More

    ರಾಜ್ಯ ಸರ್ಕಾರ ಹೆಚ್ಚು ಕಾಲ ಉಳಿಯಲ್ಲ: ಆರಗ ಜ್ಞಾನೇಂದ್ರ

    ತೀರ್ಥಹಳ್ಳಿ: ಬರದಿಂದ ಜನರು ಕಂಗೆಟ್ಟಿರುವ ಈ ಸಂದರ್ಭದಲ್ಲಿ ರಾಜ್ಯದ ಅಭಿವೃದ್ಧಿಯನ್ನು ಬಲಿ ಕೊಟ್ಟು ರಾಜ್ಯ ಸರ್ಕಾರ ಆಡಳಿತ ನಡೆಸುತ್ತಿರುವ ಪರಿಯನ್ನು ನೋಡಿದರೆ ಈ ಸರ್ಕಾರ ಹೆಚ್ಚು ಕಾಲ ಉಳಿಯುವಂತೆ ಕಾಣುತ್ತಿಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ರಾಜ್ಯ ಸರ್ಕಾರದ ಯುವನಿಧಿ ಯೋಜನೆಯನ್ನು ಟೀಕಿಸಿದರು.

    ಪಟ್ಟಣದಲ್ಲಿ ರಾಮೇಶ್ವರ ಸ್ವಾಮಿಯ ರಥೋತ್ಸವದ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, 5ನೇ ಗ್ಯಾರಂಟಿಗೆ ತಾಲೂಕಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಮ್ಮ ತಾಲೂಕಿನಿಂದ ಹೆಚ್ಚು ಜನರು ಕೂಡಾ ಹೋಗಿಲ್ಲ. ಜನರನ್ನು ಕರೆದೊಯ್ಯಲು ಬಂದಿದ್ದ ಬಸ್ಸುಗಳು ಇಲ್ಲಿಯೇ ನಿಂತಿವೆ. ಕೆಲವು ಬಸ್ಸುಗಳಲ್ಲಿ ನಾಲ್ಕೈದು ಮಂದಿ ಮಾತ್ರ ಸಮಾವೇಶಕ್ಕೆ ಹೋಗಿದ್ದಾರೆ ಎಂದೂ ಲೇವಡಿ ಮಾಡಿದರು.
    ರಾಜ್ಯ ಸರ್ಕಾರದ ಯುವನಿಧಿ ಯೋಜನೆ ಸರ್ಕಾರಿ ಕಾರ್ಯಕ್ರಮವಾಗದೇ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವಾಗಿದೆ. ರಾಜ್ಯದ ಅಭಿವೃದ್ದಿಯನ್ನು ಬಲಿ ಕೊಟ್ಟು ಇಂತಹ ಅಂಧ ದರ್ಬಾರ್ ಕಾರ್ಯಕ್ರಮವನ್ನು ನಡೆಸುವ ಈ ಸರ್ಕಾರ ಹೆಚ್ಚು ಕಾಲ ನಡೆಯುವಂತೆ ಕಾಣುತ್ತಿಲ್ಲ ಎಂದು ಹೇಳಿದರು.
    ರಾಮನ ಕೃಪೆಯಿಂದ ಮೋದಿ ಪ್ರಧಾನಿ: ಶ್ರೀರಾಮ ಜನ್ಮ ತಾಳಿದ ಸ್ಥಳದಲ್ಲಿ ಮಂದಿರ ನಿರ್ಮಾಣಗೊಳ್ಳುತ್ತಿದ್ದು, ಈ ಮಂದಿರ ಭಾರತೀಯರ ಶ್ರದ್ಧಾಕೇಂದ್ರವೂ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಪ್ರಾಣ ಪ್ರತಿಷ್ಠೆ ಆಗಲಿದೆ. ಮೋದಿ ಅವರಂತಹ ಹಿಂದುಳಿದ ವರ್ಗದ ನಾಯಕ ಪ್ರಧಾನಿ ಆಗಿರುವುದು ಶ್ರೀರಾಮನ ಕೃಪೆಯಿಂದ. ಈ ದೇಶದ ಏಕತೆ ಮತ್ತು ಸಮಗ್ರತೆ ರಾಮಮಂದಿರದ ಮೂಲಕ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ಮುಖಂಡರಾದ ಕೆ.ನಾಗರಾಜ ಶೆಟ್ಟಿ, ಪ್ರಶಾಂತ್ ಕುಕ್ಕೆ, ಸಂದೇಶ್ ಜವಳಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts