More

    ಪದವೀಧರರು ಭವಿಷ್ಯದಲ್ಲಿ ದೇಶದ ಆಸ್ತಿ, ಶ್ರೀದೇವಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಆಶಯ

    ಮಂಗಳೂರು: ಶ್ರೀದೇವಿ ಶಿಕ್ಷಣ ಸಂಸ್ಥೆಗಳ ಫಾರ್ಮಸಿ, ಫಿಸಿಯೋಥೆರಪಿ, ನರ್ಸಿಂಗ್ ಮತ್ತು ಸೋಶಿಯಲ್ ವರ್ಕ್ ಕಾಲೇಜಿನ ಪದವಿ ಪ್ರದಾನ ಹಾಗೂ ರ‌್ಯಾಂಕ್ ವಿಜೇತರ ಅಭಿನಂದನಾ ಸಮಾರಂಭ ಕೆಂಜಾರಿನ ಶ್ರೀದೇವಿ ತಾಂತ್ರಿಕ ವಿದ್ಯಾಲಯದ ಸಭಾಂಗಣದಲ್ಲಿ ನಡೆಯಿತು.

    ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ಡಾ.ಜಯಪ್ರಕಾಶ್ ಶೆಟ್ಟಿ ಮಾತನಾಡಿ, ಇಂದಿನ ಪದವೀಧರರು ವೃತ್ತಿ ಜೀವನದಲ್ಲಿ ಹೊಸ ಆವಿಷ್ಕಾರಗಳಿಗೆ ಒಡ್ಡಿಕೊಳ್ಳುವುದರೊಂದಿಗೆ ಸಮಾಜಮುಖಿಯಾಗಿ ಬದುಕಬೇಕು ಎಂದರು.

    ಶ್ರೀದೇವಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಮಾತನಾಡಿ, ಪದವೀಧರರು ಭವಿಷ್ಯದಲ್ಲಿ ದೇಶದ ಆಸ್ತಿಯಾಗಿ ಪ್ರಜ್ವಲಿಸಬೇಕು ಎಂದರು.

    ಶ್ರೀದೇವಿ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ನಿಧೀಶ್ ಎಸ್.ಶೆಟ್ಟಿ, ಟ್ರಸ್ಟಿ ಪ್ರಿಯಾಂಕ ಎನ್.ಶೆಟ್ಟಿ , ಕಾಲೇಜುಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು. ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ನಡೆಸಿದ ಪರೀಕ್ಷೆಗಳಲ್ಲಿ ರ‌್ಯಾಂಕ್ ಪಡೆದ ಶ್ರೀದೇವಿ ಕಾಲೇಜಿನ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

    ಶ್ರೀದೇವಿ ಶಿಕ್ಷಣ ಸಂಸ್ಥೆಯ 164 ಫಾರ್ಮಸಿ, 122 ಫಿಸಿಯೋಥೆರಪಿ, 81 ನರ್ಸಿಂಗ್ ಹಾಗೂ 9 ಸೋಶಿಯಲ್ ವರ್ಕ್‌ನ ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು. ಸೋಶಿಯಲ್ ವರ್ಕ್ ಕಾಲೇಜು ಪ್ರಾಂಶುಪಾಲೆ ಅಭಿತಾ ಎಸ್. ಪ್ರತಿಜ್ಞಾ ವಿಧಿ ಬೋಧಿಸಿದರು. ಫಿಸಿಯೋಥೆರಪಿ ಕಾಲೇಜಿನ ಪ್ರಾಧ್ಯಾಪಕಿ ಸ್ಪೂರ್ತಿ ಸ್ವಾಗತಿಸಿ, ನರ್ಸಿಂಗ್ ಕಾಲೇಜಿನ ಪ್ರಾಧ್ಯಾಪಕಿ ಅಡ್ವಿನಾ ವಂದಿಸಿದರು.

    ಫಾರ್ಮಸಿ ಕಾಲೇಜಿನ ಸಹ ಪ್ರಾಧ್ಯಾಪಕಿ ರಿಹಾಬ್ ತೋನ್ಸೆ ಮತ್ತು ಮನಿಷಾ ಮಸ್ಕರೇನಸ್ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts