More

    ಎಸ್‌ಪಿಎಸ್ ಬ್ಯಾಂಕ್ ಗೆ 2.52 ಕೋಟಿ ರೂ. ಲಾಭ

    ಸಂಡೂರು: ಪ್ರಸಕ್ತ 2023ನೇ ಸಾಲಿನಲ್ಲಿ ಸಂಡೂರು ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ (ಎಸ್‌ಪಿಎಸ್) 2.52 ಕೋಟಿ ಲಾಭಗಳಿಸಿದ್ದು, ಇದರಲ್ಲಿ 60.86 ಲಕ್ಷ ರೂ. ಆದಾಯ ತೆರಿಗೆ ಪಾವತಿಸಲಾಗಿದೆ ಎಂದು ಬ್ಯಾಂಕ್ ಸಂಸ್ಥಾಪಕ ಅಧ್ಯಕ್ಷ ಕೆ.ಎಸ್.ನಾಗರಾಜ್ ತಿಳಿಸಿದರು.

    ಪಟ್ಟಣದ ರತ್ನದೀಪ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ 26ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು. ಶೇ.20 ಲಾಭಾಂಶ ಸದಸ್ಯರಿಗೆ ನೀಡಲು ತೀರ್ಮಾನಿಸಲಾಗಿದೆ. ಬ್ಯಾಂಕ್ ಸತತವಾಗಿ 0% ಎನ್‌ಪಿಎ (ಅನುತ್ಪಾದಕ ಆಸ್ತಿ) ಹೊಂದಿರುತ್ತದೆ. ಹಣದುಬ್ಬರ, ಜಾಗತಿಕ ಆರ್ಥಿಕ ಮಂದಗತಿಯಂತಹ ಹಲವಾರು ಘಟನೆಗಳಾಗಿವೆ. ಆರ್‌ಬಿಐ ರೆಪೋ ದರ ಹೆಚ್ಚಿಸಿದ್ದು ಬ್ಯಾಂಕಿಂಗ್ ಕ್ಷೇತ್ರಕ್ಕೆ ಸವಾಲಾಗಿದೆ. ಬ್ಯಾಂಕಿನ ಸದಸ್ಯರ ಸಂಖ್ಯೆಯು 4838 ಇದ್ದು, ಪ್ರಸಕ್ತ ಸಾಲಿನಲ್ಲಿ ಶೇ.11.48ರ ಪ್ರಗತಿ ಸಾಧಿಸಿದೆ. ಡಿಜಿಟಲ್ ಬ್ಯಾಂಕಿಂಗ್, ಸಂಪೂರ್ಣ ಗಣಕೀಕೃತ ಖಾತೆಗಳೊಂದಿಗೆ ವ್ಯವಹಾರ, ಸಂಜೆ 6.30ರವರೆಗೂ ಹಣ ಕಟ್ಟುವ ತೆಗೆಯುವ ವ್ಯವಸ್ಥೆಯಿದೆ ಎಂದರು.

    ಇದನ್ನೂ ಓದಿ: ಕಾಯಕಲ್ಪ ಪ್ರಶಸ್ತಿ ಪಡೆಯಲು ಶ್ರಮಿಸಿ

    ವ್ಯವಸ್ಥಾಪಕ ಕೆ.ಪ್ರಕಾಶ ಮಾತನಾಡಿ, ಜು.26ಕ್ಕೆ ಮಕ್ಕಳ, ಮಹಿಳೆಯರಿಗೆ ಬ್ಯಾಂಕ್‌ನಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಪ್ರಮುಖರಾದ ಅಂಕಮನಾಳ್ ಮಯೂರ, ಕೆ.ವೀರಪ್ಪ, ಜ್ಯೋತಿ ನಂಜುಂಡಪ್ಪ, ಅಂಕಮನಾಳ್ ಸಿದ್ದಪ್ಪ, ಸುಮಿತ್ರಾ ಹಾಲಂಬಿ, ಬಿ.ಎಸ್.ಬೊಮ್ಮಯ್ಯ, ಗಾಣೀಗರ ವೀರೇಶ್, ಮಾಜಿ ಮ್ಯಾನೇಜರ್ ರಾಘವೇಂದ್ರ, ಹಿರಿಯ ವಕೀಲ ಟಿ.ಎಂ.ಶಿವಕುಮಾರ್ ಮಾತನಾಡಿದರು. ಬ್ಯಾಂಕ್ ನಿರ್ದೇಶಕರಾದ ಬಂಡೆಮೇಗಳ ಗಂಗಮ್ಮ, ಬಿ.ಎಂ.ಮಂಜುಳಾ, ಅಧಿಕಾರಿಗಳಾದ ಸಿಇಒ ಎಂ.ಎಸ್.ರೇಣುಕ, ಕುಮಾರ, ವಿಜಯಲಕ್ಷ್ಮೀ ಮಳೇಮಠ, ಜಗದೀಶ್, ವಿಶ್ವನಾಥ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts