More

    ರಾಜ್ಯ ರಾಜಧಾನಿಯಲ್ಲಿ ಭಾರಿ ಭಯ ಹುಟ್ಟಿಸಿದ ಕರೊನಾ

    ಬೆಂಗಳೂರು: ಶನಿವಾರ 596 ಮಂದಿಯಲ್ಲಿ ಕರೊನಾ ಸೋಂಕು ಪತ್ತೆಯಾಗಿದ್ದನ್ನು ತಿಳಿದು ನಡುಗಿದ್ದ ರಾಜಧಾನಿಯಲ್ಲಿ ಭಾನುವಾರ 783 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ! ನಾಲ್ವರು ಮೃತಪಟ್ಟಿದ್ದು, 155 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ಆತಂಕ ಹೆಚ್ಚಿಸಿದೆ.

    ಸೋಂಕಿಗೆ ಒಳಗಾದ 783 ಜನರಲ್ಲಿ 503 ಪುರುಷರು ಹಾಗೂ 280 ಮಹಿಳೆಯರಿದ್ದಾರೆ. ಒಂದು ವರ್ಷದ ಎರಡು ಮಕ್ಕಳೂ ಸೇರಿ 10 ವರ್ಷದೊಳಗಿನ ಸೋಂಕಿತರ ಸಂಖ್ಯೆ 18 ದಾಖಲಾಗಿದೆ. 31ರಿಂದ 40 ವಯಸ್ಸಿನವರಲ್ಲೇ ಅಧಿಕ ಸಂಖ್ಯೆಯಲ್ಲಿ (193) ಸೋಂಕು ಕಂಡುಬಂದಿದ್ದು, 21ರಿಂದ 30 ವಯಸ್ಸಿನ 146 ಹಾಗೂ 41ರಿಂದ 50 ವಯಸ್ಸಿನ 140 ಜನರಿದ್ದಾರೆ. ಕರೊನಾದಿಂದ ಸಾವಿಗೀಡಾಗುವವರ ಪೈಕಿ ಹೆಚ್ಚಿನ ಸಂಖ್ಯೆಯಲ್ಲಿ 105 ಮಂದಿ 61 ವಯಸ್ಸು ಮೇಲ್ಪಟ್ಟವರು. ಇದು ಸ್ಥಿತಿಯ ಗಂಭೀರತೆಯನ್ನು ಹೆಚ್ಚಿಸಿದೆ.

    ಐಸಿಯುನಲ್ಲೇ 155: ಭಾನುವಾರ ಮೃತಪಟ್ಟ ಮೂವರಲ್ಲಿ 66, 62 ಮತ್ತು 55 ವರ್ಷದ ಮೂವರೂ ಪುರುಷರಾಗಿದ್ದು, ಇಬ್ಬರಲ್ಲಿ ಶೀತಜ್ವರ (ಐಎಲ್​ಐ) ಇರುವ ಕಾರಣಕ್ಕೆ ಪರೀಕ್ಷೆ ನಡೆಸಿದಾಗ ಸೋಂಕು ದೃಢಪಟ್ಟಿತ್ತು. ಮತ್ತೊಬ್ಬರಿಗೆ ಸೋಂಕು ತಗುಲಿದ ಮೂಲ ಪತ್ತೆಯಾಗಿಲ್ಲ. ಬೆಂಗಳೂರಿನಲ್ಲಿ 155 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಐಸಿಯುನಲ್ಲಿರುವ ಹೆಚ್ಚಿನ ಜನರು 55 ವರ್ಷ ಮೇಲ್ಪಟ್ಟವರಾಗಿದ್ದು, ಸೋಂಕಿನ ಜತೆಗೆ ಕಿಡ್ನಿ, ಹೃದಯ, ಶ್ವಾಸಕೋಶ ಸಮಸ್ಯೆಗಳು, ರಕ್ತದೊತ್ತಡ, ಮಧುಮೇಹದಂತಹ ಕಾಯಿಲೆಗಳಿದ್ದರೆ ಬಹುಬೇಗ ಚೇತರಿಸಿಕೊಳ್ಳುವುದು ಕಷ್ಟಸಾಧ್ಯ ಎಂದು ವೈದ್ಯರು ತಿಳಿಸಿದ್ದಾರೆ.

    ಇದನ್ನೂ ಓದಿ: ಕೋವಿಡ್ ಪರೀಕ್ಷೆಗೆ ಮತ್ತಷ್ಟು ಬಲ: ವಿಕ್ಟೋರಿಯಾ ಲ್ಯಾಬ್ ಆರಂಭ, ಇಂದಿನಿಂದ ನಿಮ್ಹಾನ್ಸ್ ಲ್ಯಾಬ್ ಕಾರ್ಯ

    3 ದಿನವಾದರೂ ಮೃತದೇಹ ಹಸ್ತಾಂತರ ಮಾಡದ ಆಸ್ಪತ್ರೆ: ಕರೊನಾ ಸೋಂಕಿನಿಂದ ಮೃತಪಟ್ಟು 3 ದಿನವಾದರೂ ಸೋಂಕಿತನ ಮೃತದೇಹವನ್ನು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದು ಪಾಲಿಕೆ ಅಧಿಕಾರಿಗಳಿಗೆ ಹಸ್ತಾಂತರಿಸಿಲ್ಲ. ಚಿಕಿತ್ಸೆ ವೆಚ್ಚ ನೀಡುವರೆಗೂ ಮೃತ ದೇಹ ನೀಡುವುದಿಲ್ಲ ಎಂದು ಪಾಲಿಕೆ ಆರೋಗ್ಯಾಧಿಕಾರಿಗಳಿಗೆ ಆಸ್ಪತ್ರೆ ಅಧಿಕಾರಿಗಳು ಪಟ್ಟು ಹಿಡಿದಿದ್ದಾರೆ. ವ್ಯಕ್ತಿಯೊಬ್ಬರು ಜೂ.15ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಜೂ.17ರಂದು ಸೋಂಕು ಇರುವುದು ದೃಢಪಟ್ಟಿತ್ತು. ಜೂ. 25ರಂದು ಮೃತಪಟ್ಟಿದ್ದು, ಆಸ್ಪತ್ರೆ 2.68 ಲಕ್ಷ ರೂ. ಬಿಲ್ ಮಾಡಿದೆ. ಅದರಲ್ಲಿ 1.80 ಲಕ್ಷ ರೂ. ವಿಮೆ ಮೂಲಕ ಜಮಾ ಆಗಿದೆ. ಬಾಕಿ ಹಣ ನೀಡಿದಲ್ಲಿ ಮಾತ್ರ ಮೃತದೇಹ ಹಸ್ತಾಂತರಿಸಲಾಗುವುದು ಎಂದಿದ್ದಾರೆ. ಮೃತನ ಪತ್ನಿಗೂ ಸೋಂಕು ದೃಢಪಟ್ಟಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಗನನ್ನು ಕ್ವಾರಂಟೈನ್ ಮಾಡಲಾಗಿದೆ. ಈ ಸಂಬಂಧ ಮೃತನ ಪುತ್ರ, ‘ಆರ್ಥಿಕ ಸಮಸ್ಯೆ ಇದೆ. ಕಟ್ಟಲು ಹಣವಿಲ್ಲ. ಮೃತದೇಹ ಹಸ್ತಾಂತರಿಸುವಂತೆ ಕೋರಿ ಕಣ್ಣೀರಿಟ್ಟಿರುವ ವಿಡಿಯೋವನ್ನು ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.

    ಖಾಸಗಿ ಆಸ್ಪತ್ರೆಗಳಿಗೆ ಸಿಎಸ್ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts