ಕ್ರಿಕೆಟ್ ಇತಿಹಾಸದಲ್ಲೇ ವಿಚಿತ್ರ ಬೋಲ್ಡ್​ ಔಟ್​! ಒಂದೇ ಒಂದು ಬಾಲ್​ ಆಡದೆ ವಿಕೆಟ್​ ಒಪ್ಪಿಸಿದ ಸ್ಟಾರ್​ ಬ್ಯಾಟ್ಸ್​ವುಮನ್​​ | Bizzare Out

 Bizzare Out
ಕ್ರಿಕೆಟ್ ಇತಿಹಾಸದಲ್ಲೇ ವಿಚಿತ್ರ ಔಟ್​! ಒಂದೇ ಒಂದು ಬಾಲ್​ ಆಡದೆ ವಿಕೆಟ್​ ಒಪ್ಪಿಸಿದ ಸ್ಟಾರ್​ ಬ್ಯಾಟ್ಸ್​ವುಮನ್​; ವಿಡಿಯೋ​ ವೈರಲ್​ | Bizzare Out
Published on: 

WBBL: ಕ್ರಿಕೆಟ್ ಮೈದಾನದಲ್ಲಿ ಕಾಲಕಾಲಕ್ಕೆ ವಿಲಕ್ಷಣ ಹಾಗೂ ಅನಿರೀಕ್ಷಿತ ರನ್ ಔಟ್‌ಗಳು ಸಂಭವಿಸುತ್ತಲೇ ಇರುತ್ತವೆ. ಅಂತೆಯೇ, ಪ್ರಸಕ್ತ ನಡೆಯುತ್ತಿರುವ ಮಹಿಳಾ ಬಿಗ್ ಬ್ಯಾಷ್ ಲೀಗ್​ನಲ್ಲಿ, ಕ್ರಿಕೆಟ್ ಇತಿಹಾಸದಲ್ಲೇ ಇಂತಹದ್ದೊಂದು ಘಟನೆ ಈಗ ಮರುಕಳಿಸಿರುವುದು ಸದ್ಯ ಅನೇಕರನ್ನು ಅಕ್ಷರಶಃ ಬೆರಗಾಗಿಸಿದೆ.

ಬುಧವಾರ ನಡೆದ ಬ್ರಿಸ್ಬೇನ್ ಹೀಟ್ ಮತ್ತು ಮೆಲ್ಬೋರ್ನ್ ರೆನೆಗೇಡ್ಸ್ ನಡುವಿನ ಪಂದ್ಯದಲ್ಲಿ, ಮೆಲ್ಬೋರ್ನ್ ತಂಡದ ಆಲ್‌ರೌಂಡರ್ ಡಿಯಾಂಡ್ರಾ ಡಾಟಿನ್ ಕ್ರೀಸ್​ (ವೆಸ್ಟ್​ ಇಂಡೀಸ್​ ಆಟಗಾರ್ತಿ)ಗೆ ಬರುವ ಮುನ್ನವೇ ಔಟ್​ ಆಗಿದ್ದು ಕ್ರಿಕೆಟ್​ ಪ್ರೇಮಿಗಳ ಗೊಂದಲಕ್ಕೆ ಕಾರಣವಾಗಿದೆ. WBBL ಮತ್ತು BBL ಪಂದ್ಯದಲ್ಲಿ ವಿಳಂಬವನ್ನು ತಗ್ಗಿಸಲು ಕ್ರಿಕೆಟ್ ಆಸ್ಟ್ರೇಲಿಯಾ 2021-22 ಸೀಸನ್​ನಿಂದ ಈ ವಿಶೇಷ ನಿಯಮವನ್ನು ಪರಿಚಯಿಸಿದೆ. ಹೊಸ ಬ್ಯಾಟರ್ ಕ್ರೀಸ್‌ಗೆ ಬಂದು, 75 ಸೆಕೆಂಡುಗಳಲ್ಲಿ ಬಾಲ್​ ಅನ್ನು ಎದುರಿಸಲು ರೆಡೆ ಇರಬೇಕೆಂಬುದು ನಿಯಮ.

ಅಕಸ್ಮಾತ್ ಈ ನಿಗದಿತ ಸಮಯದೊಳಗೆ ಹೊಸ ಬ್ಯಾಟರ್ ಕ್ರೀಸ್​ಗೆ ಬರದಿದ್ದರೆ ಬ್ಯಾಟರ್ ಅಥವಾ ಬ್ಯಾಟ್ಸ್​ವುಮನ್​ ಅಲ್ಲೇ ಪಕ್ಕದಲ್ಲೇ ಸುಮ್ಮನೆ ನಿಲ್ಲಬೇಕು. ನಂತರ, ಬೌಲರ್ ಖಾಲಿ ವಿಕೆಟ್‌ಗಳಲ್ಲಿ ಚೆಂಡನ್ನು ಎಸೆಯುತ್ತಾರೆ. ಆ ಬಾಲ್​ ಏನಾದರೂ ವಿಕೆಟ್‌ಗೆ ತಾಗಿದರೆ, ತಡವಾಗಿ ಬಂದ ಬ್ಯಾಟರ್ ಔಟ್ ಆಗಿ ಕೆಲವೇ ಕ್ಷಣಗಳಲ್ಲಿ ವಾಪಾಸ್​ ಪೆವಿಲಿಯನ್​ಗೆ ಹೋಗುತ್ತಾರೆ. ಸದ್ಯ ಇಲ್ಲಿಯೂ ಆಗಿದ್ದು ಅದೇ ಎಡವಟ್ಟು.

ಅಷ್ಟಕ್ಕೂ ಆಗಿದ್ದೇನು?

ಈ ಲೀಗ್​ನ ಪಂದ್ಯದಲ್ಲಿ, ಮೆಲ್ಬೋರ್ನ್ ರೆನೆಗೇಡ್ಸ್ 138 ರನ್‌ಗಳ ಗುರಿಯನ್ನು ಬೆನ್ನಟ್ಟುತ್ತಿತ್ತು. 15ನೇ ಓವರ್‌ನ ಮೊದಲ ಎಸೆತದಲ್ಲಿ ಜಾರ್ಜಿಯಾ ವೇರ್‌ಹ್ಯಾಮ್ ಔಟಾದರು. ಈ ಓವರ್‌ನ ಎರಡನೇ ಬಾಲ್​ಗೆ ಏಳನೇ ಕ್ರಮಾಂಕದಲ್ಲಿ ಬರಲು ರೆಡಿಯಾಗಿದ್ದ ಡಾಟಿನ್​ರನ್ನು ಹೋಗುವಂತೆ ತಂಡ ಸೂಚಿಸಿತು. ಆದರೆ, ಆಕೆ ಕ್ರೀಸ್‌ಗೆ ಬರಲು 75 ಸೆಕೆಂಡ್​ಗೂ ಹೆಚ್ಚು ಸಮಯ ತೆಗೆದುಕೊಂಡರು. ಹೆಲ್ಮೆಟ್ ಮತ್ತು ಬ್ಯಾಟಿಂಗ್ ಗ್ಲೌಸ್ ಹಾಕಿಕೊಳ್ಳಲು ಟೈಮ್​ ವೇಸ್ಟ್​ ಮಾಡಿದ್ದೇ ಸುಮ್ಮನೆ ಅವರ ವಿಕೆಟ್​ ಹೋಗುವಂತಾಯಿತು.

Also Read
ಟೈಟಾನಿಕ್​, ಒಲಿಂಪಿಕ್​... ಮೂರಕ್ಕೆ ಮೂರು ಅತಿದೊಡ್ಡ ಹಡಗು ದುರಂತಗಳಿಂದ ಸಾವು ಗೆದ್ದು ವಿಧಿಗೆ ಚಳ್ಳೆಹಣ್ಣು ತಿನ್ನಿಸಿದ ಮಹಿಳೆ ಈಕೆ | Violet Jessop
 Bizzare Out

ನಿಗದಿತ 75 ಸೆಕೆಂಡ್‌ಗಳು ಮೀರಿದ್ದನ್ನು ನೋಡಿದ ಅಂಪೈರ್‌ಗಳು, ಲೆಗ್‌ಸೈಡ್‌ನಲ್ಲಿರುವ ಪಿಚ್‌ನಿಂದ ಕನಿಷ್ಠ ಐದು ಮೀಟರ್ ದೂರದಲ್ಲಿ ನಿಲ್ಲುವಂತೆ ಡಾಟಿನ್‌ಗೆ ಹೇಳಿದರು. ಬೌಲರ್ ಸಾರಾ ಗ್ಲೆನ್ ವಿಕೆಟ್ ಮೇಲೆ ಪ್ರೀ ಬಾಲ್​ ಎಸೆಯುವ ಅವಕಾಶ ಪಡೆದಿದ್ದಲ್ಲದೇ, ವಿಕೆಟ್​ ಕೂಡ ಕಬಳಿಸಿದರು. ಇದರಿಂದ, ಕೆರಿಬಿಯನ್​ನ ಸ್ಟಾರ್ ಆಲ್​ರೌಂಡರ್​, ಒಂದೇ ಒಂದು ಚೆಂಡನ್ನು ಆಡದೆ ಪೆವಿಲಿಯನ್​ನತ್ತ ಮುಖ ಮಾಡಿದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಈ ಘಟನೆಯು 2023ರ ಏಕದಿನ ವಿಶ್ವಕಪ್‌ನಲ್ಲಿ ಶ್ರೀಲಂಕಾದ ಆಟಗಾರ ಏಂಜೆಲೊ ಮ್ಯಾಥ್ಯೂಸ್ ಔಟಾದ ಕ್ಷಣವನ್ನು ನೆನಪಿಸಿದೆ. ಇವರೆಡು ಔಟ್‌ಗಳ ನಡುವೆ ದೊಡ್ಡ ವ್ಯತ್ಯಾಸವಿದೆ. ಸಾಮಾನ್ಯವಾಗಿ ಸಮಯ ಮೀರಿದಾಗ, ಬ್ಯಾಟರ್ ವಿರುದ್ಧ ಮೇಲ್ಮನವಿಯ ಆಧಾರದ ಮೇಲೆ ಅಂಪೈರ್​ ನಿರ್ಧಾರವನ್ನು ಕೈಗೊಳ್ಳುತ್ತಾರೆ. ಆದರೆ, ಡಬ್ಲ್ಯೂಬಿಬಿಲ್​ ನಿಯಮಗಳಲ್ಲಿ, ತಡವಾಗಿ ಬಂದ ಬ್ಯಾಟರ್ ಅನ್ನು ಕ್ರೀಸ್​ನ ಪಕ್ಕಕ್ಕೆ ಇರಿಸಿ, ಚೆಂಡನ್ನು ಖಾಲಿ ವಿಕೆಟ್‌ಗಳ ಮೇಲೆ ಹಾಕಿಸಲಾಗುತ್ತೆ. ಆ ಬಾಲ್​ ಏನಾದರೂ ವಿಕೆಟ್​ ಬೀಳದೆ ಹೋದರೆ, ಬ್ಯಾಟರ್ ಔಟಾಗದೇ ತಮ್ಮ ಇನ್ನಿಂಗ್ಸ್ ಅನ್ನು ಮುಂದುವರಿಸಬಹುದು,(ಏಜೆನ್ಸೀಸ್).