More

    ಎಸ್ಸೆಸ್ಸೆಲ್ಸಿ ಫಲಿತಾಂಶ : ಡಿ.ಎಸ್. ಧನ್ವಿ ಮೈಸೂರು ಜಿಲ್ಲಾ ಟಾಪರ್

    ಮೈಸೂರಿನ ವಿಜಯನಗರ ಸದ್ವಿದ್ಯಾ ಪ್ರೌಢ ಶಾಲೆಯ ವಿದ್ಯಾರ್ಥಿನಿ ಡಿ.ಎಸ್. ಧನ್ವಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 623 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮ, ರಾಜ್ಯದಲ್ಲಿ ಮೂರನೇ ಟಾಪರ್ ಆಗಿ ಹೊರ ಹೊಮ್ಮಿದ್ದಾಳೆ. ಈಕೆ ಮೈಸೂರಿನ ವಿಜಯನಗರ 4ನೆ ಹಂತದ ನಿವಾಸಿ, ವಿಜಯನಗರ ಸದ್ವಿದ್ಯಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಿ.ಪಿ. ಸುಧನ್ವ, ಕುವೆಂಪುನಗರ ಹಿಲ್‌ವಿವ್ಯೆ ಅಕಾಡೆಮಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಕುಸುಮ ದಂಪತಿ ಪುತ್ರಿಯಾಗಿದ್ದಾಳೆ.

    ‘ಪ್ರತಿನಿತ್ಯ ಮನಸ್ಸಿಟ್ಟು ಓದಿದೆ. ಪ್ರತಿದಿನ ಶಿಕ್ಷಕರು ಕರೆ ಮಾಡಿ ಓದಿನ ಬಗ್ಗೆ ವಿಚಾರಿಸುತ್ತಿದ್ದರು. ಹೀಗಾಗಿ ಉತ್ತಮ ಅಂಕ ಪಡೆಯಲು ಸಾಧ್ಯವಾಯಿತು. ನನ್ನ ಅಪ್ಪ, ಅಮ್ಮ ಉಪನ್ಯಾಸಕರು, ಅವರೇ ನನಗೆ ರೋಲ್‌ಮಾಡಲ್. ಅವರ ಮಾರ್ಗದರ್ಶನದಲ್ಲಿ ನಾನು ಪರೀಕ್ಷೆಗೆ ತಯಾರಿ ಮಾಡಿಕೊಂಡೆ. ಹೀಗಾಗಿ ಯಾವುದೇ ಟ್ಯೂಷನ್ ಪಡೆಯಲಿಲ್ಲ. ಈ ನನ್ನ ಸಾಧನೆ ತುಂಬಾ ಸಂತಸ ತಂದಿದ್ದು, ಮುಂದೆ ಇಂಜಿನಯರಿಂಗ್ ಮಾಡಿ ಏರ್‌ಫೋರ್ಸ್‌ಗೆ ಹೋಗಬೇಕು’ ಎಂಬುದು ನನ್ನ ಕನಸು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts