More

    ಶಿಕ್ಷೆ ಕೊಡಿಸುವಲ್ಲಿ ಅರಣ್ಯ ಸಿಬ್ಬಂದಿ ವಿಫಲ

    ಸೊರಬ: ಕಾನೂನು ಮಾಹಿತಿ ಕೊರತೆಯಿಂದ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗುತ್ತಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಶ್ರೀಕಾವೇರಿ ಬಿ. ಕಲ್ಮಠ್ ಹೇಳಿದರು.

    ಪಟ್ಟಣದಲ್ಲಿ ಬುಧವಾರ ಅರಣ್ಯ ಇಲಾಖೆ, ತಾಲೂಕು ಕಾನೂನು ಸೇವಾ ಸಮಿತಿಯಿಂದ ಹಮ್ಮಿಕೊಂಡಿದ್ದ ಕ್ಷೇತ್ರ ಮಟ್ಟದ ಸಿಬ್ಬಂದಿಗೆ ಅರಣ್ಯ ಕಾಯ್ದೆ, ವನ್ಯಜೀವಿ ಸಂರಕ್ಷಣಾ ಕಾಯ್ದೆ ಹಾಗೂ ಸಿಆರ್​ಪಿಸಿಗಳ ಬಗ್ಗೆ ಒಂದು ದಿನದ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

    ಅರಣ್ಯ ಸಂಪನ್ಮೂಲಗಳನ್ನು ಕಳ್ಳತನ ಮಾಡುವವರನ್ನು ಅರಣ್ಯ ಸಿಬ್ಬಂದಿ ಕಷ್ಟಪಟ್ಟು ಬಂಧಿಸುತ್ತಾರೆ. ನಂತರದಲ್ಲಿ ಅವರಿಗೆ ಶಿಕ್ಷೆ ಕೊಡಿಸುವಲ್ಲಿ ಪಂಚನಾಮೆಗಳ ಲೋಪ ಕಾಡುತ್ತದೆ. ಪ್ರಾಥಮಿಕ ತನಿಖಾ ವರದಿಯಲ್ಲಿನ ಹೇಳಿಕೆ ಹಾಗೂ ಸಮರ್ಪಕವಾಗಿ ಪ್ರಕರಣ ದಾಖಲಿಸದೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುತ್ತಾರೆ. ಇಂತಹ ಪ್ರಕರಣಗಳಲ್ಲಿ ನ್ಯಾಯಾಧೀಶರು ತೀರ್ಪಗಳನ್ನು ಎತ್ತಿಹಿಡಿಯಲು ಕಷ್ಟವಾಗುತ್ತದೆ. ಆದ್ದರಿಂದ ಅರಣ್ಯ ಸಿಬ್ಬಂದಿ ನಿಷ್ಪಕ್ಷಪಾತ ತನಿಖೆ ನಡೆಸಿ ನ್ಯಾಯಾಲಯಕ್ಕೆ ಪೂರಕ ಸಾಕ್ಷ್ಯಾಧಾರ ಒದಗಿಸಿದಾಗ ಕಾನೂನು ಎತ್ತಿಹಿಡಿಯಲು ಸಾಧ್ಯ ಎಂದರು.

    ಅರಣ್ಯ ಕಾಯ್ದೆ ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆ ಕುರಿತು ಶಿರಸಿಯ ಹಿರಿಯ ನ್ಯಾಯವಾದಿ ವಿ.ಜಿ.ಭಂಡಿ ಪಾತ್ಯಕ್ಷಿಕೆ ನೀಡಿದರು. ವಲಯ ಸಂರಕ್ಷಣಾಧಿಕಾರಿ ಪ್ರವೀಣ್​ಕುಮಾರ್ ಬಸ್ರೂರು, ವಕೀಲರ ಸಂಘದ ಅಧ್ಯಕ್ಷ ಕೆ.ಬಿ.ಬಸವರಾಜ್, ಕಾರ್ಯದರ್ಶಿ ಸಿ.ವೈ.ಅಶೋಕ್, ಹಿರಿಯ ನ್ಯಾಯವಾದಿ ಎಂ.ಆರ್.ಪಾಟೀಲ್, ದಿನಕರ ಭಟ್ ಭಾವೆ, ಸೊರಬ ವಲಯ ಅರಣ್ಯಾಧಿಕಾರಿ ಪ್ರಭುರಾಜ್ ಪಾಟೀಲ್, ಆನವಟ್ಟಿ ವಲಯ ಅರಣ್ಯಾಧಿಕಾರಿ ಜಾವಿದ್ ಭಾಷಾ ಅಂಗಡಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts