More

    ವಾಲಿವಧೆ ಪ್ರಥಮ, ತುರುಬ ಕಟ್ಟುವ ಹದನ ದ್ವಿತೀಯ: ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ ಫಲಿತಾಂಶ ಪ್ರಕಟ

    ಉಡುಪಿ: ದಿ.ಡಾ.ಟಿ.ಎಂ.ಎ.ಪೈ, ದಿ.ಎಸ್.ಎಲ್.ನಾರಾಯಣ ಭಟ್ ಮತ್ತು ದಿ.ಮಲ್ಪೆ ಮಧ್ವರಾಜ್ ಸ್ಮಾರಕ 43ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯಲ್ಲಿ ಹಾವೇರಿ ಶ್ರೀ ಗಜಾನನ ಯುವಕ ಮಂಡಲದ ‘ವಾಲಿವಧೆ’ ಪ್ರಥಮ, ತೀರ್ಥಹಳ್ಳಿ ನಟಮಿತ್ರರು ತಂಡ ‘ತುರುಬ ಕಟ್ಟುವ ಹದನ’ ದ್ವಿತೀಯ, ಬೈಕಾಡಿ ಉಡುಪಿ ಮಂದಾರ ತಂಡದ ‘ಕೊಳ್ಳಿ’ ನಾಟಕ ತೃತೀಯ ಸ್ಥಾನ ಪಡೆದುಕೊಂಡಿದೆ.

    ಶ್ರೇಷ್ಠ ನಿರ್ದೇಶನ: ಪ್ರಥಮ- ಗಣೇಶ್ ಮಂದಾರ್ತಿ(ವಾಲಿವಧೆ), ದ್ವಿತೀಯ- ಶ್ರೀಕಾಂತ್ ಕುಮಟಾ (ತುರುಬ ಕಟ್ಟುವ ಹದನ), ತೃತೀಯ- ಜೋಸೆಫ್ ಜಾನ್ (ತದ್ರೂಪಿ).

    ಶ್ರೇಷ್ಠ ನಟ: ಪ್ರಥಮ- ವಾಲಿವಧೆ ನಾಟಕದ ವಾಲಿ ಪಾತ್ರಧಾರಿ ದೇವಿಪ್ರಸಾದ ವೈ., ದ್ವಿತೀಯ- ವಾಲಿವಧೆ ನಾಟಕದ ಸುಗ್ರೀವ ಪಾತ್ರಧಾರಿ ಸಿದ್ದು ಎಸ್.ಕೆ., ತೃತೀಯ- ತದ್ರೂಪಿ ನಾಟಕದ ಜನರಲ್ ಪೋಪಟ್ ಪಾತ್ರಧಾರಿ ಕೀರ್ತಿಭಾನು ಎಂ.ವಿ.

    ಶ್ರೇಷ್ಠ ನಟಿ: ಪ್ರಥಮ- ಕೊಳ್ಳಿ ನಾಟಕದ ದ್ರೌಪದಿ ಪಾತ್ರಧಾರಿ ಪ್ರಿಯಾ ಬ್ರಹ್ಮಾವರ, ದ್ವಿತೀಯ- ಅರುಂಧತಿ ಆಲಾಪ ನಾಟಕದ ಅರುಂಧತಿ ಪಾತ್ರಧಾರಿ ಪ್ರಜ್ಞಾಶ್ರೀ ಮತ್ತು ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ ನಾಟಕದ ಶೀಲಾವತಿ ಪಾತ್ರಧಾರಿ ರಂಜಿತಾ ಶೇಟ್, ತೃತೀಯ- ಕೊಳ್ಳಿ ನಾಟಕದ ಉಜ್ಜಿ ಪಾತ್ರಧಾರಿ ಶ್ವೇತಾ ಮಣಿಪಾಲ.

     ಶ್ರೇಷ್ಠ ಸಂಗೀತ: ಪ್ರಥಮ- ಅನುಷ್ ಶೆಟ್ಟಿ, ಮುನ್ನ, ಗಣೇಶ್ (ನಾಟಕ ವಾಲಿವಧೆ), ದ್ವಿತೀಯ- ಶ್ರೀಪಾದ್ ತೀರ್ಥಹಳ್ಳಿ (ತುರುಬ ಕಟ್ಟುವ ಹದನ), ತೃತೀಯ- ಲೋಹಿತ್ ಕೊಮೆ (ಕೊಳ್ಳಿ).

    ಶ್ರೇಷ್ಠ ರಂಗಸಜ್ಜಿಕೆ ಮತ್ತು ರಂಗಪರಿಕರ: ಪ್ರಥಮ- ತುರುಬ ಕಟ್ಟುವ ಹದನ, ದ್ವಿತೀಯ- ವಾಲಿವಧೆ, ತೃತೀಯ-ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ.

    ಶ್ರೇಷ್ಠ ಪ್ರಸಾಧನ: ಪ್ರಥಮ- ನಿರಂಜನ್ ಪವರ್ (ತುರುಬ ಕಟ್ಟುವ ಹದನ), ದ್ವಿತೀಯ- ಪೃಥ್ವಿನ್ ಕೆ.ವಾಸು (ವಾಲಿವಧೆ), ತೃತೀಯ- ರಮೇಶ್ ಕಪಿಲೇಶ್ವರ (ಕೊಳ್ಳಿ).

    ಶ್ರೇಷ್ಠ ರಂಗ ಬೆಳಕು: ಪ್ರಥಮ- ರಾಜು ಮಣಿಪಾಲ (ಕೊಳ್ಳಿ), ದ್ವಿತೀಯ- ಪೃಥ್ವಿನ್ ಕೆ.ವಾಸು (ವಾಲಿವಧೆ), ತೃತೀಯ- ಚಂದನ್ ಶಿವಮೊಗ್ಗ (ತುರುಬ ಕಟ್ಟುವ ಹದನ).

    ಶ್ರೇಷ್ಠ ಹಾಸ್ಯ ನಟನೆ: ತುರುಬ ಕಟ್ಟುವ ಹದನ ನಾಟಕದ ಉತ್ತರ ಕುಮಾರ ಪಾತ್ರಧಾರಿ ನಂದನ್ ಎಂ.ಎಸ್.

    ಶ್ರೇಷ್ಠ ಬಾಲ ನಟ: ಹಾವೇರಿ ತಂಡದ ವಾಲಿವಧೆ ನಾಟಕದ ಬಾಲ ಸುಗ್ರೀವ ಪಾತ್ರಧಾರಿ ಉದಯ್ ಬಿ.

    ಮೆಚ್ಚುಗೆ ಬಹುಮಾನ: ಸುಯೋಧನ ನಾಟಕದ ಸುಯೋಧನ ಪಾತ್ರಧಾರಿ ಶಿವು ಹೊನ್ನಿಗನ ಹಳ್ಳಿ, ಸಂಚಯ ಟ್ರಸ್ಟ್ ಬೆಂಗಳೂರು ತದ್ರೂಪಿ ನಾಟಕದ ತದ್ರೂಪಿ ಪಾತ್ರಧಾರಿ ಕೃಷ್ಣ ಹೆಬ್ಬಾರ್, ಭೂಮಿಕಾ ಹಾರಾಡಿ ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ ನಾಟಕ ಓಕ್ಕಾಕ ಪಾತ್ರಧಾರಿ ಸುನೀಲ್ ಪಾಂಡೇಶ್ವರ, ನಟ ಮಿತ್ರರು ತೀರ್ಥಹಳ್ಳಿ ತುರುಬ ಕಟ್ಟುವ ಹದನ ನಾಟಕದ ದುರ್ಯೋಧನ ಪಾತ್ರಧಾರಿ ಶರತ್ ಕುಮಾರ್ ಇ.ಜಿ., ರಂಗಪಯಣ ಬೆಂಗಳೂರು ತಂಡದ ಫೂಲನ್‌ದೇವಿ ನಾಟಕದ ಫೂಲನ್‌ದೇವಿ ಪಾತ್ರಧಾರಿ ನಯನಾ ಜೆ. ಸೂಡ.

    ತೀರ್ಪುಗಾರರಾಗಿ ಉಡುಪಿ ಕೆ.ಲಕ್ಷ್ಮೀನಾರಾಯಣ ಭಟ್, ಪ್ರಭಾಕರ್ ಜಿ.ಪಿ.ತುಮುರಿ, ಛಾಯಾ ಭಾರ್ಗವಿ ಬೆಂಗಳೂರು, ಸಿದ್ದರಾಜು ಎಸ್.ಎಸ್.ದಾವಣಗೆರೆ, ರಿಯಾಜ್ ಸಿಹಿಮೊಗೆ ಕಾರ್ಯನಿರ್ವಹಿಸಿದರು. ಜನವರಿ 3ನೇ ವಾರದಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts