

ಬೆಂಗಳೂರು: ವಿರಾಟ್ ಕೊಹ್ಲಿ 2008ರಲ್ಲಿ ಯುವ ಆಟಗಾರನಾಗಿ ಆರ್ಸಿಬಿ ತಂಡಕ್ಕೆ ಸೇರ್ಪಡೆಗೊಂಡಾಗ ಅವರ ಸಂಭಾವನೆ 12 ಲಕ್ಷ ರೂ. ಆಗಿತ್ತು. 19 ವಯೋಮಿತಿ ವಿಶ್ವಕಪ್ ವಿಜೇತ ಭಾರತ ತಂಡದ ಆಟಗಾರರನ್ನು ಆಗ ಡ್ರ್ಟ್ಾ ಪ್ರಕ್ರಿಯೆ ಮೂಲಕ ಐಪಿಎಲ್ ತಂಡಗಳಿಗೆ ಸೇರಿಸಲಾಗಿತ್ತು. ಅದರನ್ವಯ ಕೊಹ್ಲಿ ಆಗಿನ ಮೂಲಬೆಲೆಗೆ ಆರ್ಸಿಬಿ ತಂಡ ಸೇರಿದ್ದರು. ನಂತರ 2011ರಲ್ಲಿ ಅವರನ್ನು ಆರ್ಸಿಬಿ 8.28 ಕೋಟಿ ರೂ.ಗೆ ರಿಟೇನ್ ಮಾಡಿಕೊಂಡಿತ್ತು. 2014ರಲ್ಲಿ ಮತ್ತೆ 12.5 ಕೋಟಿ ರೂ, 2018ರಲ್ಲಿ 17 ಕೋಟಿ ರೂ.ಗೆ ರಿಟೇನ್ ಮಾಡಿಕೊಳ್ಳಲಾಗಿತ್ತು. 2022ರಲ್ಲಿ ನಾಯಕತ್ವ ತ್ಯಜಿಸಿದ್ದ ಕಾರಣ ಅವರ ರಿಟೇನ್ ಮೊತ್ತ 15 ಕೋಟಿ ರೂ.ಗೆ ಇಳಿದಿತ್ತು. ಈ ಬಾರಿ ಮತ್ತೆ ಅವರ ರಿಟೇನ್ ಮೊತ್ತ 21 ಕೋಟಿ ರೂ.ಗೆ ಏರಿದೆ. ಅವರು ಒಮ್ಮೆಯೂ ಹರಾಜಿಗೆ ಹೋಗದೆ ಐಪಿಎಲ್ನ ಎಲ್ಲ ಆವೃತ್ತಿಗಳಲ್ಲಿ ಆಡಿದ ಏಕಮಾತ್ರ ಆಟಗಾರರೆನಿಸಿದ್ದಾರೆ.
ವಿರಾಟ್ ಕೊಹ್ಲಿ ಐಪಿಎಲ್ನಲ್ಲಿ 20 ಕೋಟಿ ರೂ.ಗಿಂತ ಅಧಿಕ ಸಂಭಾವನೆ ಪಡೆಯುತ್ತಿರುವ ಮೊದಲ ಭಾರತೀಯರಾಗಿದ್ದಾರೆ. ಈ ಮೂಲಕ ಅವರು ಐಪಿಎಲ್ನಲ್ಲಿ 20 ಕೋಟಿ ರೂ.ಗಿಂತ ಅಧಿಕ ಸಂಭಾವನೆ ಪಡೆಯುವ ಆಟಗಾರರ ವಿಶೇಷ ಕ್ಲಬ್ಗೆ ಸೇರ್ಪಡೆಯಾಗಿದ್ದಾರೆ. ಕಳೆದ ಆವೃತ್ತಿಯಲ್ಲಿ ಆಸ್ಟ್ರೆಲಿಯಾದ ಪ್ಯಾಟ್ ಕಮ್ಮಿನ್ಸ್ ಸನ್ರೈಸರ್ಸ್ ಪರ 20.50 ಕೋಟಿ ರೂ. ಮತ್ತು ಮಿಚೆಲ್ ಸ್ಟಾರ್ಕ್ ಕೆಕೆಆರ್ ಪರ 24.75 ಕೋಟಿ ರೂ.ಗೆ ಆಡಿದ್ದರು. ಈ ಬಾರಿ ಕೊಹ್ಲಿ ಜತೆಗೆ ದಣ ಆಫ್ರಿಕಾದ ಹೆನ್ರಿಕ್ ಕ್ಲಾಸೆನ್ ಮತ್ತು ವೆಸ್ಟ್ ಇಂಡೀಸ್ನ ನಿಕೋಲಸ್ ಪೂರನ್ ಕೂಡ ಈ ಕ್ಲಬ್ಗೆ ಸೇರ್ಪಡೆಯಾಗಿದ್ದಾರೆ. ಕ್ಲಾಸೆನ್ 23 ಕೋಟಿ ರೂ.ಗೆ ಸನ್ರೈಸರ್ಸ್ ಮತ್ತು ಪೂರನ್ 21 ಕೋಟಿ ರೂ.ಗೆ ಲಖನೌ ಸೂಪರ್ಜೈಂಟ್ಸ್ ಪರ ರಿಟೇನ್ ಆಗಿದ್ದಾರೆ.