More

    ಸ್ಟಾರ್ಟ್​ ಅಪ್​ಗಳಿಗೆ ಸಿಗಲಿದೆ ಉತ್ತೇಜನ

    ಹುಬ್ಬಳ್ಳಿ: ಇನ್​ಕ್ಯೂಬೇಷನ್ ಕೇಂದ್ರದ ಸ್ಥಾಪನೆಯಿಂದ ಬಹಳಷ್ಟು ಸ್ಟಾರ್ಟ್​ಅಪ್​ಗಳಿಗೆ ಉತ್ತೇಜನ ಸಿಗಲಿದೆ. ಹೊಸದಾಗಿ ಕಾಲೇಜ್ ವಿದ್ಯಾಭ್ಯಾಸ ಮುಗಿಸಿ ಬರುವವರಿಗೆ ತರಬೇತಿಯೂ ಲಭ್ಯವಾಗಲಿದೆ ಎಂದು ಟೈ ಹುಬ್ಬಳ್ಳಿ ಅಧ್ಯಕ್ಷ ಅಜಯ ಹಂಡಾ, ಸಂಚಾಲಕ ಜಿತೇಂದ್ರ ನಾಯಕ ತಿಳಿಸಿದರು.

    ಇಲ್ಲಿನ ಗೋಕುಲ ರಸ್ತೆಯ ಬೆಲ್ಲದ ಟವರ್​ನ ಎರಡನೇ ಮಹಡಿಯಲ್ಲಿ ಮಂಗಳವಾರ ಟೈ ಹುಬ್ಬಳ್ಳಿ ಹೊಸ ಕಚೇರಿ ಹಾಗೂ ಇನ್​ಕ್ಯೂಬೇಷನ್ ಕೇಂದ್ರದ ಉದ್ಘಾಟನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

    ಶಿಕ್ಷಣ, ನೆಟ್​ವರ್ಕಿಂಗ್, ಮಾರ್ಗದರ್ಶನ, ಹೂಡಿಕೆಗಳಿಗೆ ಅವಕಾಶ ಸೇರಿ ಉದ್ಯಮಶೀಲ ವಾತಾವರಣ ಇದರಿಂದ ಸೃಷ್ಟಿಯಾಗಲಿದೆ. ಉತ್ತರ ಕರ್ನಾಟಕದ ಸ್ಟಾರ್ಟ್​ಅಪ್​ಗಳಿಗೆ ವಿವಿಧ ಕಾರ್ಯಕ್ರಮಗಳ ಮೂಲಕ ಮೆಂಟರಿಂಗ್ ಹಾಗೂ ಆಕ್ಸಿಲೇಟರ್ ಕಾರ್ಯಕ್ರಮ ನಡೆಸುವ ಗುರಿ ಹೊಂದಿದೆ. ಮುಂದಿನ ವಾರ ಐಟಿಬಿಟಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕಾರ್ಯ ಯೋಜನೆ ರೂಪಿಸಲಾಗುವುದು ಎಂದು ವಿವರಿಸಿದರು.

    ಮಾಜಿ ಅಧ್ಯಕ್ಷರಾದ ಸಂದೀಪ ಬಿಡಸಾರಿಯಾ, ಶಶಿಧರ ಶೆಟ್ಟರ್, ಉಪಾಧ್ಯಕ್ಷ ವಿಜೇಶ ಸೈಗಲ್, ಕಾರ್ಯದರ್ಶಿ ಗೌರವ್ ಶಾ, ವಿಶಾಲ್ ನಾಡಗೌಡ, ಗಿರೀಶ ಮಾನೆ, ಶ್ರಾವಣಿ ಪವಾರ್, ಮೇಧಾ ಪವಾರ್, ಜ್ಯೋತಿ ಬಿಡಸಾರಿಯಾ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts