114 ಎಸೆತಗಳಲ್ಲಿ ದ್ವಿಶತಕ: ಒಂದೇ ತಿಂಗಳಲ್ಲಿ ಶುಭಮಾನ್ ಗಿಲ್​ ದಾಖಲೆ ಮುರಿದ ಇಂಗ್ಲೆಂಡ್ ಸ್ಟಾರ್ ಬ್ಯಾಟರ್ ಹ್ಯಾರಿ ಬ್ರೂಕ್! Harry Brook

ಬೆನ್ ಡಕೆಟ್ 29 ರನ್ ಗಳಿಸಿ 16ನೇ ಓವರ್‌ನಲ್ಲಿ ಔಟಾದ ಬಳಿಕ ಕ್ರೀಸ್‌ಗೆ ಬಂದ ಹ್ಯಾರಿ ಬ್ರೂಕ್, ಆರಂಭದಲ್ಲಿ ಎಚ್ಚರಿಕೆಯ ಆಟವಾಡಿ ಮೊದಲ ಆರು ಎಸೆತಗಳಲ್ಲಿ ಕೇವಲ ಎರಡು ರನ್ ಗಳಿಸಿದರು. ಕ್ರಮೇಣ ಪಿಚ್‌ಗೆ ಹೊಂದಿಕೊಂಡ ಬಳಿಕ ಶ್ರೀಲಂಕಾ ಬೌಲರ್‌ಗಳ ಮೇಲೆ ತೀವ್ರವಾದ ಪ್ರತಿದಾಳಿ ನಡೆಸಿದರು.
Harry Brook
ಇಂಗ್ಲೆಂಡ್‌ ಕ್ರಿಕೆಟ್​ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್ ಹಾಗೂ ಟೀಮ್​ ಇಂಡಿಯಾ ಆಟಗಾರ ಶುಭಮಾನ್​ ಗಿಲ್
Published on: 

ಇಸ್ಲಮಾಬಾದ್​: ಇಂಗ್ಲೆಂಡ್‌ ಕ್ರಿಕೆಟ್​ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್ ( Harry Brook ) ತಮ್ಮ ಅಬ್ಬರದ ಬ್ಯಾಟಿಂಗ್‌ನಿಂದ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಗುರುವಾರ ನಡೆದ ಶ್ರೀಲಂಕಾ ವಿರುದ್ಧದ ತ್ರಿಕೋನ ಸರಣಿಯ ಪಂದ್ಯದಲ್ಲಿ ಕೇವಲ 114 ಎಸೆತಗಳಲ್ಲಿ ಸ್ಫೋಟಕ ದ್ವಿಶತಕ ಸಿಡಿಸುವ ಮೂಲಕ ಬ್ರೂಕ್ ಈ ಅಸಾಮಾನ್ಯ ಸಾಧನೆ ಮಾಡಿದ್ದಾರೆ. ಶ್ರೀಲಂಕಾ ಬೌಲರ್‌ಗಳನ್ನು ಅಕ್ಷರಶಃ ದಂಡಿಸಿದ ಬ್ರೂಕ್​, ಕಳೆದ ತಿಂಗಳಷ್ಟೆ ಶುಭಮಾನ್ ಗಿಲ್ ನಿರ್ಮಿಸಿದ್ದ ದಾಖಲೆಯನ್ನು ಪುಡಿಪುಡಿಗಟ್ಟುವುದರ ಜತೆಗೆ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಇಂಗ್ಲೆಂಡ್‌ನ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾದರು.

ಬೆನ್ ಡಕೆಟ್ 29 ರನ್ ಗಳಿಸಿ 16ನೇ ಓವರ್‌ನಲ್ಲಿ ಔಟಾದ ಬಳಿಕ ಕ್ರೀಸ್‌ಗೆ ಬಂದ ಹ್ಯಾರಿ ಬ್ರೂಕ್, ಆರಂಭದಲ್ಲಿ ಎಚ್ಚರಿಕೆಯ ಆಟವಾಡಿ ಮೊದಲ ಆರು ಎಸೆತಗಳಲ್ಲಿ ಕೇವಲ ಎರಡು ರನ್ ಗಳಿಸಿದರು. ಕ್ರಮೇಣ ಪಿಚ್‌ಗೆ ಹೊಂದಿಕೊಂಡ ಬಳಿಕ ಶ್ರೀಲಂಕಾ ಬೌಲರ್‌ಗಳ ಮೇಲೆ ತೀವ್ರವಾದ ಪ್ರತಿದಾಳಿ ನಡೆಸಿದರು.

Also Read
ಸಂಜು, ನಮನ್ ಧೀರ್ ಅಬ್ಬರ: ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ! New Zealand vs India
Harry Brook

ಕಮಿಂದು ಮೆಂಡಿಸ್ ಬೌಲಿಂಗ್‌ನಲ್ಲಿ ಎರಡು ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ತಮ್ಮ ಆಕ್ರಮಣಕಾರಿ ಆಟ ಆರಂಭಿಸಿದ ಬ್ರೂಕ್​, ಜಾನಿತ್ ಲಿಯಾನಗೆ ಬೌಲಿಂಗ್‌ನಲ್ಲೂ ಬೌಂಡರಿ ಹಾಗೂ ಸಿಕ್ಸರ್‌ಗಳ ಸುರಿಮಳೆಗೈದರು. ಕೇವಲ 43 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಬ್ರೂಕ್, ಜೋ ರೂಟ್ ಜೊತೆಗೂಡಿ ತಂಡಕ್ಕೆ ಆಧಾರವಾದರು ಹಾಗೂ ಮನಮೋಹಕ ಪುಲ್ ಶಾಟ್‌ಗಳು, ಲಾಪ್ಟ್ ಡ್ರೈವ್‌ಗಳು ಮತ್ತು ನವೀನ ಶೈಲಿಯ ಶಾಟ್‌ಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.

ಅಸಿತಾ ಫರ್ನಾಂಡೋ ಎಸೆತದಲ್ಲಿ ಸ್ಕೂಪ್ ಶಾಟ್ ಆಡುವ ಮೂಲಕ ಬ್ರೂಕ್ ತಮ್ಮ ಶತಕವನ್ನು (74 ಎಸೆತಗಳಲ್ಲಿ) ಪೂರೈಸಿದರು. ಜೋ ರೂಟ್ 69 ರನ್‌ಗಳಿಸಿ ಔಟಾದ ಬಳಿಕ ಬ್ರೂಕ್ ತಮ್ಮ ಬ್ಯಾಟಿಂಗ್ ವೇಗವನ್ನು ಇನ್ನಷ್ಟು ಹೆಚ್ಚಿಸಿಕೊಂಡರು. ದಸುನ್ ಶನಕ ಎಸೆದ 41ನೇ ಓವರ್‌ನಲ್ಲಿ ಬರೋಬ್ಬರಿ 20 ರನ್‌ಗಳನ್ನು ಕಲೆಹಾಕುವ ಮೂಲಕ ತಮ್ಮ ಸ್ಪಷ್ಟ ಉದ್ದೇಶವನ್ನು ತೋರಿದರು. ನಂತರ ರಿವರ್ಸ್ ಸ್ಕೂಪ್ ಶಾಟ್ ಮೂಲಕ 150 ರನ್‌ಗಳ ಮೈಲಿಗಲ್ಲನ್ನು ತಲುಪಿದರು. ಇನ್ನೊಂದೆಡೆ ವಿಲ್ ಜ್ಯಾಕ್ಸ್ ಕೂಡ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಕಾರಣ ಇಂಗ್ಲೆಂಡ್ ಮೊತ್ತ ವೇಗವಾಗಿ ಏರಿಕೆಯಾಯಿತು. ಈ ನಡುವೆ 185 ರನ್ ಗಳಿಸಿದ್ದಾಗ ಹ್ಯಾರಿ ಬ್ರೂಕ್ ನೀಡಿದ್ದ ಕ್ಯಾಚ್ ಅನ್ನು ಶ್ರೀಲಂಕಾ ಫೀಲ್ಡರ್‌ಗಳು ಕೈಚೆಲ್ಲುವ ಮೂಲಕ ಜೀವದಾನ ನೀಡಿದರು.

Also Read
RCB ಮಾಲಕಿ ಮನೆಯಲ್ಲಿ ನೆರವೇರಿದ ದುರ್ಗಾ ಪೂಜೆ! Ananya Birla!
Harry Brook

ಕಡೇ ಓವರ್‌ನಲ್ಲಿ ದ್ವಿಶತಕ ಪೂರ್ಣಗೊಳಿಸಲು ಆರು ಎಸೆತಗಳಲ್ಲಿ 14 ರನ್‌ಗಳ ಅವಶ್ಯಕತೆಯಿತ್ತು. ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿದ ಬ್ರೂಕ್, ನಂತರ ಎರಡು ರನ್‌ಗಳನ್ನು ಓಡಿ, ವಿಕೆಟ್ ಕೀಪರ್ ಮೇಲಿಂದ ಬೌಂಡರಿ ಗಡಿಗೆ ಸ್ಕೂಪ್ ಶಾಟ್ ಬಾರಿಸಿದರು. ಇದರೊಂದಿಗೆ ಕೇವಲ 114 ಎಸೆತಗಳಲ್ಲಿ 200 ರನ್‌ಗಳ ಗಡಿ ದಾಟುವ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ತಮ್ಮ ಹೆಸರನ್ನು ಬಂಗಾರದ ಲಿಪಿಯಲ್ಲಿ ಬರೆಸಿಕೊಂಡರು. ಬ್ರೂಕ್ ಅವರ ಈ ಪ್ರಚಂಡ ಆಟದ ನೆರವಿನಿಂದ ಇಂಗ್ಲೆಂಡ್ ತಂಡವು ನಿಗದಿತ 50 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಬೃಹತ್ 429 ರನ್‌ಗಳನ್ನು ಕಲೆಹಾಕಿತು.

ಅಂದಹಾಗೆ, ಶುಭಮಾನ್ ಗಿಲ್ ಅವರು ಏಕದಿನ ಕ್ರಿಕೆಟ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಕೇವಲ 117 ಎಸೆತಗಳಲ್ಲಿ ತಮ್ಮ ದ್ವಿಶತಕವನ್ನು ಪೂರ್ಣಗೊಳಿಸುವ ಮೂಲಕ ಈ ದಾಖಲೆಯನ್ನು ಬರೆದಿದ್ದರು. ಈ ಪಂದ್ಯವು ಸೆಪ್ಟೆಂಬರ್ 30, 2026 ರಂದು ಅಸ್ಸಾಂನ ಗುವಾಹಾಟಿಯಲ್ಲಿರುವ ವರ್ಸಾಪಾರಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಿತು, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net