More

    VIEDO| ಲಾಕ್​ಡೌನ್​ ಅವಧಿ ಮುಗಿದ ನಂತರ ಎಸ್​ಎಸ್​ಎಲ್​ಸಿ ಪರೀಕ್ಷೆ ದಿನ ನಿಗದಿ: ಸಚಿವ ಸುರೇಶ್​ ಕುಮಾರ್​

    ಬೆಂಗಳೂರು: ಮುಂದೂಡಿರುವ ಎಸ್​ಎಸ್​ಎಲ್​ಸಿ ಪರೀಕ್ಷೆ ದಿನವನ್ನು ಲಾಕ್​ಡೌನ್​ ಅವಧಿ ಮುಗಿದ ನಂತರ ನಿರ್ಧಾರ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶಕುಮಾರ್‌ ​ ತಿಳಿಸಿದ್ದಾರೆ.

    ಪರೀಕ್ಷೆ ದಿನಾಂಕ ನಿಗದಿ ಹಾಗೂ ವಿದ್ಯಾರ್ಥಿಗಳಿಗೆ ಧೈರ್ಯದ ಮಾತು ಹೇಳಿರುವ ವಿಡಿಯೋ ಅನ್ನು ಅವರು ಸಾಮಾಜಿ ಜಾಲ ತಾಣದಲ್ಲಿ ಅಪ್​ಲೋಡ್​ ಮಾಡಿದ್ದಾರೆ.

    ಇಂದು ಎಸ್​ಎಸ್​ಎಲ್​ಸಿ ಪರೀಕ್ಷೆ ಆರಂಭವಾಗಬೇಕಿತ್ತು. ರಾಜ್ಯದ 8.5 ಲಕ್ಷ ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದರು. ಕರೊನಾ ವೈರಸ್​ ಭೀತಿಯಿಂದ ಮುಂದೂಡಲಾಯಿತು. ರಾಷ್ಟ್ರದಲ್ಲಿ ಘೋಷಿಸಿರುವ ಲಾಕ್​ಡೌನ್​ ಅವಧಿ ಮುಗಿದ ನಂತರ ಪರೀಕ್ಷೆ ದಿನಾಂಕ ನಿಗದಿಪಡಿಸಲಾಗುವುದು. ಅಲ್ಲಿವರೆಗೆ ವಿದ್ಯಾರ್ಥಿಗಳು ಉತ್ಸಾಹ ಕಳೆದುಕೊಳ್ಳದೆ ಮನೆಯಲ್ಲೇ ಇದ್ದು ಅಭ್ಯಾಸ ಮಾಡಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ.

    ಜೀವನದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯುವುದೇ ಮುಖ್ಯ ಅಲ್ಲ. ಅದಕ್ಕಿಂತ ಪ್ರಮುಖವಾದ ಪರೀಕ್ಷೆಗಳನ್ನು ಎದುರಿಸಬೇಕಾಗಿದೆ. ಅದರಲ್ಲೂ ಕರೊನಾ ವೈರಸ್​ ಎದುರಿಸುವುದು ದೊಡ್ಡ ಯುದ್ಧವಾಗಿದೆ. ಹೀಗಾಗಿ ಪರೀಕ್ಷೆ ಬರೆಯಲಿಲ್ಲ ಎಂಬ ಭೀತಿ ಬಿಟ್ಟು, ಅಪ್ಪ-ಅಮ್ಮನ ಜತೆ ಮನೆಯಲ್ಲೇ ಇದ್ದು ದಿನಕ್ಕೆ ಒಂದು ವಿಷಯದಂತೆ ಎಲ್ಲ ವಿಷಯಗಳನ್ನು ಅಭ್ಯಾಸ ಮಾಡಿ ಎಂದು ಮನವಿ ಮಾಡಿದ್ದಾರೆ.

    ಸಮಾಜ ಹಾಗೂ ಗಣಿತ ವಿಷಯಗಳು ತುಂಬ ಕಷ್ಟ ಎಂದು ವಿದ್ಯಾರ್ಥಿಗಳು ಹೇಳುತ್ತಿದ್ದಾರೆ. ಹೀಗಾಗಿ ಈ ವಿಷಯಗಳಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ನೀಡಿರುವ ಎಲ್ಲ ಸಾಮಗ್ರಿಗಳನ್ನು ಕೂಡಿಸಿಕೊಂಡು ಹೆಚ್ಚು ಸಮಯ ಇರುವುದರಿಂದ ಅಭ್ಯಾಸ ಮಾಡಿ. ಮನೆಯಲ್ಲೇ ಇರಿ ಹೊರಗೆ ಬರಬೇಡಿ. ಕರೊನಾ ವಿರುದ್ಧ ಯುದ್ಧ ಮಾಡಿ ಗೆಲ್ಲಿ. ನಂತರ ಎಸ್​ಎಸ್​ಎಲ್​ಸಿ ಪರೀಕ್ಷೆ ಗೆಲುವು ಸುಲಭವಾಗುತ್ತದೆ ಎಂದು ಅವರು ವಿಡಿಯೋದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ.

    ಕರೊನಾ ವೈರಸ್​ ಸೋಂಕು ತಡೆಯಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಮಣ್ಣು ಸುರಿದ ಗ್ರಾಮಸ್ಥರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts