More

    ಮೂಡಿಗೆರೆ-ದೇರಳಕಟ್ಟೆ -ಮಂಗಳೂರು ಮಾರ್ಗವಾಗಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭಿಸಿ

    ಮೂಡಿಗೆರೆ: ಮೂಡಿಗೆರೆಯಿಂದ ಪ್ರತಿದಿನ ಬೆಳಗ್ಗೆ ಬಿ.ಸಿ.ರೋಡ್, ಮೇಲ್ಕಾರ್, ಮುಡಿಪು, ದೇರಳಕಟ್ಟೆ ಮಾರ್ಗವಾಗಿ ಮಂಗಳೂರಿಗೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭಿಸಬೇಕು ಎಂದು ತಾಲೂಕು ಬ್ಯಾರಿ ಒಕ್ಕೂಟದ ಅಧ್ಯಕ್ಷ ಬಿ.ಎಚ್.ಮಹಮ್ಮದ್ ಒತ್ತಾಯಿಸಿದ್ದಾರೆ.
    ತಾಲೂಕಿನಿಂದ ರೋಗಿಗಳು ದೇರಳಕಟ್ಟೆ, ಮುಡಿಪು, ಕಿನ್ಯಾ ಗ್ರಾಮದಲ್ಲಿರುವ ಆಸ್ಪತ್ರೆಗಳಿಗೆ ಪ್ರತಿದಿನ ಚಿಕಿತ್ಸೆಗೆ ಹೋಗುತ್ತಾರೆ. ಕೊಣಾಜೆ ವಿಶ್ವವಿದ್ಯಾಲಯ, ಶಾಲೆ, ಕಾಲೇಜುಗಳಿಗೂ ವಿದ್ಯಾರ್ಥಿಗಳು ತೆರಳುತ್ತಾರೆ. ಅವರು ಬಸ್‌ನಲ್ಲಿ ಮಂಗಳೂರು ಅಥವಾ ಬಿಸಿ ರೋಡ್‌ನಲ್ಲಿ ಇಳಿದು ಬೇರೆ ಬಸ್‌ನಲ್ಲಿ ಸಂಚರಿಸಬೇಕು. ಇದರಿಂದ ಸಮಯಕ್ಕೆ ಸರಿಯಾಗಿ ತೆರಳಲು ತೊಂದರೆ ಉಂಟಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
    ವಿದ್ಯಾರ್ಥಿಗಳು ಹಾಸ್ಟೆನಲ್ಲಿ ವಾಸವಿದ್ದರೂ ವಾರಕ್ಕೊಮ್ಮೆ ಮನೆಗೆ ಬಂದು ಹೋಗಲು ಸಾಹಸ ಪಡಬೇಕು. ಬಸ್‌ನಲ್ಲಿ ಹೋದ ರೋಗಿಗಳು ಬಿಸಿ ರೋಡ್‌ನಿಂದ ಇಳಿದು ಮುಡಿಪು ಪಟ್ಟಣದವರೆಗೆ ಇನ್ನೊಂದು ಬಸ್ ಹಿಡಿಯಬೇಕು. ಅಲ್ಲಿಂದ ದೇರಳಕಟ್ಟೆ ಮತ್ತಿತರ ಆಸ್ಪತ್ರೆಗೆ ತೆರಳಲು ಮತ್ತೊಂದು ಬಸ್‌ಹತ್ತಬೇಕು. ಅಲ್ಲಲ್ಲಿ ಬಸ್ ಬದಲಾಯಿಸಿ ಆಸ್ಪತ್ರೆಗೆ ತಲುಪುವಾಗ ಸಂಜೆಯಾಗುತ್ತದೆ. ಚಿಕಿತ್ಸೆ ಬಳಿಕ ವಾಪಸಾಗಲು ಸಾಧ್ಯವಾಗದೆ ಅಲ್ಲಿಯೇ ಉಳಿಯುವ ಪರಿಸ್ಥಿತಿ ಉಂಟಾಗುತ್ತದೆ. ಪ್ರತಿದಿನ ಬೆಳಗ್ಗೆ ಮೂಡಿಗೆರೆಯಿಂದ ಬಸ್ ಸಂಚಾರ ಆರಂಭಿಸಿದರೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಸಂಜೆ ಅದೇ ಬಸ್‌ನಲ್ಲಿ ವಾಪಸಾಗಲು ರೋಗಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts