More

    ಶ್ರೀಏಕನಾಥ ಯಲ್ಲಮ್ಮ ದೇವಿ ಬ್ರಹ್ಮ ರಥೋತ್ಸವ ಸಂಪನ್ನ

    ತರೀಕೆರೆ: ತಾಲೂಕಿನ ಹಿರೇಕಾತೂರು ಗ್ರಾಮದ ಶ್ರೀಏಕನಾಥ ಯಲ್ಲಮ್ಮ ದೇವಿಯ ಬ್ರಹ್ಮ ರಥೋತ್ಸವ ಹಾಗೂ ಸಿಡಿ ಮಹೋತ್ಸವ ಶನಿವಾರ ವಿಜೃಂಭಣಿಯಿಂದ ಜರುಗಿತು.
    ಶುಕ್ರವಾರ ತಡರಾತ್ರಿಯಿಂದ ಶ್ರೀ ಏಕನಾಥ ಯಲ್ಲಮ್ಮ ದೇವಿಯ ದೇಗುಲದ ಆವರಣದಲ್ಲಿ ಗಜೋತ್ಸವ, ಹೂವಿನ ಉತ್ಸವ, ಇನ್ನಿತರ ಧಾರ್ಮಿಕ ಆಚರಣೆಗಳು ನೆರವೇರಿದವು. ಶನಿವಾರ ಬೆಳಗ್ಗೆ ಸಂಪ್ರದಾಯದಂತೆ ಅಮ್ಮನವರ ಬ್ರಹ್ಮ ರಥೋತ್ಸವ ನಡೆಯಿತು. ಸಂಜೆ 6.15ರ ವೇಳೆಗೆ ಹೊತ್ತಿಗೆ ಸಿಡಿ ಮಹೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ಜರುಗಿತು.
    11 ದಿನಗಳಿಂದ ವೃತ ಉಪವಾಸ ಮಾಡಿದ ಅಮ್ಮನವರ ಗಣ ಮಗ ಮೂರ್ತಪ್ಪ, ಶ್ರೀಏಕನಾಥ ಯಲ್ಲಮ್ಮ ದೇವಿ ಹಾಗೂ ಶ್ರೀ ಕೆಂಡದ ಮಾರಿಯಮ್ಮ ದೇವಿಯವರ ಉತ್ಸವ ಮೂರ್ತಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರಲ್ಲದೇ, ದೈವಿಶಕ್ತಿಯ ಬಲದಿಂದ ಗರ್ಭಗುಡಿ ಮುಂಭಾಗದಲ್ಲಿರುವ ಸಿಡಿ ಕಂಬವೇರಿ ಮೂರು ಸುತ್ತು ಪ್ರದಕ್ಷಿಣೆ ಹಾಕಿದರು.
    ಸಿಡಿ ಮಹೋತ್ಸವದ ವೇಳೆ ಭಕ್ತರು ಹಾಕಿದ ಹರ್ಷೋದ್ಗಾರ ಮುಗಿಲು ಮುಟ್ಟುವಂತಿತ್ತು. ಕೆಲವರು ಬೇವಿನ ಸೀರೆಯುಟ್ಟು ಹರಕೆ ತೀರಿಸಿದರೆ, ಮತ್ತೆ ಕೆಲವರು ಬಾಳೆಹಣ್ಣು, ನಿಂಬೆಹಣ್ಣು, ಹೂವು, ಕೋಳಿ ಸಿಡಿ ಮೇಲೆ ತೂರಿ ಭಕ್ತಿ ಸಮರ್ಪಿಸಿದರು. ತರೀಕೆರೆ ಪಟ್ಟಣ ಮಾತ್ರವಲ್ಲದೇ, ಬೇಲೇನಹಳ್ಳಿ, ಜೋಡಿಕೋಡಿಹಳ್ಳಿ, ಹುರುಳಿಹಳ್ಳಿ, ತಿಮ್ಮಾಪುರ, ಪಿರಮೇನಹಳ್ಳಿ, ಕಟ್ಟೇಹೊಳೆ, ಬೇಲೇನಹಳ್ಳಿ ತಾಂಡಾ, ಲಕ್ಕೇನಹಳ್ಳಿ, ಎ ಮತ್ತು ಬಿ.ರಾಮನಹಳ್ಳಿ, ಇಟ್ಟಿಗೆ, ಎಂ.ಸಿ.ಹಳ್ಳಿ, ಯರೇಬೈಲು ಮತ್ತಿತರ ಕಡೆಗಳಿಂದ ಸಿಡಿ ಮಹೋತ್ಸವಕ್ಕೆ ಆಗಮಿಸಿದ ಭಕ್ತರು ದೇವಿ ದರ್ಶನ ಪಡೆದು ವಿಶೇಷ ಸಲ್ಲಿಸಿದರು.
    ಜೋಡಿಕೋಡಿಹಳ್ಳಿ, ಬೇಲೇನಹಳ್ಳಿ, ತಿಮ್ಮಾಪುರ, ಹುರುಳಿಹಳ್ಳಿ ಮತ್ತಿತರ ಕಡೆಗಳಿಂದ ಆಗಮಿಸಿದ್ದ ಪಾನಕದ ಬಂಡಿಗಳು ಸಿಡಿ ಮಹೋತ್ಸವಕ್ಕೆ ಮೆರಗು ನೀಡಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts