More

    ಉದ್ಯೋಗ ಮತ್ತು ಬಡ್ತಿಗಳಲ್ಲಿ ಮೀಸಲಾತಿ ಒದಗಿಸುವುದು ರಾಜ್ಯ ಸರ್ಕಾರದ ಹೊಣೆಯಲ್ಲ: ಸುಪ್ರೀಂ ಕೋರ್ಟ್

    ನವದೆಹಲಿ: ಉದ್ಯೋಗ ಮತ್ತು ಬಡ್ತಿಗಳಲ್ಲಿ ಮೀಸಲಾತಿ ಒದಗಿಸುವುದು ರಾಜ್ಯ ಸರ್ಕಾರಗಳ ಹೊಣೆಗಾರಿಕೆ ಅಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಅಲ್ಲದೆ, ಬಡ್ತಿಯಲ್ಲಿ ಮೀಸಲು ಕೇಳುವುದಕ್ಕೆ ಯಾವುದೇ ಮೂಲಭೂತ ಹಕ್ಕೂ ಇಲ್ಲ ಎಂದು ಹೇಳಿದೆ.

    ನ್ಯಾಯಮೂರ್ತಿಗಳಾದ ಎಲ್​.ನಾಗೇಶ್ವರ ರಾವ್​ ಮತ್ತು ಹೇಮಂತ್ ಗುಪ್ತಾ ಅವರನ್ನು ಒಳಗೊಂಡ ನ್ಯಾಯಪೀಠ ಇದನ್ನು ಸ್ಪಷ್ಟಪಡಿಸಿದ್ದು, ಕಾನೂನು ಪ್ರಕಾರ ರಾಜ್ಯ ಸರ್ಕಾರ ಮಾಡಿದ್ದು ಸರಿ ಇದೆ. ಮೀಸಲಾತಿ ಒದಗಿಸುವ ಕೆಲಸ ರಾಜ್ಯ ಸರ್ಕಾರದ್ದಲ್ಲ. ಅದರಲ್ಲೂ ವ್ಯಕ್ತಿಯೊಬ್ಬರಿಗೆ ಬಡ್ತಿಯಲ್ಲಿ ಮೀಸಲು ಕೇಳಿ ಪಡೆಯಲು ಯಾವುದೇ ಮೂಲಭೂತ ಹಕ್ಕುಗಳ ಇಲ್ಲ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಕೋರ್ಟ್ ನಿರ್ದೇಶನ ನೀಡುವುದು ಸಾಧ್ಯವಿಲ್ಲ ಎಂದು ಹೇಳಿದೆ.

    ಆದಾಗ್ಯೂ, ಒಂದೊಮ್ಮೆ ರಾಜ್ಯ ಸರ್ಕಾರ ತನ್ನ ವಿವೇಚನಾಧಿಕಾರ ಬಳಸಿಕೊಂಡು ಅಂತಹ ಮೀಸಲು ಒದಗಿಸಿದರೆ, ಆಗ ಲೋಕ ಸೇವಾ ಸ್ತರದಲ್ಲಿ ಮೀಸಲು ವಿಭಾಗದ ಪ್ರಾತಿನಿಧ್ಯದಲ್ಲಿರುವ ಕೊರತೆಗೆ ಸಂಬಂಧಿಸಿತ ಡೇಟಾ ತೋರಿಸಬೇಕು ಎಂದು ಕೋರ್ಟ್​ ಸ್ಪಷ್ಟಪಡಿಸಿದೆ.

    ಉತ್ತರಾಖಂಡ ಸರ್ಕಾರ 2012ರ ಸೆಪ್ಟೆಂಬರ್​ನಲ್ಲಿ ಪ್ರಕಟಿಸಿದ್ದ ಅಧಿಸೂಚನೆ ಪ್ರಕಾರ, ಬಡ್ತಿಯಲ್ಲಿ ಮೀಸಲು ಒದಗಿಸಲು ಸರ್ಕಾರ ಬಾಧ್ಯಸ್ಥವಾಗಿರುವುದಿಲ್ಲ. ಹೀಗಾಗಿ ಸರ್ಕಾರದ ನಿರ್ಧಾರವನ್ನು ಹೈಕೋರ್ಟ್ ಅಕ್ರಮ ಎಂದು ಘೋಷಿಸುವಂತಿಲ್ಲ.ಸಾರ್ವಜನಿಕ ಹುದ್ದೆಗಳ ಬಡ್ತಿ, ನೇಮಕಾತಿಗಳಲ್ಲಿ ಮೀಸಲಾತಿ ಬೇಕೋ ಬೇಡವೋ ಎಂಬುದನ್ನು ನಿರ್ಧರಿಸುವ ಹಕ್ಕು ಸರ್ಕಾರದ್ದು ಎಂದು ಅದು ವಿವರಿಸಿದೆ.

    ಉತ್ತರಾಖಂಡ ಸರ್ಕಾರ 2012ರ ಸೆಪ್ಟೆಂಬರ್​ 5ರಂದು ರಾಜ್ಯದಲ್ಲಿನ ಲೋಕ ಸೇವಾ ಹುದ್ದೆಗಳ ಭರ್ತಿಗೆ ತೀರ್ಮಾನ ತೆಗೆದುಕೊಂಡಿತ್ತು. ಆಗ, ಎಸ್​ಸಿ, ಎಸ್​​ಟಿಗಳಿಗೆ ಮೀಸಲು ಒದಗಿಸುವುದನ್ನು ಕೈಬಿಟ್ಟಿತ್ತು. ಸರ್ಕಾರ ಈ ನಿರ್ಧಾರವನ್ನು ಉತ್ತರಾಖಂಡ ಹೈಕೋರ್ಟ್​ನಲ್ಲಿ ಪ್ರಶ್ನಿಸಲಾಗಿತ್ತು. ಅಲ್ಲಿ ತೀರ್ಪು ಸರ್ಕಾರದ ನಿಲುವಿನ ಪರವಾಗಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts