More

    ಶ್ರೀಲಂಕಾ ಎದುರು ದಕ್ಷಿಣ ಆಫ್ರಿಕಾ ತಂಡಕ್ಕೆ ಸರಣಿ ಜಯ

    ಜೋಹಾನ್ಸ್‌ಬರ್ಗ್: ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲೂ ಪ್ರಭುತ್ವ ಸಾಧಿಸಿದ ಆತಿಥೇಯ ದಕ್ಷಿಣ ಆಫ್ರಿಕಾ ತಂಡ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 10 ವಿಕೆಟ್‌ಗಳಿಂದ ಮಣಿಸಿತು. ಇದರೊಂದಿಗೆ 2 ಪಂದ್ಯಗಳ ಸರಣಿಯನ್ನು ದಕ್ಷಿಣ ಆಫ್ರಿಕಾ 2-0 ಯಿಂದ ವಶಪಡಿಸಿಕೊಂಡಿತು. ದ ವಾಂಡರರ್ಸ್‌ ಸ್ಟೇಡಿಯಂನಲ್ಲಿ ಮಂಗಳವಾರ ಮುಕ್ತಾಯಗೊಂಡ ಪಂದ್ಯದಲ್ಲಿ ಶ್ರೀಲಂಕಾ ನೀಡಿದ 67 ರನ್ ಗೆಲುವಿನ ಗುರಿ ಬೆನ್ನಟ್ಟಿದ ದ.ಆಫ್ರಿಕಾ ವಿಕೆಟ್ ನಷ್ಟವಿಲ್ಲದೆ ಈ ಸಾಧನೆ ಮಾಡಿತು. ಆರಂಭಿಕರಾದ ಏಡನ್ ಮಾರ್ಕ್ರಮ್ (36*ರನ್, 53 ಎಸೆತ, 4 ಬೌಂಡರಿ) ಹಾಗೂ ಡೀನ್ ಎಲ್ಗರ್ (31*ರನ್, 27 ಎಸೆತ, 5 ಬೌಂಡರಿ) ಜೋಡಿ ಅಜೇಯ ಸಾಧನೆ ಮಾಡಿತು.

    ಇದನ್ನೂ ಓದಿಆಸ್ಟ್ರೇಲಿಯಾ ವಿರುದ್ಧದ ಉಳಿದ ಎರಡು ಟೆಸ್ಟ್ ಪಂದ್ಯಗಳಿಂದ ಹೊರಬಿದ್ದ ಕೆಎಲ್ ರಾಹುಲ್, 

    ಇದಕ್ಕೂ ಮೊದಲು 4 ವಿಕೆಟ್‌ಗೆ 150 ರನ್‌ಗಳಿಂದ ದಿನದಾಟ ಆರಂಭಿಸಿದ ಶ್ರೀಲಂಕಾ ತಂಡ, ಲುಂಗಿ ಎನ್‌ಗಿಡಿ (44ಕ್ಕೆ 4) ಹಾಗೂ ಲುಥೋ ಸಿಪಾಂಮ್ಲ (40ಕ್ಕೆ 3) ಜೋಡಿ ಮಾರಕ ದಾಳಿಗೆ ನಲುಗಿ 211 ರನ್‌ಗಳಿಗೆ ಸರ್ವಪತನ ಕಂಡಿತು. 91 ರನ್‌ಗಳಿಂದ ಇನಿಂಗ್ಸ್ ಮುಂದುವರಿಸಿದ ದಿಮುತ್ ಕರುಣರತ್ನೆ (103) ಶತಕ ಸಾಧನೆ ಮಾಡಿದರು. ಶ್ರೀಲಂಕಾ ಮೊದಲ ಇನಿಂಗ್ಸ್ 157 ರನ್‌ಗಳಿಸಿದರೆ, ದಕ್ಷಿಣ ಆಫ್ರಿಕಾ 302 ರನ್‌ಗಳಿಸಿ 145 ರನ್ ಮುನ್ನಡೆ ಸಾಧಿಸಿತ್ತು. ಡೀನ್ ಎಲ್ಗರ್ ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಜಯಿಸಿದರು.

    ಇದನ್ನೂ ಓದಿ: ಪಾಕ್ ಕ್ರಿಕೆಟ್ ತಂಡದ ಮಾಜಿ ನಾಯಕಿ ಸನಾ ಮೀರ್‌ಗೆ ಕರೊನಾ

    ಶ್ರೀಲಂಕಾ: 157 ಮತ್ತು 211 (ದಿಮುತ್ ಕರುಣರತ್ನೆ 103, ಲುಂಗಿ ಎನ್‌ಗಿಡಿ 44ಕ್ಕೆ 4, ಅನ್ರಿಚ್ ನೋರ್ಜೆ 64ಕ್ಕೆ 2, ಲುಥೋ ಸಿಪಾಂಮ್ಲ 40ಕ್ಕೆ 3), ದಕ್ಷಿಣ ಆಫ್ರಿಕಾ: 302 ಮತ್ತು 13.2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 67 (ಏಡನ್ ಮಾರ್ಕ್ರಮ್ 36*, ಡೀನ್ ಎಲ್ಗರ್ 31*).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts