More

    ಜಿಲ್ಲಾಡಳಿತದ ವಿರುದ್ಧ ಒಕ್ಕಲಿಗ ಸಮುದಾಯ ಆಕ್ರೋಶ: ಶ್ರೀರಂಗಪಟ್ಟಣ ದಸರಾ ವಿಚಾರದಲ್ಲಿ ಇಬ್ಬಗೆ ನೀತಿಗೆ ಖಂಡನೆ

    ಮಂಡ್ಯ: ಶ್ರೀರಂಗಪಟ್ಟಣದಲ್ಲಿ ಸೆ.28ರಿಂದ ಅ.2ರವರೆಗೆ ನಡೆಯಲಿರುವ ಪಾರಂಪರಿಕ ದಸರಾ ಮಹೋತ್ಸವದ ಉದ್ಘಾಟನೆಗೆ ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ಅವರನ್ನು ಆಹ್ವಾನಿಸುವ ಕುರಿತು ಪ್ರಸ್ತಾಪಿಸಿ ಅಂತಿಮವಾಗಿ ಹೆಸರು ಕೈಬಿಡುವ ಮೂಲಕ ಜಿಲ್ಲಾಡಳಿತ ಒಕ್ಕಲಿಗ ಸಮುದಾಯಕ್ಕೆ ಅವಮಾನ ಮಾಡಿದೆ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ತಿಮ್ಮೇಗೌಡ ಗೌಡಯ್ಯನದೊಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
    ಆ.29ರಂದು ನಡೆದ ದಸರಾ ಉತ್ಸವದ ಪೂರ್ವಭಾವಿ ಸಭೆಯಲ್ಲಿ ದೇವೇಗೌಡರನ್ನು ಆಹ್ವಾನಿಸುವ ಬಗ್ಗೆ ಚರ್ಚೆ ನಡೆದಿತ್ತು. ಅದಕ್ಕೆ ಸಚಿವರು ಮತ್ತು ಅಧಿಕಾರಿಗಳು ಸಹಮತ ವ್ಯಕ್ತಪಡಿಸಿದ್ದರು. ಈ ನಡುವೆ ಎರಡು ದಿನಗಳ ಹಿಂದೆ ಸುತ್ತೂರು ಸ್ವಾಮೀಜಿ ಅವರನ್ನು ದಸರಾಗೆ ಅಹ್ವಾನಿಸಿದ್ದಾರೆ. ದೇವೇಗೌಡರ ಹೆಸರು ಪ್ರಸ್ತಾಪಿಸಿ, ಅವರ ಹೆಸರು ಕೈಬಿಡಲು ಕಾರಣವನ್ನು ಜಿಲ್ಲಾಡಳಿತ ತಿಳಿಸಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
    ಜಿಲ್ಲಾಡಳಿತ ಹಾಗೂ ಸಚಿವರು ಒಕ್ಕಲಿಗ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ. ಎಚ್‌ಡಿಡಿ ಅವರ ಹೆಸರು ಕೈಬಿಡಲು ನಿಖರ ಕಾರಣ ನೀಡದಿದ್ದರೆ ಶ್ರೀರಂಗಪಟ್ಟಣ ತಾಲೂಕಿನ ಕಿರಂಗೂರು ವೃತ್ತದ ಬಳಿ ಸೆ.28ರಂದು ದಸರಾ ಉದ್ಘಾಟನೆ ವೇಳೆ ಪ್ರತಿರೋಧ ತೋರಲಾಗುವುದು. ಜತೆಗೆ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
    ಸಂಘದ ಆರ್.ಜಗದೀಶ್‌ಗೌಡ, ಕೋಣನಹಳ್ಳಿ ಮಂಜು, ಪಟೇಲ್ ದೇವರಾಜು, ರಾಕೇಶ್ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts