ನನ್ನ ಟಾರ್ಗೆಟ್​ 200 ಅಲ್ಲ... ಯುವ ಬ್ಯಾಟಿಂಗ್ ಸೆನ್ಸೇಷನ್​ ಹೇಳಿದ ಅದೊಂದು ಮಾತು ಈಗ ವೈರಲ್​ | Vaibhav Sooryvanshi

Vaibhav Sooryvanshi
ನನ್ನ ಟಾರ್ಗೆಟ್​ 200 ಅಲ್ಲ... ಯುವ ಬ್ಯಾಟಿಂಗ್ ಸೆನ್ಸೇಷನ್​ ವೈಭವ್ ಸೂರ್ಯವಂಶಿ ಗುಟ್ಟು ರಟ್ಟು | Vaibhav Sooryvanshi
Published on: 

Vaibhav Sooryvanshi: ಟೀಮ್ ಇಂಡಿಯಾದ ಯುವ ಬ್ಯಾಟಿಂಗ್ ಸೆನ್ಸೇಷನ್, ದಾಖಲೆಗಳ ಸರದಾರ, 15 ವರ್ಷದ ವಂಡರ್​ ಕಿಡ್​ ವೈಭವ್ ಸೂರ್ಯವಂಶಿ ಬಗ್ಗೆಯೇ ಈಗ ಎಲ್ಲೆಲೂ ಮಾತು. ಲಿಸ್ಟ್-ಎ ಕ್ರಿಕೆಟ್‌ನಲ್ಲಿ ಕೇವಲ 52 ಎಸೆತಗಳಲ್ಲಿ 28 ಸ್ಫೋಟಕ ಸಿಕ್ಸರ್​ ಸಹಾಯದಿಂದ 200 ರನ್​ ಬಾರಿಸಿದ ವೈಭವ್​, ಈ ಮೂಲಕ ಹಳೆಯ ದಾಖಲೆಗಳನ್ನು ಚಿಂದಿ ಮಾಡಿ, ಇದೀಗ ತಮ್ಮದೇ ಹೊಸ ವಿಶ್ವ ದಾಖಲೆ ಬರೆದಿರುವುದು ಇಡೀ ಕ್ರಿಕೆಟ್​ ಜಗತ್ತನ್ನೇ ಅಕ್ಷರಶಃ ಬೆರಗಾಗಿಸಿದೆ.

ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಿಯ ಅಂಗವಾಗಿ ಯುಎಇ ವಿರುದ್ಧದ ಮಹತ್ವದ ಪಂದ್ಯದಲ್ಲಿ ಭಾರತ-ಎ ಪರ ಆಡಿದ ವೈಭವ್, ಒಟ್ಟು 53 ಎಸೆತಗಳನ್ನು ಎದುರಿಸಿದರು ಈ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. 28 ಸಿಕ್ಸರ್ ಹಾಗೂ 7 ಬೌಂಡರಿಗಳ ಸಹಾಯದಿಂದ 204 ರನ್‌ಗಳ ಸುನಾಮಿ ಬ್ಯಾಟಿಂಗ್ ಮಾಡಿದ ವೈಭವ್​, ಲಿಸ್ಟ್-ಎ ಇತಿಹಾಸದಲ್ಲಿ ಅತ್ಯಂತ ವೇಗದ ಶತಕ ಮತ್ತು ದ್ವಿಶತಕದ ದಾಖಲೆಗೆ ಸಾಕ್ಷಿಯಾಗಿದ್ದಾರೆ. ಈ ಐತಿಹಾಸಿಕ ಸಾಧನೆಗೆ ಕ್ರಿಕೆಟ್​ ಅಭಿಮಾನಿಗಳು ಮಾತ್ರವಲ್ಲದೇ, ಅನೇಕರು ವೈಭವ್​ರನ್ನು ಮೆಚ್ಚಿ, ಕೊಂಡಾಡಿದ್ದಾರೆ.

ಈ ಮೈಲಿಗಲ್ಲು ದಾಖಲಿಸಿದ ಬಳಿಕ ವೈಭವ್ ಸೂರ್ಯವಂಶಿ, ತಮ್ಮ ಆಪ್ತ ಕ್ರಿಕೆಟ್​ ಸ್ನೇಹಿತರೊಡನೆ ಹಲವು ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡರು ಎನ್ನಲಾಗಿದೆ. ನನ್ನ ಅಸಲಿ ಗುರಿ ಕೇವಲ 200 ರನ್ ಗಳಿಸುವುದಲ್ಲ. ಅದನ್ನೂ ಮೀರಿಸುವುದು. ನಾನು ಮೈದಾನಕ್ಕೆ ಕಾಲಿಟ್ಟಾಗ ವೈಯಕ್ತಿಕ ಸ್ಕೋರ್​ ಅನ್ನೋದಕ್ಕಿಂತ ಹೆಚ್ಚಾಗಿ ತಂಡದ ಗೆಲುವಿಗೆ ಸಹಾಯ ಮಾಡುವುದು ಫೋಕಸ್​ ಮಾಡಿಕೊಂಡಿರುತ್ತೇನೆ ಎಂದು ಹೇಳಿಕೊಂಡಿದ್ದಾಗಿ ಅವರ ಆಪ್ತ​ ಮೂಲಗಳು ತಿಳಿಸಿವೆ.

Also Read
ಟೈಟಾನಿಕ್​, ಒಲಿಂಪಿಕ್​... ಮೂರಕ್ಕೆ ಮೂರು ಅತಿದೊಡ್ಡ ಹಡಗು ದುರಂತಗಳಿಂದ ಸಾವು ಗೆದ್ದು ವಿಧಿಗೆ ಚಳ್ಳೆಹಣ್ಣು ತಿನ್ನಿಸಿದ ಮಹಿಳೆ ಈಕೆ | Violet Jessop
Vaibhav Sooryvanshi

ಅಗತ್ಯಬಿದ್ದರೆ ತಂಡದ ಗೆಲುವಿಗಾಗಿ 300 ರನ್ ಗಳಿಸುವ ಸಾಮರ್ಥ್ಯವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೇವಲ 52 ಎಸೆತದಲ್ಲಿ 200 ರನ್​ಗಳ ಹೊಳೆ ಹರಿಸಿರುವ ವೈಭವ್​ ಸ್ಫೋಟಕ ಇನ್ನಿಂಗ್ಸ್​ ನೋಡಿದರೆ, ಅವರ ರನ್ ದಾಹ ಇಲ್ಲಿಗೆ ಇಳಿದಿಲ್ಲ ಎಂಬುದಂತು ಖಚಿತ. ಮತ್ತು ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾ ಪರ ಆಡಲು ಹಚ್ಚಿನ ಅವಕಾಶ ಸಿಕ್ಕರೆ, ಖಂಡಿತ ಇನ್ನಷ್ಟು ಸ್ಮರಣೀಯ ಗೆಲುವುಗಳ ಜತೆ ದಾಖಲೆಗಳನ್ನು ನಿರ್ಮಿಸುತ್ತಾರೆ ಎಂಬುದರಲ್ಲಿ ಅನುಮಾನವೇ ಬೇಡ,(ಏಜೆನ್ಸೀಸ್).