ಸಂಜು ಸ್ಯಾಮ್ಸನ್​ರನ್ನು ಸಂಪೂರ್ಣ ಬದಲಾಯಿಸಿದ ವಂಡರ್​ ಕಿಡ್​ ವೈಭವ್​ ಸೂರ್ಯವಂಶಿ: ಅಪ್​ಡೇಟ್​ ಆದ್ರೂ ಚೇಟ್ಟಾ! Sanju Samson

ಟೀಮ್ ಇಂಡಿಯಾದ ಪ್ರತಿಭಾವಂತ ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್​ ತಮ್ಮ ಆಟದ ಶೈಲಿಯಲ್ಲಿ ಗಮನಾರ್ಹ ಬದಲಾವಣೆ ಮಾಡಿಕೊಂಡಿದ್ದಾರೆ. ಟಿ20 ವಿಶ್ವಕಪ್ ವಿಜಯದ ಬಳಿಕ ಸಂಜು ಸ್ಥಾನದ ಬಗ್ಗೆ ಯಾವುದೇ ಪ್ರಶ್ನೆಗಳು ಇರಲಿಲ್ಲ. ಆದರೆ, ಐಪಿಎಲ್ ನಂತರದ ಕೆಲವು ಸರಣಿಗಳಲ್ಲಿ ಸಂಜು ಅವರ ವೈಫಲ್ಯವು ಆರಂಭದಲ್ಲಿ ಸಮೀಕರಣಗಳನ್ನೇ ಬದಲಾಯಿಸಿತ್ತು.
Sanju Samson
ಟೀಮ್ ಇಂಡಿಯಾದ ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್
Published on: 

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚುತ್ತಿರುವ ಸ್ಪರ್ಧೆಗೆ ತಕ್ಕಂತೆ ತಮ್ಮ ಆಟವನ್ನು ಅಪ್​ಡೇಟ್​ ಮಾಡಿಕೊಳ್ಳುವುದು ಯಾವುದೇ ಆಟಗಾರನಿಗೆ ತುಂಬಾ ಅನಿವಾರ್ಯ. ಅದೇ ರೀತಿ ಟೀಮ್ ಇಂಡಿಯಾದ ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ( Sanju Samson ) ತಮ್ಮ ಬ್ಯಾಟಿಂಗ್ ಶೈಲಿಯಲ್ಲಿ ತಂದಿರುವ ಅಚ್ಚರಿಯ ಬದಲಾವಣೆ ಈಗ ಎಲ್ಲರ ಗಮನ ಸೆಳೆದಿದೆ.

ಹೌದು, ಟೀಮ್ ಇಂಡಿಯಾದ ಪ್ರತಿಭಾವಂತ ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್​ ತಮ್ಮ ಆಟದ ಶೈಲಿಯಲ್ಲಿ ಗಮನಾರ್ಹ ಬದಲಾವಣೆ ಮಾಡಿಕೊಂಡಿದ್ದಾರೆ. ಟಿ20 ವಿಶ್ವಕಪ್ ವಿಜಯದ ಬಳಿಕ ಸಂಜು ಸ್ಥಾನದ ಬಗ್ಗೆ ಯಾವುದೇ ಪ್ರಶ್ನೆಗಳು ಇರಲಿಲ್ಲ. ಆದರೆ, ಐಪಿಎಲ್ ನಂತರದ ಕೆಲವು ಸರಣಿಗಳಲ್ಲಿ ಸಂಜು ಅವರ ವೈಫಲ್ಯವು ಆರಂಭದಲ್ಲಿ ಸಮೀಕರಣಗಳನ್ನೇ ಬದಲಾಯಿಸಿತ್ತು.

Also Read
ಸಂಜು, ನಮನ್ ಧೀರ್ ಅಬ್ಬರ: ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ! New Zealand vs India
Sanju Samson

ಇನ್ನೊಂದೆಡೆ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರ ಅದ್ಭುತ ಫಾರ್ಮ್‌ನಿಂದಾಗಿ, ಸಂಜು ಸ್ಥಾನದ ಬಗ್ಗೆ ಗಂಭೀರ ಚರ್ಚೆಗಳು ಹಾಗೂ ಕಳಪೆ ಪ್ರದರ್ಶನದ ಕಾರಣದಿಂದ ಸಂಜು ಅವರನ್ನು ಹೊರಗಿಡುವ ಒತ್ತಡಗಳು ಹೆಚ್ಚಾಗಿದ್ದವು. ತಂಡದಲ್ಲಿ ಸಿಗುವ ಅವಕಾಶಗಳ ಅನಿಶ್ಚಿತತೆಯು ಸ್ಯಾಮ್ಸನ್ ಅವರನ್ನು ಹೊಸ ರಣತಂತ್ರ ರೂಪಿಸಿಕೊಳ್ಳುವಂತೆ ಪ್ರೇರೆಪಿಸಿತು.

ಹಿಂದೆಲ್ಲಾ ಕ್ರೀಸ್‌ನಲ್ಲಿ ಸ್ವಲ್ಪ ಸಮಯಾವಕಾಶ ತೆಗೆದುಕೊಂಡು, ಪವರ್‌ಪ್ಲೇನಲ್ಲಿ ನಿಧಾನವಾಗಿ ಆಡಿ ನಂತರ ಸ್ಫೋಟಕ ಬ್ಯಾಟಿಂಗ್‌ಗೆ ಮುಂದಾಗುತ್ತಿದ್ದ ಸಂಜು, ಈಗ ಮೊದಲ ಓವರ್‌ನಿಂದಲೇ ಗೇರ್ ಬದಲಾಯಿಸುತ್ತಿದ್ದಾರೆ. ಬೌಲರ್ ಯಾರೇ ಆಗಿರಲಿ, ಸಿಕ್ಕ ಅವಕಾಶವನ್ನು ಬೌಂಡರಿಗಟ್ಟುವ ಧೈರ್ಯವಿರುವ ಆಟವನ್ನು ಕಳೆದ ಕೆಲವು ಟಿ20 ಪಂದ್ಯಗಳಲ್ಲಿ ಸ್ಪಷ್ಟವಾಗಿ ಕಾಣಬಹುದು. ತಮ್ಮ ಸ್ಥಾನಕ್ಕೆ ಎದುರಾಗಿರುವ ತೀವ್ರ ಸ್ಪರ್ಧೆಯನ್ನು ಅರಿತುಕೊಂಡಿರುವ ಅವರು, ತಂಡದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಹಿಂದೆಂದಿಗಿಂತಲೂ ಹೆಚ್ಚು ಆಕ್ರಮಣಕಾರಿ ಹಾಗೂ ಸ್ಥಿರ ಆಟವನ್ನು ಪ್ರದರ್ಶಿಸಬೇಕಾದ ಅನಿವಾರ್ಯತೆಯಲ್ಲಿದ್ದಾರೆ.

ಡಗೌಟ್‌ನಲ್ಲಿ ಅವಕಾಶಕ್ಕಾಗಿ ಕಾದುಕುಳಿತಿರುವ ಯುವ ಆಟಗಾರನ ನೆರಳು ಆಡುವ ಬಳಗದಲ್ಲಿರುವ ಸಂಜು ಮೇಲೆ ಪ್ರಭಾವ ಬೀರಿದೆ ಎನ್ನಬಹುದು. ವೈಭವ್ ಸೂರ್ಯವಂಶಿಯಂತಹ ಪ್ರತಿಭೆಗಳು ಬೆಂಚ್ ಕಾಯುತ್ತಿರುವಾಗ, ಆಡುವ ಹನ್ನೊಂದರ ಬಳಗದಲ್ಲಿರುವ ಆಟಗಾರ ತನ್ನ ಅತ್ಯುತ್ತಮ ವೇಗವನ್ನು ಕಾಯ್ದುಕೊಳ್ಳುವುದು ಅತಿಮುಖ್ಯವಾಗಿದೆ. ಸ್ಯಾಮ್ಸನ್ ಕೂಡ ಪ್ರಸ್ತುತ ಇದೇ ಹಾದಿಯನ್ನು ಹಿಡಿದಿದ್ದು, ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಪವರ್‌ಪ್ಲೇ ಓವರ್‌ಗಳಲ್ಲಿ ಬೌಲರ್‌ಗಳ ಮೇಲೆ ಅಕ್ಷರಶಃ ಸವಾರಿ ಮಾಡಿದರು.

Also Read
114 ಎಸೆತಗಳಲ್ಲಿ ದ್ವಿಶತಕ: ಒಂದೇ ತಿಂಗಳಲ್ಲಿ ಶುಭಮಾನ್ ಗಿಲ್​ ದಾಖಲೆ ಮುರಿದ ಇಂಗ್ಲೆಂಡ್ ಸ್ಟಾರ್ ಬ್ಯಾಟರ್ ಹ್ಯಾರಿ ಬ್ರೂಕ್! Harry Brook
Sanju Samson

ಅಭಿಷೇಕ್ ಶರ್ಮಾ ಜತೆಗೂಡಿ ಕ್ರೀಸ್‌ನ ಮತ್ತೊಂದು ತುದಿಯಿಂದ ನಡೆಸಿದ ಈ ಆಕ್ರಮಣಕಾರಿ ಬ್ಯಾಟಿಂಗ್‌ನ ಆರ್ಭಟವು ಎದುರಾಳಿಗಳನ್ನು ಬೆಚ್ಚಿಬೀಳಿಸಿತು. ನೂರಕ್ಕೂ ಹೆಚ್ಚಿನ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಸಂಜು, ಕೇವಲ 33 ಎಸೆತಗಳಲ್ಲಿ 67 ರನ್‌ಗಳ ಬಿರುಗಾಳಿಯಂತಹ ಇನ್ನಿಂಗ್ಸ್ ಕಟ್ಟಿ ತಂಡದ ಸುಲಭ ಗೆಲುವಿಗೆ ದಾರಿ ಮಾಡಿಕೊಟ್ಟರು. ಈ ಸ್ಫೋಟಕ ಪ್ರದರ್ಶನವು ಕೇವಲ ಅವರ ವೈಯಕ್ತಿಕ ಫಾರ್ಮ್ ಅಲ್ಲ, ಬದಲಿಗೆ ತಂಡದಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ನಡೆಯುತ್ತಿರುವ ಆರೋಗ್ಯಕರ ಹಾಗೂ ಕಠಿಣ ಸ್ಪರ್ಧೆಯ ನೇರ ಫಲಿತಾಂಶವಾಗಿದೆ.

ಒಟ್ಟಾರೆಯಾಗಿ, ಯುವ ಆಟಗಾರರ ತೀವ್ರ ಪೈಪೋಟಿಯು ಹಿರಿಯ ಆಟಗಾರರ ಮೇಲೆ ಪ್ರಭಾವ ಬೀರಿದ್ದು, ಇನ್ನಷ್ಟು ಅಪ್​ಡೇಟ್​ ಆಗುವಂತೆ ಮಾಡಿದೆ ಎಂಬುದಕ್ಕೆ ಸಂಜು ಸ್ಯಾಮ್ಸನ್ ಅವರ ಈ ನವ ಅವತಾರವೇ ಸಾಕ್ಷಿಯಾಗಿದೆ. ಸ್ಥಾನ ಕಳೆದುಕೊಳ್ಳುವ ಭೀತಿಯೇ ಅವರನ್ನು ಧೈರ್ಯಶಾಲಿ ಮತ್ತು ಮೈಮರೆವಿಲ್ಲದ ಬ್ಯಾಟರ್ ಆಗಿ ಪರಿವರ್ತಿಸಿದ್ದು, ಮುಂಬರುವ ಪಂದ್ಯಗಳಲ್ಲೂ ಸಂಜು ಅವರಿಂದ ಇದೇ ರೀತಿಯ ರೋಚಕ ಹಾಗೂ ಸಾಹಸಮಯ ಆಟವನ್ನು ನಿರೀಕ್ಷಿಸಬಹುದಾಗಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net