More

    ಪರೀಕ್ಷೆ ಯುದ್ಧವಲ್ಲ, ಅದೊಂದು ಆಟ

    ಶಿಡ್ಲಘಟ್ಟ: ಪರೀಕ್ಷೆಗಳನ್ನು ಹಬ್ಬದಂತೆ ಸಂಭ್ರಮಿಸಬೇಕೇ ಹೊರತು ಭಯಪಡಬಾರದು ಎಂದು ವಿದ್ಯಾರ್ಥಿಗಳಿಗೆ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಎಂ.ಶಿವಕುಮಾರ್ ಕಿವಿಮಾತು ಹೇಳಿದರು.

    ತಾಲೂಕಿನ ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಹಮ್ಮಿಕೊಂಡಿದ್ದ ‘‘ಪರೀಕ್ಷೆ ಎದುರಿಸುವುದು ಹೇಗೆ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ’ದಲ್ಲಿ ಮಾತನಾಡಿದರು.

    ಸಮರ್ಥವಾಗಿ ಪರೀಕ್ಷೆ ಎದುರಿಸಲು ಮಕ್ಕಳಲ್ಲಿ ಸಂಕಲ್ಪ, ಆತ್ಮವಿಶ್ವಾಸ, ಏಕಾಗ್ರತೆ, ಕಲಿಕಾಸಕ್ತಿ ಇರಬೇಕು. ಪರೀಕ್ಷೆ ಎಂಬುದು ಯುದ್ಧವಲ್ಲ, ಆದೊಂದು ಆಟ. ನಿಯಮಗಳನ್ನು ಅರಿತು ಕ್ರೀಡಾಸ್ಫೂರ್ತಿಯಿಂದ ಆಡಬೇಕು ಎಂದು ಸಲಹೆ ನೀಡಿದರು.

    ಶರೀರ, ಮನಸ್ಸು, ಗ್ರಹಣ ಶಕ್ತಿಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಭವಿಷ್ಯ ರೂಪಿಸಿಕೊಳ್ಳುವ ಅಧಮ್ಯ ಇಚ್ಛೆ ವಿದ್ಯಾರ್ಥಿಯ ಒಳಗೆ ಕಿಚ್ಚಿನಂತೆ ಉರಿಯುತ್ತಿರಬೇಕು ಎಂದರು.

    ಸುಪ್ತವಾಗಿರುವ ಅನಂತಶಕ್ತಿ, ಉತ್ಸಾಹ, ಧೈರ್ಯ, ಸಹನೆಗಳಿಂದ ಮಹತ್ವದನ್ನು ಸಾಧಿಸಬಹುದು. ಭಯ, ಚಡಪಡಿಕೆ, ಆತಂಕಗಳನ್ನು ತ್ಯಜಿಸಿ, ಮಾನಸಿಕ ಒತ್ತಡಕ್ಕೆ ಒಳಗಾಗದೆ ಪುನಃಸ್ಮರಣೆ ಮಾಡಿಕೊಂಡರೆ ಪರೀಕ್ಷೆಗೆ ಅನುಕೂಲವಾಗಲಿದೆ ಎಂದು ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಎಚ್.ಎಸ್.ರುದ್ರೇಶಮೂರ್ತಿ ತಿಳಿಸಿದರು.

    ಕಸಾಪ ತಾಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜು ಮಾತನಾಡಿದರು. ಸಂವಾದದಲ್ಲಿ ಉತ್ತಮ ಪ್ರಶ್ನೆ ಕೇಳಿದ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಲೇಖನಿ ನೀಡಲಾಯಿತು. ಮುಖ್ಯಶಿಕ್ಷಕ ಜಿ.ಎಂ.ಪರಮನಟ್ಟಿ, ಶಿಕ್ಷಕರಾದ ಬೈರಾರೆಡ್ಡಿ, ಎಂ.ನಾರಾಯಣಸ್ವಾಮಿ, ಎಂ.ಎನ್.ಮಂಜುನಾಥ್, ನಾಗರತ್ನಾ, ಲತಾ, ಮೇಘನಾ ಜೋಶಿ, ಲೋಕೇಶ್, ನಾಗವೇಣಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts