More

    ಧರ್ಮ ಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ

    ಬಾಳೆಹೊನ್ನೂರು: ಅಸತ್ಯದಿಂದ ಸತ್ಯದೆಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವುದೇ ಧರ್ಮದ ಗುರಿಯಾಗಿದ್ದು, ಧರ್ಮ ಮರೆತರೆ ಅಪಾಯ ತಪ್ಪಿದ್ದಲ್ಲ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

    ಶ್ರೀ ರಂಭಾಪುರಿ ಪೀಠದಲ್ಲಿ ಪೌರ್ಣಿಮಾ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಸಂತೃಪ್ತ ಸಮೃದ್ಧಿ ಬದುಕಿಗಾಗಿ ಪ್ರತಿಯೊಬ್ಬರೂ ಧರ್ಮ ಆಚರಣೆ ಮಾಡಬೇಕು ಎಂದರು.

    ದೇಹವೊಂದು ದೇವಾಲಯವೆಂದು ತಿಳಿದುಕೊಳ್ಳಿ. ತಲೆಯೊಳಗಿನ ಜ್ಞಾನದ ಬೆಳಕೇ ದೇಹ ದೇವಾಲಯದ ಹೊನ್ನ ಕಳಸ. ಕಲ್ಲು ಮಣ್ಣಿನ ಗುಡಿ, ದೇಗುಲಗಳು ಕಾಲಾಂತರದಲ್ಲಿ ಶಿಥಿಲಗೊಳ್ಳಬಹುದು ಅಥವಾ ಬೀಳಬಹುದು. ಸತ್ಯ ದರ್ಶನವೇ ಜ್ಞಾನ. ಜ್ಞಾನ ಸತ್ಯದಷ್ಟೇ ಸುಂದರ ಮತ್ತು ಪವಿತ್ರ ಎಂದರು.

    ಸೂರ್ಯನ ಬೆಳಕಿನಿಂದಲೇ ಜಗತ್ತು ಸುಂದರವಾಗಿ ಕಾಣುತ್ತದೆ. ಒಳಗಿನ ಬೆಳಕು ಅರಿವಿಗೆ ಬರಲು ಗುರುನಾಥನ ಕಾರುಣ್ಯ ಬೇಕು. ಸಂತ ಮಹಾಂತರು ಜ್ಞಾನ ಯೋಗಕ್ಕೆ ಶ್ರಮಿಸಿದರೆ, ಸಾಮಾನ್ಯ ಜನರು ಭೋಗ ಜೀವನಕ್ಕಾಗಿ ಕಾಲ ಕಳೆಯುತ್ತಾರೆ. ಧನ ಕನಕ ಗಳಿಸಿ ಮನದ ಶಾಂತಿ ಕಳೆದುಕೊಂಡವರು ಬಹಳಷ್ಟು ಜನ. ಆದರೆ ಜ್ಞಾನಿಗಳು ಆಸ್ತಿ ಗಳಿಸದೆ ಚಿರಶಾಂತಿ ಗಳಿಸಿಕೊಂಡು ಬಾಳಿದರೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸ್ಪಷ್ಟಪಡಿಸಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts