More

    ಪ್ರಧಾನಿಗೆ ಕಾರ್ಪೆರೇಟ್ ಕಂಪನಿಗಳ ವ್ಯಾಮೋಹ

    ಹೊಳೆಹೊನ್ನೂರು: ದೆಹಲಿಗೆ ರೈತರ ಪ್ರವೇಶ ನಿರ್ಬಂಧಿಸಿರುವುದನ್ನು ವಿರೋಧಿಸಿ ರಾಜ್ಯ ರೈತರ ಸಂಘ ಮತ್ತು ಹಸಿರುಸೇನೆ ಕಾರ್ಯಕರ್ತರು ಗುರುವಾರ ಹೊಳಲೂರು ಬಸ್ ನಿಲ್ದಾಣದ ಎದುರು ಹರಿಹರ-ಶಿವಮೊಗ್ಗ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

    ಸಂಘದ ಪ್ರಧಾನ ಕಾರ್ಯಧ್ಯಕ್ಷ ಎಚ್.ಆರ್ ಬಸವರಾಜಪ್ಪ ಮಾತನಾಡಿ, ಪ್ರಧಾನಿಗಳಿಗೆ ಕಾರ್ಪೆರೇಟ್ ಕಂಪನಿಗಳ ಮೇಲೆ ವ್ಯಾಮೋಹ ಹೆಚ್ಚಾಗುತ್ತಿರುವುರಿಂದ ಅನ್ನದಾತರನ್ನು ಕಡೆಗಣಿಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಜನ ತಿರಸ್ಕಾರ ಮಾಡಿ ಮೂಲೆ ಗುಂಪಾಗಿಸುವ ಸಮಯ ಸಮೀಪಿಸುತ್ತಿದೆ ಎಂದು ಹೇಳಿದರು.

    ದೇಶದ ನಾಗರಿಕರ ಭಾವನೆಗಳನ್ನು ಕೆರಳಿಸಿ ರಾಜಕೀಯ ಬೆಳೆ ಬೇಯಿಸಿಕೊಂಡು ದೇಶದಲ್ಲಿ ಅರಾಜಕಥೆ ಸೃಷ್ಟಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮುಂದಿನ ಚುನಾವಣೆಗಳಲ್ಲಿ ಜನತೆ ತಕ್ಕ ಪಾಠ ಕಲಿಸುತ್ತಾರೆ. ದೆಹಲಿಯಲ್ಲಿ ಭಾರತೀಯ ಸೇನೆ ಬಳಸಿಕೊಂಡು ರೈತರನ್ನು ಹತ್ತಿಕ್ಕುತ್ತಿರುವ ಪ್ರಧಾನಿಗೆ ಕ್ರಮ ಸರಿಯಲ್ಲ.

    ರೈತರನ್ನು ಎದುರು ಹಾಕಿಕೊಂಡ ಸರ್ಕಾರಗಳಿಗೆ ಭವಿಷ್ಯವಿಲ್ಲ. ಸರ್ವಾಧಿಕಾರಿ ಧೋರಣೆ ನೀತಿ ಅನುಸರಿಸುತ್ತಿರುವ ಕೇಂದ್ರ ಸರ್ಕಾರದಿಂದ ದೇಶಕ್ಕೆ ಸುಭದ್ರ ಆಡಳಿತ ನೀಡಲು ಸಾಧ್ಯವಿಲ್ಲ. ಸರ್ಕಾರಿ ವಲಯಗಳನ್ನು ಖಾಸಗಿಯವರಿಗೆ ನೀಡಿ ದೇಶವನ್ನೇ ಮಾರಲು ಹೊರಟಿದೆ. ಕೃಷಿ ಪ್ರಧಾನ ರಾಷ್ಟ್ರದಲ್ಲಿ ಅನ್ನದಾತನಿಗೆ ಮರಣ ಶಾಸನ ಬರೆಯಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಗಂಟೆಗೂ ಹೆಚ್ಚು ಕಾಲ ಹೆದ್ದಾರಿ ಬಂದ್ ಆದ ಕಾರಣ ವಾಹನ ಸಂಚಾರ ಅಸ್ತವ್ಯಸ್ತವಾಯಿತು. ಹೊಳಲೂರು ಸೇತುವೆ ರಸ್ತೆಯನ್ನು ಬಳಿಸಿಕೊಂಡು ಹೊಳೆಹೊನ್ನೂರು ಮಾರ್ಗವಾಗಿ ವಾಹನ ಓಡಾಟಕ್ಕೆ ತಾತ್ಕಾಲಿಕವಾಗಿ ಅವಕಾಶ ಕಲ್ಪಿಸಲಾಯಿತು. ಪ್ರತಿಭಟನೆ ಬಳಿಕ ಹೆದ್ದಾರಿಯಲ್ಲಿ ವಾಹನಗಳನ್ನು ತೆರವುಗೊಳಿಸಲು ಪೊಲೀಸರು ಹರ ಸಾಹಸಪಟ್ಟರು. ಹಸಿರು ಸೇನೆ ಜಿಲ್ಯಾಧ್ಯಕ್ಷ ಶಿವಮೂರ್ತಿ, ತಾಲೂಕು ಅಧ್ಯಕ್ಷ ಟಿ.ಎಂ.ಚಂದ್ರಪ್ಪ, ಪಂಚಾಕ್ಷರಪ್ಪ, ಈಶಣ್ಣ, ರಾಮಚಂದ್ರಪ್ಪ, ರಾಜರಾವ್, ಸಿ.ಎಚ್.ಜಗದೀಶ್, ರವಿಕುಮಾರ್, ದಿಗ್ಗೇನಹಳ್ಳಿ ಮಲ್ಲೇಶಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts