More

    VIDEO| ಎಸ್‌ಎಸ್‌ಎಲ್‌ಸಿ ಮಕ್ಕಳ ಗೊಂದಲ ಪರಿಹಾರಕ್ಕೆ 51 ನಿಮಿಷ ವಿಡಿಯೋ: ಶಿಕ್ಷಣ ಇಲಾಖೆಯಿಂದ ಹೊಸ ಕ್ರಮ

    ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಇನ್ನು ಕೆಲವೇ ವಾರಗಳು ಬಾಕಿ ಇರುವಂತೆ ಪರೀಕ್ಷೆ ಎದುರಿಸುವ ಮಕ್ಕಳು ಹಾಗೂ ಅವರ ಪೋಷಕರನ್ನು ಕಾಡುವ ಸಾಮಾನ್ಯ ಗೊಂದಲ ಪರಿಹರಿಸಲು ಶಿಕ್ಷಣ ಇಲಾಖೆ ಹೊಸ ಕ್ರಮಕ್ಕೆ ನಾಂದಿ ಹಾಡಿದೆ.

    ಸಾಮಾನ್ಯವಾಗಿ ಏಳುವ ಪ್ರಶ್ನೆಗಳನ್ನು ಪಟ್ಟಿ ಮಾಡಿಕೊಂಡ ಪ್ರೌಢ ಶಿಕ್ಷಣ ಮಂಡಳಿ ಅದಕ್ಕೆ ವಿಡಿಯೋ ರೂಪಾಂತರದಲ್ಲಿ ಉತ್ತರ ನೀಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದೆ.

    ಇದು ನಮ್ಮ ರಾಜ್ಯದ ಶಿಕ್ಷಣ ಇಲಾಖೆಯ ವಿಶಿಷ್ಟ ಪ್ರಯೋಗ ಎಂದು ಹೇಳಿಕೊಂಡಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್, ರಾಜ್ಯದ ಕಟ್ಟಕಡೆಯ ಭಾಗದ ವಿದ್ಯಾರ್ಥಿಗೂ ಇದರ ಲಾಭವಾಗಬೇಕೆಂಬುದು ಉದ್ದೇಶ. ಇದರಿಂದ ಅವರೆಲ್ಲರ ಆತಂಕ ದೂರವಾಗಬೇಕು. ಈ ವಿಡಿಯೋ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತಿರುವುದರಿಂದ ಸ್ವಲ್ಪ ದೀರ್ಘವಾಗಿದೆ. (ಸುಮಾರು 51 ನಿಮಿಷಗಳು) ಎಂದು ವಿವರಿಸಿದ್ದಾರೆ.

    ಈ ವಿಡಿಯೋವನ್ನು ಎಲ್ಲ ಎಸ್‌ಎಸ್‌ಎಲ್​ಸಿ ಮಕ್ಕಳಿಗೆ ನೋಡುವಂತೆ ಮಾಡಿ. ಎಲ್ಲರಿಗೂ ಸಹಕಾರಿಯಾಗಲಿ ಎಂದು ಅವರು ಆಶಿಸಿದ್ದಾರೆ.

    ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪೂರ್ವ ತಯಾರಿ ವಿಚಾರದಲ್ಲಿ ವಿಜಯವಾಣಿಯು ಹಮ್ಮಿಕೊಂಡಿದ್ದ ಫೋನ್​ ಇನ್ ಸಂವಾದದ ವೇಳೆ ಈ ವಿಡಿಯೋ ಬಿಡುಗಡೆ ಮಾಡುವ ಚಿಂತನೆಯು ಸಚಿವರು ಮತ್ತು ಇಲಾಖೆ ಆಯುಕ್ತರಲ್ಲಿ ಮೊಳಕೆಯೊಡೆದಿತ್ತು. ಬಳಿಕ ಸಾಮಾನ್ಯ ಗೊಂದಲಗಳನ್ನು ಪಟ್ಟಿಮಾಡಿಕೊಳ್ಳಲು ಸ್ಥಳದಲ್ಲಿಯೇ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದರು. ಇದೀಗ ಉತ್ತರ ರೂಪದ ವಿಡಿಯೋ ಅವತರಣಿಕೆ ಬಿಡುಗಡೆಯಾಗಿದೆ. ಸಚಿವರ ಫೇಸ್‌ಬುಕ್ ಖಾತೆಯಲ್ಲೂ ಅದನ್ನು ವೀಕ್ಷಿಸಬಹುದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts