More

    ಕರೊನಾ ರೋಗಿಗಳ ಕ್ವಾರಂಟೈನ್​​ ಸೌಲಭ್ಯಕ್ಕೆ ಕ್ರೀಡಾಂಗಣ ಸಜ್ಜು !

    ಗೌಹಾಟಿ : ದೇಶದೆಲ್ಲೆಡೆ ಕರೊನಾ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಬೆಡ್​ ಕೊರತೆ ಎದ್ದು ಕಾಣುತ್ತಿದೆ. ಹಲವು ಸೋಂಕಿತರಿಗೆ ಚಿಕಿತ್ಸೆಯ ಅಗತ್ಯ ಇಲ್ಲದಿದ್ದರೂ ಸೋಂಕು ಹರಡದಂತೆ ಪ್ರತ್ಯೇಕವಾಗಿರಿಸಲು ಐಸೋಲೇಶನ್ ಸೆಂಟರ್​ಗಳ ಅಗತ್ಯವೂ ಹೆಚ್ಚಾಗಿ ಕಂಡುಬರುತ್ತಿದೆ. ಈ ಸಮಯದಲ್ಲಿ ಹಲವು ರಾಜ್ಯಗಳು ಬೇರೆ ಬೇರೆ ರೀತಿಯಲ್ಲಿ ಈ ಸಮಸ್ಯೆಯನ್ನು ನಿಭಾಯಿಸಲು ಪ್ರಯತ್ನಿಸುತ್ತಿವೆ.

    ಇಂಥದೇ ಒಂದು ಪ್ರಯತ್ನದಲ್ಲಿ ಅಸ್ಸಾಂ ಸರ್ಕಾರವು ಗೌಹಾಟಿಯ ಸರೂಸಜಾಯಿ ಕ್ರೀಡಾಂಗಣವನ್ನು ಕರೊನಾ ರೋಗಿಗಳ ಐಸೋಲೋಷನ್ ಫೆಸಿಲಿಟಿಯಾಗಿ ಪರಿವರ್ತಿಸಿದೆ. ಇಲ್ಲಿ ಕನಿಷ್ಠ ಒಂದು ಸಾವಿರ ರೋಗಿಗಳನ್ನು ಕ್ವಾರಂಟೈನ್ ಮಾಡುವ ಅವಕಾಶ ಕಲ್ಪಿಸಲಾಗಿದೆ ಎನ್ನಲಾಗಿದೆ.

    ಇದನ್ನೂ ಓದಿ: ಕೊಳೆಗೇರಿಗಳಲ್ಲಲ್ಲ, ಬಹುಮಹಡಿ ಕಟ್ಟಡಗಳಲ್ಲಿ ಹೆಚ್ಚು ಕರೊನಾ ಸೋಂಕು !

    ಫುಟ್​ಬಾಲ್​ ಸ್ಟೇಡಿಯಂ ಆದ ಇದು ಅಥ್ಲೆಟಿಕ್ಸ್ ಕ್ರೀಡೆಗಳ ಅಭ್ಯಾಸಕ್ಕೂ ಅವಕಾಶ ನೀಡುತ್ತಿತ್ತು. ಇದರ ಇನ್ನೊಂದು ಹೆಸರು ಇಂದಿರಾ ಗಾಂಧಿ ಅಥ್ಲೆಟಿಕ್​​ ಸ್ಟೇಡಿಯಂ. ನಾರ್ತ್​ಈಸ್ಟ್ ಯುನೈಟೆಡ್​ ಫುಟ್​ಬಾಲ್​ ಕ್ಲಬ್​ನ ಹೋಂಗ್ರೌಂಡ್ಸ್ ಆಗಿರುವ ಈ ಕ್ರೀಡಾಂಗಣ, ಇದೀಗ ಕರೊನಾ ರೋಗಿಗಳ ಶುಶ್ರೂಷೆಗೆ ಸಾಲುಸಾಲು ಬೆಡ್​ಗಳೊಂದಿಗೆ ಸಜ್ಜಾಗಿದೆ. (ಏಜೆನ್ಸೀಸ್)

    10ನೇ ತರಗತಿ ವಿದ್ಯಾರ್ಥಿಗಳ ಭೌತಿಕ ತರಗತಿ ರದ್ದು ; ಶಿಕ್ಷಕರ ಹಾಜರಾತಿಗೆ ವಿನಾಯಿತಿ

    ನಮ್ಮ ಆಸ್ಪತ್ರೆಗಳಿಗೆ ಹೊರಟ ಆಕ್ಸಿಜನ್ಅನ್ನು ದೆಹಲಿ ಸರ್ಕಾರ ಕದ್ದಿದೆ : ಹರಿಯಾಣ ಸಚಿವರ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts