More

    17ರಿಂದ ಶ್ರೀ ನಂದಿ ಬಸವೇಶ್ವರಸ್ವಾಮಿ ಉತ್ಸವ

    ಮದ್ದೂರು: ತಾಲೂಕಿನ ಆತಗೂರು ಹೋಬಳಿಯ ಚಿಕ್ಕಅಂಕನಹಳ್ಳಿಯ ಪುರಾಣ ಪ್ರಸಿದ್ಧ ಹಾಗೂ ಶಿಂಷಾ ನದಿಯ ಎಡಭಾಗದಲ್ಲಿ ನೆಲೆಸಿರುವ ಶ್ರೀ ನಂದಿ ಬಸವೇಶ್ವರಸ್ವಾಮಿ ಮಹಾ ಉತ್ಸವ ಮತ್ತು ಶ್ರೀ ನಂದಿ ಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಜ.17 ರಿಂದ 28ವರೆಗೆ ನಡೆಯಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಹಸೀಲ್ದಾರ್ ಕೆ.ಎಸ್.ಸೋಮಶೇಖರ್ ತಿಳಿಸಿದ್ದಾರೆ.

    ಜ.21 ರಂದು ಬೆಳಗ್ಗೆ 11 ರಿಂದ 11.45 ಗಂಟೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಶ್ರೀ ನಂದಿ ಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಉತ್ಸವ ಹಾಗೂ ಜಾತ್ರಾ ಮಹೋತ್ಸವ ಅಂಗವಾಗಿ ಜ.17 ರ ಬುಧವಾರ ಪ್ರಥಮ ಪುಣ್ಯಾಹ, ನಂದಿ ಧ್ವಜಾರೋಹಣ ಮತ್ತು ಅಂಕುರಾರ್ಪಣೆ. ಗುರುವಾರ ರುದ್ರಾಭಿಷೇಕ, ಬಿಲ್ವಾರ್ಚನೆ, ಬನ್ನಿಮಂಟಪ ಪ್ರದಕ್ಷಿಣೆ, ಕುಂಕುಮಾರ್ಚಣೆ, ಶುಕ್ರವಾರ ಉಯ್ಯಲೋತ್ಸವ, ಶನಿವಾರ ಚಿತ್ರ ಮಂಟಪೋತ್ಸವ, ಭಾನುವಾರ ಮಹಾ ಉತ್ಸವ, ಸೋಮವಾರ ಹುಲಿವಾಹನೋತ್ಸವ, ಮಂಗಳವಾರ ಹೂವಿನ ಪಲ್ಲಕ್ಕಿ ಉತ್ಸವ, ಬುಧವಾರ ಚಂದ್ರ ಮಂಡೋತ್ಸವ, ಗುರುವಾರ ಅಶ್ವವಾಹನೋತ್ಸವ, ಶುಕ್ರವಾರ ತೆಪ್ಪೋತ್ಸವ, ಶನಿವಾರ ವೃಷಭೋತ್ಸವ ಹಾಗೂ ಭಾನುವಾರ ವಸಂತೋತ್ಸವ, ಮಹಾಮಂಗಳಾರತಿ, ರಥಸಪ್ತಮಿ ಪೂಜೆ ಸೇರಿದಂತೆ ಇನ್ನಿತರರ ಧಾರ್ಮಿಕ ಕಾರ್ಯಕ್ರಮಗಳು ಹಮಿಕೊಳ್ಳಲಾಗಿದೆ ಎಂದು ದೇಗುಲದ ಅರ್ಚಕರಾದ ಜೆ.ಎಂ.ಕಲ್ಲೇಶ್‌ಕುಮಾರ್ ಹಾಗೂ ಸಿ.ಬಿ.ಗೌರಿಶಂಕರ್ ತಿಳಿಸಿದ್ದಾರೆ.

    ವರ್ಷದ ಮೊದಲು ನಡೆಯುವ ಶ್ರೀ ನಂದಿ ಬಸವೇಶ್ವರ ಸ್ವಾಮಿ ಮಹಾ ಉತ್ಸವ ಮತ್ತು ಶ್ರೀ ನಂದಿ ಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಹಸ್ರಾರು ಭಕ್ತಾದಿಗಳು ಆಗಮಿಸುತ್ತಾರೆ ಹಾಗೂ ಸಾವಿರಾರು ರಾಸುಗಳು ಜಾತ್ರೆಗೆ ಸೇರುವುದು ಇಲ್ಲಿನ ವಿಶೇಷವಾಗಿದೆ.

    ರೈತರಿಗೆ ಅನುಕೂಲ: ಚಿಕ್ಕ ಅಂಕನಹಳ್ಳಿ ಗ್ರಾಮದಲ್ಲಿ ನಡೆಯುವ ಶ್ರೀ ನಂದಿ ಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಜಾನುವಾರುಗಳ ಮೇಲಿನ ಸುಂಕ, ಅಂಗಡಿಗಳ ಮೇಲಿನ ಸುಂಕ ಹಾಗೂ ವಾಹನಗಳ ಸುಂಕವನ್ನು ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಭರಿಸುವ ಮೂಲಕ ರೈತರಿಗೆ ಹಾಗೂ ಅಂಗಡಿ ಮಾಲೀಕರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts