More

    ಶ್ರೀರಾಮ ಪ್ರತಿಷ್ಠಾಪನೆ ಸಂಭ್ರಮಾಚರಣೆ

    ಯಳಂದೂರು: ಅಯೋಧ್ಯೆಯಲ್ಲಿ ಸೋಮವಾರ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆಗೊಂಡ ಹಿನ್ನೆಲೆಯಲ್ಲಿ ಪಟ್ಟಣವೂ ಸೇರಿದಂತೆ ತಾಲೂಕಿನ ವಿವಿಧೆಡೆ ವಿಶೇಷ ಪೂಜೆ ಹಾಗೂ ಸಂಭ್ರಮಾಚರಣೆಗಳು ನಡೆದವು.

    ಅಯೋಧ್ಯೆಯಲ್ಲಿ ಮೂರ್ತಿ ಪ್ರತಿಷ್ಠಾಪನೆ ನಡೆದ ತುಸು ಹೊತ್ತಿನಲ್ಲೇ ಇಲ್ಲಿನ ಪಟ್ಟಣದ ದೇವಾಂಗ ಬೀದಿಯಲ್ಲಿರುವ ಶ್ರೀರಾಮಮಂದಿರದಲ್ಲಿ ರಾಮದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ನೆರೆದಿದ್ದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ನೂರಾರು ಭಕ್ತರು ದೇವರ ದರ್ಶನ ಪಡೆದು ಪ್ರಸಾದ ಸೇವಿಸಿದರು.

    ಪಟ್ಟಣದ ಗಾಂಧಿ ಸರ್ಕಲ್, ಬಳೇಮಂಟಪದ ಮುಂಭಾಗ, ಬಳೇಪೇಟೆ ಸೇರಿದಂತೆ ವಿವಿಧೆಡೆ ಶ್ರೀರಾಮನ ಪಟವನ್ನು ಇಟ್ಟು ಪೂಜೆ ಸಲ್ಲಿಸಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ತಳಿರು ತೋರಣ, ಕೇಸರಿ ಧ್ವಜವನ್ನು ಹಾಕಿ ಅಲಂಕಾರ ಮಾಡಲಾಗಿತ್ತು.

    ತಾಲೂಕಿನ ಬಿಳಿಗಿರಿರಂಗನಬೆಟ್ಟ, ಗುಂಬಳ್ಳಿ, ಯರಗಂಬಳ್ಳಿ, ಉಪ್ಪಿನಮೋಳೆ, ವೈ.ಕೆ.ಮೋಳೆ, ಕಂದಹಳ್ಳಿ, ಹೊನ್ನೂರು, ಕೆಸ್ತೂರು, ಯರಿಯೂರು, ಮದ್ದೂರು, ಅಗರ, ಮಾಂಬಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲೂ ಶ್ರೀರಾಮ ಪ್ರತಿಷ್ಠಾಪನೆಯ ದಿನದಂದು ವಿಶೇಷ ಪೂಜೆ, ಹೋಮಹವನಗಳನ್ನು ನಡೆಸಲಾಯಿತು. ಅಲ್ಲಲ್ಲಿ ಭಕ್ತರಿಗೆ ನೀರು ಮಜ್ಜಿಗೆ, ಪಾನಕ, ಕೋಸಂಬರಿ, ಸಿಹಿಯನ್ನು ಹಂಚಿ ಹಬ್ಬದಂತೆ ಸಂಭ್ರಮಿಸಲಾಯಿತು.

    22ವೈಎಲ್‌ಡಿ ಚಿತ್ರ 2: ಯಳಂದೂರು ಪಟ್ಟಣದ ದೇವಾಂಗಬೀದಿಯ ಶ್ರೀರಾಮಮಂದಿರದಲ್ಲಿ ಸೋಮವಾರ ಅಯೋಧ್ಯೆಯಲ್ಲಿ ಶ್ರೀರಾಮ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಕೈಗೊಂಡು ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts