಾರೆ. ಹಿಂದೆ ಸಂಘದಲ್ಲಿ ಸಂಗ್ರಹವಾಗಿದ್ದ ಶುಲ್ಕದ ಮೊತ್ತ 88 ಕೋಟಿ ರೂ. ಹಣವನ್ನು ಬ್ಯಾಂಕಿನಲ್ಲಿ ಠೇವಣಿ ರೂಪದಲ್ಲಿ ಇಡಲಾಗಿದ್ದು, ಇದರಿಂದ ಬರುವ ಬಡ್ಡಿ ಹಣವನ್ನು ಸಂಘದ ಅಭ್ಯುದಯಕ್ಕೆ ಬಳಸಿಕೊಳ್ಳಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts