More

    ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ 28ಕ್ಕೆ

    ಚಿತ್ರದುರ್ಗ: ಕುಸ್ತಿ ಅಭಿವೃದ್ಧಿ ಸಂಘದಿಂದ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಫೆ.28ರಂದು 6ನೇ ರಾಜ್ಯಮಟ್ಟದ ಹೊನಲು ಬೆಳಕಿನ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಭರತ್ ಪೈಲ್ವಾನ್ ತಿಳಿಸಿದ್ದಾರೆ.

    ಮಹಾರಾಷ್ಟ್ರ, ಹರಿಯಾಣ, ಕರ್ನಾಟಕ ರಾಜ್ಯದ ವಿವಿಧೆಡೆಯ 80 ಪುರುಷರು, 20 ಮಹಿಳೆಯರು ಸೇರಿ 100 ಮಂದಿ ಪಟುಗಳು ಭಾಗವಹಿಸುತ್ತಿದ್ದಾರೆ.
    ಪಂದ್ಯಾವಳಿಯಲ್ಲಿ ಗೆದ್ದಂತಹ ಪುರುಷ ಕುಸ್ತಿಪಟುವಿಗೆ ಮದಕರಿನಾಯಕ ಕೇಸರಿ, ದುರ್ಗದ ಹುಲಿ, ಗದೆ ಹಾಗೂ ಮಹಿಳಾ ಕುಸ್ತಿಪಟುವಿಗೆ ವೀರವನಿತೆ ಒನಕೆ ಓಬವ್ವ ಬಿರುದು, ಪಟ್ಟದ ಕತ್ತಿ ನೀಡಿ ಸನ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

    ದೇಶೀಯ ಕ್ರೀಡೆಗಳಿಗೆ ಪ್ರೋತ್ಸಾಹದ ಅಗತ್ಯವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.

    *ಕೋಟ್
    ಶತ್ರುಗಳನ್ನು ಸದೆ ಬಡಿಯಲು ರಾಜರು, ಪಾಳೆಗಾರರು ಗರಡಿ ಮನೆಗಳಲ್ಲಿ ಕುಸ್ತಿ ಅಭ್ಯಾಸ ಮಾಡುತ್ತಿದ್ದರು. ಇದರಿಂದ ದೇಹಾರೋಗ್ಯ ಸದೃಢವಾಗಿರುತ್ತಿತ್ತು. ಆದರೆ, ಪ್ರಸ್ತುತ ದಿನಗಳಲ್ಲಿ ಕುಸ್ತಿ ಪಂದ್ಯಾವಳಿಗೆ ಆಸಕ್ತಿ ಕಡಿಮೆಯಾಗುತ್ತಿದೆ. ಇದರ ಮಹತ್ವ ಸಾರಲು ಪಂದ್ಯಾವಳಿ ಆಯೋಜಿಸುತ್ತಿದ್ದೇವೆ.
    ಜಗನ್, ಸಂಘದ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts