More

    ಅಪ್ಪ-ಮಕ್ಕಳ ಕೈಯಲ್ಲಿ ರಾಜ್ಯ ಬಿಜೆಪಿ

    ಶಿವಮೊಗ್ಗ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ರಾಘವೇಂದ್ರ ವಿರುದ್ಧ ಅಸಮಾಧಾನ ಮುಂದುವರಿಸಿದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಅಪ್ಪ-ಮಕ್ಕಳ ಕೈಯಲ್ಲಿ ರಾಜ್ಯ ಬಿಜೆಪಿ ಇದ್ದು ಬಹಳಷ್ಟು ಮಂದಿ ನಲುಗುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

    ಮಲ್ಲೇಶ್ವರ ಗುಂಡಪ್ಪಶೆಡ್‌ನ ತಮ್ಮ ನಿವಾಸದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪ್ಪ-ಮಕ್ಕಳು ಸೇರಿಕೊಂಡು ನನ್ನ ಪುತ್ರ ಕೆ.ಇ.ಕಾಂತೇಶ್‌ಗೆ ಹಾವೇರಿ-ಗದಗ ಟಿಕೆಟ್ ತಪ್ಪಿಸಿದ್ದಾರೆ. ಯಡಿಯೂರಪ್ಪ ನಡೆಯಿಂದ ರಾಜ್ಯ ಬಿಜೆಪಿಯಲ್ಲಿ ಪಕ್ಷಕ್ಕಾಗಿ ದುಡಿದ ಸಾವಿರಾರು ಮುಖಂಡರು ಮತ್ತು ಕಾರ್ಯಕರ್ತರಿಗೆ ಬೇಸರವಾಗಿದೆ. ಯಾರೂ ಮಾತನಾಡುತ್ತಿಲ್ಲ. ನಾನು ಎಲ್ಲರ ಧ್ವನಿಯಾಗಿ ನಿಂತಿದ್ದೇನೆ ಎಂದರು.
    ಬಿ.ವೈ.ವಿಜಯೇಂದ್ರ ರಾಜ್ಯಾಧ್ಯಕ್ಷನಾದ ಬಳಿಕ ಯಾರನ್ನೂ ಕೇಳದೆ ಪದಾಧಿಕಾರಿಗಳ ನೇಮಕ ಮಾಡಿದರು. ಕೋರ್‌ಕಮಿಟಿ ಒಪ್ಪಿಗೆ ಪಡೆಯದೆ ಸಮಿತಿ ರಚನೆ ಮಾಡಿದ್ದರು. ಕಾಂತೇಶ್‌ಗೆ ಯಡಿಯೂರಪ್ಪ ಮೊದಲು ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ ಹೇಳಿದ್ದರು. ನಂತರ ಹಾವೇರಿ ಟಿಕೆಟ್ ಕೊಡುವುದಾಗಿ ಭರವಸೆ ನೀಡಿದ್ದರು. ಇದೀಗ ಎಂಎಲ್‌ಸಿ ಮಾಡುತ್ತೇವೆ ಅನ್ನುತ್ತಿದ್ದು ಹೇಗೆ ನಂಬುವುದು ಎಂದು ಪ್ರಶ್ನಿಸಿದರು.

    ಬಿಎಸ್‌ವೈ ವಿರುದ್ಧ ಷಡ್ಯಂತ್ರ
    ಬಿ.ಎಸ್.ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಕೆ.ಎಸ್.ಈಶ್ವರಪ್ಪ, ಇದೊಂದು ಷಡ್ಯಂತ್ರವಾಗಿದೆ. ಈ ಪ್ರಕರಣದಲ್ಲಿ ಯಡಿಯೂರಪ್ಪ ಅವರಿಗೆ ನ್ಯಾಯ ಸಿಗುತ್ತದೆ. ದೂರು ನೀಡಿರುವವರು ಈವರೆಗೆ 53 ಜನರ ವಿರುದ್ಧ ದೂರು ಕೊಟ್ಟಿದ್ದಾರಂತೆ. ಹಾಗಾಗಿ ದೂರು ದಾಖಲಿಸುವ ಮುನ್ನ ಪೊಲೀಸರು ಯೋಚಿಸಬೇಕು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts