ಫಿಟ್ ಆಗಿ ಬನ್ನಿ, ತಂಡದಲ್ಲಿ ನೀವಿದ್ದೀರಿ ಅಂದ್ರು, ಕೊನೆಗೆ ಕೈ ಬಿಟ್ರು!...ಟೀಮ್​ ಇಂಡಿಯಾ ದಿಗ್ಗಜರ ವಿರುದ್ಧ ಮಿಶ್ರಾ ಗಂಭೀರ ಆರೋಪ! | Amit Mishra

Amit Mishra: ಟೀಮ್​ ಇಂಡಿಯಾದ ಹಿರಿಯ ಸ್ಪಿನ್ನರ್ ಅಮಿತ್ ಮಿಶ್ರಾ ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದ ಅನಿರೀಕ್ಷಿತ ಅಂತ್ಯದ ಕುರಿತು ಇತ್ತೀಚೆಗೆ ನೀಡಿರುವ ಹೇಳಿಕೆ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ವ್ಯವಸ್ಥೆ ಹಾಗೂ ಅಂದಿನ ನಾಯಕ-ಕೋಚ್ ನಡವಳಿಕೆಯ ಬಗ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಫಿಟ್ ಆಗಿ ಬನ್ನಿ, ತಂಡದಲ್ಲಿ ನೀವಿದ್ದೀರಿ ಅಂದ್ರು, ಕೊನೆಗೆ ಕೈ ಬಿಟ್ರು!...ಟೀಮ್​ ಇಂಡಿಯಾ ದಿಗ್ಗಜರ ವಿರುದ್ಧ ಮಿಶ್ರಾ ಗಂಭೀರ ಆರೋಪ! | Amit Mishra
Published on: 

ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ನಡೆಸಿಕೊಟ್ಟ ಪಾಡ್‌ಕಾಸ್ಟ್ ಬೈತ್ & ಬೋಲ್ (Baith & Bol) ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಮಿತ್ ಮಿಶ್ರಾ, ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನ ಹೇಗೆ ಅಂತ್ಯವಾಯ್ತು ಎನ್ನುವುದರ ಸಂಪೂರ್ಣ ವಿವರಗಳನ್ನು ಹಂಚಿಕೊಂಡಿದ್ದಾರೆ.

2017ರಲ್ಲಿ ಬೆಂಗಳೂರಿನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟಿ20 ಪಂದ್ಯವು ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದ ಕೊನೆಯ ಪಂದ್ಯವಾಗಲಿದೆ ಎಂದು ಅವರು ಆ ಸಂದರ್ಭದಲ್ಲಿ ಕಲ್ಪಿಸಿರಲಿಲ್ಲ. ಪಂದ್ಯದ ವೇಳೆ ತಮಗೆ ಕಾಲಿನ ಗಾಯವಾಗಿತ್ತು ಎಂದು ವಿವರಿಸಿರುವ ಮಿಶ್ರಾ, ಆ ಗಾಯವೇ ತಮ್ಮ ಕ್ರಿಕೆಟ್ ಬದುಕಿಗೆ ಬ್ರೇಕ್ ಹಾಕಿತು ಎಂದು ಬೇಸರ ಹೊರಹಾಕಿದ್ದಾರೆ. ತಂಡದಿಂದ ಹೊರನಡೆಯುವ ನಿರ್ಣಾಯಕ ಘಟ್ಟದಲ್ಲಿ ಅಂದಿನ ಕೋಚ್ ಅನಿಲ್ ಕುಂಬ್ಳೆ ಹಾಗೂ ನಾಯಕ ವಿರಾಟ್ ಕೊಹ್ಲಿ ಇಬ್ಬರೂ ತಮಗೆ ಧೈರ್ಯತುಂಬುವ ಭರವಸೆಗಳನ್ನು ನೀಡಿದ್ದರು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:'ವೈಭವ'ಯುತ ಆಟ ನೋಡಲು ಕೊನೆಗೂ ಕೂಡಿಬಂತು ಕಾಲ...ಸೂರ್ಯವಂಶಿ ಎಂಟ್ರಿ ಬಗ್ಗೆ ಮಹತ್ವದ ಸುಳಿವು ನೀಡಿದ ಬ್ಯಾಟಿಂಗ್ ಕೋಚ್! | Vaibhav Sooryavanshi

ನೀನು ಯೋಚ್ನೆ ಮಾಡಬೇಡ ನಾವಿದ್ದೀವಿ!

ನಾನು ಗಾಯಗೊಂಡು ಬೆಂಗಳೂರಿನಿಂದ ಹೊರಡುವಾಗ ಅನಿಲ್ ಭಾಯ್ ಕೋಚ್ ಆಗಿದ್ದರು. ನಾನು ಅವರಿಗೆ ವಿಷಯ ತಿಳಿಸಿದಾಗ, ಯಾವುದೇ ಚಿಂತೆ ಮಾಡಬೇಡ ಅಮಿತ್, ನೀನು ಸಂಪೂರ್ಣವಾಗಿ ಫಿಟ್ ಆಗಿ ವಾಪಸ್ ಬಂದ ಕೂಡಲೇ ತಂಡಕ್ಕೆ ಮರಳುತ್ತೀಯ ಎಂದು ಧೈರ್ಯ ತುಂಬಿದರು ಎಂದು ಮಿಶ್ರಾ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ನಾಯಕರಾಗಿದ್ದ ವಿರಾಟ್ ಕೊಹ್ಲಿ ಕೂಡ ತಮಗೆ ಅದೇ ರೀತಿಯ ಭರವಸೆಯನ್ನು ಪುನರುಚ್ಚರಿಸಿದ್ದರು ಎಂದು ಮಿಶ್ರಾ ತಿಳಿಸಿದ್ದಾರೆ. ನಾನು ವಿರಾಟ್ ಕೊಹ್ಲಿ ಅವರ ಬಳಿಯೂ ಮುಂದಿನ ಹಾದಿಯ ಬಗ್ಗೆ ಕೇಳಿದೆ. ಅದಕ್ಕೆ ಅವರು, ನೀವು ಯಾವುದೇ ಆತಂಕಪಡಬೇಡಿ, ಮೊದಲು ಸಂಪೂರ್ಣವಾಗಿ ಫಿಟ್ ಮತ್ತು ಆರಾಮದಾಯಕವಾಗಿರಿ, ತಂಡದಲ್ಲಿ ನಿಮ್ಮ ಸ್ಥಾನ ಖಚಿತವಿದೆ ಎಂದು ಭರವಸೆ ನೀಡಿದ್ದರು ಎಂದು ಮಿಶ್ರಾ ಪಾಡ್‌ಕಾಸ್ಟ್‌ನಲ್ಲಿ ವಿವರಿಸಿದ್ದಾರೆ.

ಆದರೆ, ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡು ಮೈದಾನಕ್ಕೆ ಮರಳಲು ಸಿದ್ಧರಾದಾಗ ಆ ಭರವಸೆಗಳೆಲ್ಲವೂ ಸಂಪೂರ್ಣವಾಗಿ ಹುಸಿಯಾದವು ಎಂದು ಮಿಶ್ರಾ ಆರೋಪಿಸಿದ್ದಾರೆ. ಫಿಟ್ನೆಸ್ ಸಾಬೀತುಪಡಿಸಿದ ಬಳಿಕ, ತಾವು ತಂಡಕ್ಕೆ ಮರಳುವ ಕುರಿತು ಮಾತನಾಡಲು ವಿರಾಟ್ ಕೊಹ್ಲಿಗೆ ಸಂದೇಶ ಕಳುಹಿಸಿದ್ದೆ, ಇದಕ್ಕೆ ಪ್ರತಿಕ್ರಿಯಿಸಿದ್ದ ಕೊಹ್ಲಿ, ಒಂದು ವಾರ ಅಥವಾ ಹತ್ತು ದಿನಗಳಲ್ಲಿ ಮರಳಿ ಸಂಪರ್ಕಿಸುವುದಾಗಿ ಹೇಳಿದ್ದರಂತೆ. ಆದರೆ ಒಂದು ವಾರ, ಎರಡು ವಾರ, ಮೂರು ವಾರ ಕಳೆದರೂ ಕೊಹ್ಲಿ ಕಡೆಯಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬರಲಿಲ್ಲ ಎಂದು ಮಿಶ್ರಾ ಅಳಲು ತೋಡಿಕೊಂಡಿದ್ದಾರೆ.

Also Read
17 ವರ್ಷಗಳಲ್ಲೇ ಯಾರು ಮಾಡಿಲ್ಲ ಈ ಸಾಧನೆ!...ಪಂದ್ಯದ ದಿಕ್ಕನ್ನೇ ಬದಲಿಸಿ ನೂತನ ದಾಖಲೆ ಬರೆದ ಪಂಜಾಬ್​ ಧೀರ | Naman Dhir
ಫಿಟ್ ಆಗಿ ಬನ್ನಿ, ತಂಡದಲ್ಲಿ ನೀವಿದ್ದೀರಿ ಅಂದ್ರು, ಕೊನೆಗೆ ಕೈ ಬಿಟ್ರು!...ಟೀಮ್​ ಇಂಡಿಯಾ ದಿಗ್ಗಜರ ವಿರುದ್ಧ ಮಿಶ್ರಾ ಗಂಭೀರ ಆರೋಪ! | Amit Mishra

ತಾವು ವಿರಾಟ್ ಕೊಹ್ಲಿಗೆ ಹಲವಾರು ಬಾರಿ ಫೋನ್ ಮಾಡಿದ್ದರೂ ಅವರು ಕರೆಗಳನ್ನು ಸ್ವೀಕರಿಸಲಿಲ್ಲ ಹಾಗೂ ಮೆಸೆಜ್​ಗಳಿಗೆ ಯಾವುದೇ ಉತ್ತರ ನೀಡಲಿಲ್ಲ ಎಂದು ಮಿಶ್ರಾ ನೇರ ಆರೋಪ ಮಾಡಿದ್ದಾರೆ. ನಾನು ಮತ್ತೆ ಮತ್ತೆ ಕರೆ ಮಾಡಿದೆ, ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ ನಾನೂ ಕೂಡ ಸುಮ್ಮನಾದೆ ಎಂದು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

ಅಲ್ಲದೆ, ಇದೇ ವೇಳೆ ತಾರತಮ್ಯದ ಧೋರಣೆಯ ಬಗ್ಗೆಯೂ ಮಿಶ್ರಾ ಪ್ರಸ್ತಾಪಿಸಿದ್ದಾರೆ. ತಮ್ಮಗಿಂತಲೂ ಹೆಚ್ಚು ಗಂಭೀರ ಸ್ವರೂಪದ ಗಾಯಗಳಿಗೆ ಒಳಗಾಗಿ, ಸುದೀರ್ಘ ಕಾಲ ಕ್ರಿಕೆಟ್‌ನಿಂದ ದೂರವಿದ್ದ ಇತ್ತೀಚಿನ ಇತರೆ ಆಟಗಾರರಿಗೆ ಮರಳಿ ತಂಡದಲ್ಲಿ ತಕ್ಷಣವೇ ಅವಕಾಶ ನೀಡಲಾಯಿತು. ಆದರೆ, ತಮ್ಮ ವಿಚಾರದಲ್ಲಿ ಮಾತ್ರ ಅಂತಹ ಯಾವುದೇ ಮಾನದಂಡವನ್ನು ಪಾಲಿಸಲಿಲ್ಲ, ತಮಗೆ ಇದುವರೆಗೂ ಆ ನಿರ್ಧಾರದ ಬಗ್ಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ ಎಂದು ಅಮಿತ್​ ಮಿಶ್ರಾ ನೋವು ತೋಡಿಕೊಂಡಿದ್ದಾರೆ(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net