17 ವರ್ಷಗಳಲ್ಲೇ ಯಾರು ಮಾಡಿಲ್ಲ ಈ ಸಾಧನೆ!...ಪಂದ್ಯದ ದಿಕ್ಕನ್ನೇ ಬದಲಿಸಿ ನೂತನ ದಾಖಲೆ ಬರೆದ ಪಂಜಾಬ್​ ಧೀರ | Naman Dhir

Naman Dhir: ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ರೋಚಕ ಮೊದಲ ಟಿ20 ಪಂದ್ಯದಲ್ಲಿ ಭಾರತದ ಯುವ ತಾರೆ ನಮನ್ ಧೀರ್ ಸ್ಫೋಟಕ ಬ್ಯಾಟಿಂಗ್​ ಮೂಲಕ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದು, ಕೇವಲ 15 ಎಸೆತಗಳಲ್ಲಿ ಅಜೇಯ 42 ರನ್ ಗಳಿಸಿ ಗೆಲುವಿಗೆ ಮಹತ್ವದ ಕಾಣಿಕೆ ನೀಡಿದ್ದಾರೆ.
ಪಂದ್ಯದ ದಿಕ್ಕನ್ನೇ ಬದಲಿಸಿ ನೂತನ ದಾಖಲೆ ಬರೆದ ಪಂಜಾಬ್​ ಧೀರ
ಪಂದ್ಯದ ದಿಕ್ಕನ್ನೇ ಬದಲಿಸಿ ನೂತನ ದಾಖಲೆ ಬರೆದ ಪಂಜಾಬ್​ ಧೀರ
Published on: 

Naman Dhir: ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ರೋಚಕ ಮೊದಲ ಟಿ20 ಪಂದ್ಯದಲ್ಲಿ ಭಾರತದ ಯುವ ತಾರೆ ನಮನ್ ಧೀರ್ ಸ್ಫೋಟಕ ಬ್ಯಾಟಿಂಗ್​ ಮೂಲಕ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದು, ಕೇವಲ 15 ಎಸೆತಗಳಲ್ಲಿ ಅಜೇಯ 42 ರನ್ ಗಳಿಸಿ ಗೆಲುವಿಗೆ ಮಹತ್ವದ ಕಾಣಿಕೆ ನೀಡಿದ್ದಾರೆ.

ಈ ಮೂಲಕ ನಮನ್ ಧೀರ್ ಬರೋಬ್ಬರಿ 17 ವರ್ಷಗಳ ಹಳೆಯ ದಾಖಲೆಯನ್ನು ಮುರಿದು ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಭಾರತ ತಂಡವು ನೀಡಿದ ಬೃಹತ್ ಗುರಿಯನ್ನು ಬೆನ್ನಟ್ಟುವ ವೇಳೆ ಆರಂಭಿಕ ಆಟಗಾರರು ನೀಡಿದ ಭರ್ಜರಿ ಆರಂಭದ ಬಳಿಕ ಮಧ್ಯಮ ಕ್ರಮಾಂಕದಲ್ಲಿ ಕುಸಿದಿದ್ದ ಟೀಮ್​ ಇಂಡಿಯಾಗೆ ಈ ಇನ್ನಿಂಗ್ಸ್ ಜೀವ ತುಂಬಿತು. ಈ ಅಮೋಘ ಆಟದ ಮೂಲಕ ನಮನ್ ಧೀರ್, ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಗುರಿ ಬೆನ್ನತ್ತುವಾಗ 7 ಮತ್ತು ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿದು ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ:ನಮ್ಮ ನಮ್ಮಲ್ಲೇ ಜಗಳ, 2007ರ ವರ್ಲ್ಡ್ ಕಪ್ ಸೋಲಿಗೆ ಅವನು ಸೃಷ್ಟಿಸಿದ್ದ ಕಿಚ್ಚೇ ಕಾರಣ!...ಹರ್ಭಜನ್ ಸ್ಫೋಟಕ ಆರೋಪ! | Harbhajan Singh

17 ವರ್ಷದಲ್ಲೇ ಇದು ಮೊದಲು!

ಈ ಹಿಂದೆ ಈ ದಾಖಲೆಯು ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಹೆಸರಿನಲ್ಲಿತ್ತು. ಇರ್ಫಾನ್ ಪಠಾಣ್ ಅವರು 2009ರಲ್ಲಿ ಕೊಲಂಬೊದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಅಜೇಯ 33 ರನ್ ಗಳಿಸಿದ್ದರು. ಅಂದು ಭಾರತ ತಂಡವು ತನ್ನ ಸಾರ್ವಕಾಲಿಕ ದಾಖಲೆಯ ಯಶಸ್ವಿ ಚೇಸಿಂಗ್ ಪೂರ್ಣಗೊಳಿಸಲು ಇದು ನೆರವಾಗಿತ್ತು. ಇದೀಗ ಆ ದಾಖಲೆಯನ್ನು ನಮನ್ ಧೀರ್ ಮುರಿದಿದ್ದಾರೆ . ಅವರು ಬಾರಿಸಿದ ಅಜೇಯ 42 ರನ್‌ಗಳು ಅಕ್ಷರಶಃ ಪಂದ್ಯದ ದಿಕ್ಕನ್ನೇ ಬದಲಾಯಿಸಿತು. ಕೇವಲ 15 ಎಸೆತಗಳನ್ನು ಎದುರಿಸಿದ ಅವರು 280ರ ಭರ್ಜರಿ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಈ ಇನ್ನಿಂಗ್ಸ್‌ನಲ್ಲಿ 5 ಆಕರ್ಷಕ ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್‌ಗಳಿದ್ದವು. ಇದರ ಫಲವಾಗಿ ಭಾರತ ತಂಡವು 2 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿತು. ಅಷ್ಟೇ ಅಲ್ಲದೆ, ಇದು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಇದುವರೆಗಿನ ಅತ್ಯಂತ ಗರಿಷ್ಠ ರನ್ ಗುರಿಯ ಯಶಸ್ವಿ ಚೇಸಿಂಗ್ ಎಂಬ ದಾಖಲೆಗೂ ಪಾತ್ರವಾಯಿತು.

Also Read
ಮ್ಯಾಚ್ ಮುಗಿಸೋಕೆ ನಾವು ಆಗ್ಲೇ ಆ ಪ್ಲ್ಯಾನ್ ಮಾಡಿದ್ವಿ!....ಗೆಲುವಿನ ಗುಟ್ಟು ಬಹಿರಂಗಪಡಿಸಿದ ಸಂಜು | Sanju Samson
ಪಂದ್ಯದ ದಿಕ್ಕನ್ನೇ ಬದಲಿಸಿ ನೂತನ ದಾಖಲೆ ಬರೆದ ಪಂಜಾಬ್​ ಧೀರ

ಪಂದ್ಯದ ಮುಕ್ತಾಯದ ಬಳಿಕ ಮಾತನಾಡಿದ ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್, ನಮನ್ ಧೀರ್ ಅವರ ಆಟವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ನಮನ್​ ತಂಡಕ್ಕೆ ಸಾಕಷ್ಟು ವಿಭಿನ್ನ ಆಯ್ಕೆಗಳನ್ನು ಒದಗಿಸುತ್ತಾರೆ, ವಿಶೇಷವಾಗಿ ಎಡಗೈ ಬ್ಯಾಟರ್‌ಗಳು ಅಥವಾ ಬಲಗೈ ಬ್ಯಾಟರ್‌ಗಳು ಕ್ರೀಸ್‌ನಲ್ಲಿರುವಾಗ ಹಾಗೂ ಈ ಮೈದಾನದ ಪರಿಸ್ಥಿತಿಯಲ್ಲಿ ಬಂದು 2-3 ನಿರ್ಣಾಯಕ ಓವರ್‌ಗಳನ್ನು ಬೌಲಿಂಗ್ ಮಾಡುವುದು ಪಂದ್ಯದ ದಿಕ್ಕನ್ನು ಬದಲಿಸಬಲ್ಲುದು ಎಂದು ಶ್ರೇಯಸ್ ಹೇಳಿದರು. ಅಷ್ಟೇ ಅಲ್ಲದೆ, ಕಠಿಣ ಪರಿಸ್ಥಿತಿಯಲ್ಲೂ ಅವರು ತೋರಿಸಿದ ಶಾಂತಚಿತ್ತ ಮತ್ತು ಸಂಯಮದ ಸ್ವಭಾವವು ನಿಜಕ್ಕೂ ಅದ್ಭುತವಾಗಿತ್ತು ಎಂದು ಬಣ್ಣಿಸಿದರು.

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಇದುವರೆಗೆ ಕೇವಲ ಐದು ಇನ್ನಿಂಗ್ಸ್‌ಗಳನ್ನು ಆಡಿರುವ ನಮನ್ ಧೀರ್, ಒಟ್ಟು 80 ರನ್‌ಗಳನ್ನು ಕಲೆಹಾಕಿದ್ದಾರೆ. ಇವರ ಬ್ಯಾಟಿಂಗ್ ಸರಾಸರಿ 40.00 ಹಾಗೂ ಅದ್ಭುತ ಸ್ಟ್ರೈಕ್ ರೇಟ್ 285.71ರಷ್ಟಿದೆ. ಇವರ ಗರಿಷ್ಠ ವೈಯಕ್ತಿಕ ಸ್ಕೋರ್ ಅಜೇಯ 42 ರನ್‌ಗಳಾಗಿವೆ. ಇನ್ನು ಟಿ20 ಡೆತ್ ಓವರ್‌ಗಳಲ್ಲಿ ನಮನ್ ಕೇವಲ 167 ಎಸೆತಗಳನ್ನು ಎದುರಿಸಿ ಬರೋಬ್ಬರಿ 341 ರನ್‌ಗಳನ್ನು ಚಚ್ಚಿದ್ದಾರೆ. ಈ ಅವಧಿಯಲ್ಲಿ ಅವರ ಸ್ಟ್ರೈಕ್ ರೇಟ್ 204.19ರಷ್ಟಿದ್ದು, 34 ಮನಮೋಹಕ ಬೌಂಡರಿ ಹಾಗೂ 19 ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net