More

    ರಾಜ್ಯದ ಪಾಲಿನ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿಲ್ಲ, ಸೋತವರನ್ನು ಹೇಗೆ ಮಂತ್ರಿ ಮಾಡ್ತಾರೆ: ಮಾಜಿ ಸಿಎಂ ಸಿದ್ದರಾಮಯ್ಯ

    ಗದಗ: ರಾಜ್ಯ, ಕೇಂದ್ರ ಸರ್ಕಾರಗಳ ಖಜಾನೆ ಖಾಲಿಯಾಗಿವೆ. ಕೇಂದ್ರ ಸರ್ಕಾರ ರಾಜ್ಯದ ಪಾಲಿನ ತೆರಿಗೆ ಹಣ ನೀಡಿಲ್ಲ. ನರೇಗಾ ಹಣವನ್ನೂ ಬಿಡುಗಡೆ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.

    ಸಿಂಗಟಾಲೂರ ಗ್ರಾಮದಲ್ಲಿ ಸರ್ಕಾರಗಳ ವಿರುದ್ಧ ಕಿಡಿ ಕಾರಿದ ಮಾಜಿ ಸಿಎಂ, ಕೇಂದ್ರದಲ್ಲೇ ಹಣ ಇಲ್ಲ. ಅಂದಮೇಲೆ ರಾಜ್ಯಕ್ಕೆ ಹಣ ನೀಡಿಲ್ಲ ಎಂದರು.

    ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪೆದ್ದರಂತೆ ಮಾತನಾಡ್ತಾರೆ. ಅದಕ್ಕೆ ನಾನೇನು ಹೇಳಲಿ. ಹಣವೇ ಇಲ್ಲಾಂದ್ರೆ ಬಜೆಟ್​ನಲ್ಲಿ ಎಲ್ಲಿಂದ ಬರುತ್ತೆ ಎಂದು ಪ್ರಶ್ನಿಸಿದರು. ಕೇಂದ್ರ ಸರ್ಕಾರದ ತೆರಿಗೆ ವಸೂಲಿಯಲ್ಲಿ 2 ಲಕ್ಷ ಕೋಟಿ ಕಡಿಮೆ ಆಗಿದೆ. ಖಜಾನೆ ಖಾಲಿಯಾಗಿದೆ ಎಂದರೆ, ಇವರು ತೆರಿಗೆ ತೆರಿಗೆ ಹಣ ವಸೂಲಿ ಮಾಡಿಲ್ಲ. ಹೀಗಾಗಿ ಖಜಾನೆ ಖಾಲಿಯಾಗಿದೆ ಎಂದರು.

    ಸೋತವರಿಗೇಕೆ ಮಂತ್ರಿ ಪದವಿ:  ಹೊಸ ಶಾಸಕರಿಗೆ ಸಚಿವ ಸ್ಥಾನ ಕೊಟ್ರೆ ಒಳ್ಳೆಯದು ಎಂದು ಅಭಿಪ್ರಾಯ ಪಟ್ಟ ಸಿದ್ದರಾಮಯ್ಯ, ಲೂಟಿ ಹೊಡೆಯೋದು ತಪ್ಪುತ್ತೆ ಎಂದು ಪರೋಕ್ಷವಾಗಿ ಈಗಿನ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು.

    ಸೋತವರಿಗೆ ಯಾಕೇ ಸಚಿವ ಸ್ಥಾನ ಕೊಡ್ತಾರೆ. ಚುನಾವಣೆಯಲ್ಲಿ ಸೋತವರಿಗೆ ಮಂತ್ರಿ ಮಾಡ್ತಾರಾ ಎನ್ನುವ ಮೂಲಕ ಎಚ್ ವಿಶ್ವನಾಥ್, ಎಂಟಿಬಿ ನಾಗರಾಜ್ ವಿರುದ್ಧ ಕಿಡಿ ಕಾರಿದರು.

    ಹೊರಗಡೆ ಪಕ್ಷದಿಂದ ಬಂದವರು ಅವರು. ಕಾಂಗ್ರೆಸ್, ಜೆಡಿಎಸ್​ಗೆ ದ್ರೋಹ ಮಾಡಿ ಬಂದವರು. ಅವರಿಗೇಕೆ ಮಂತ್ರಿ ಮಾಡ್ತಾರೆ. ಸೋತವರು ಇಬ್ಬರು ಅನರ್ಹರರು ಎಂದು ಕಿಡಿ ಕಾರಿದರು.

    ಸಂಘಟನೆಗೆ ಹಣ ಎಲ್ಲಿಂದ ಬರುತ್ತೆ?: ಗಲಭೆ ನಡೆಸಲು ಪಿಎಫ್​ಐ ಸಂಘಟನೆಗೆ ಹಣ ಸಂದಾಯ ವಿಚಾರವೊಂದು ಸುಳ್ಳು ಆರೋಪ. ಸಂಘಟನೆಗಳಿಗೆ ಹೋರಾಟ ಮಾಡಲು ಎಲ್ಲಿಂದ ಹಣ ಬರುತ್ತದೆ? ಈ ಕುರಿತು ಪಿಎಫ್​ಐ ಸಂಘಟನೆಯವರನ್ನೇ ಕೇಳಿ. ನನಗೂ ಪಿಎಫ್​ಐ ಏನು ಸಂಬಂಧ ಎಂದು ಪ್ರಸ್ನಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts