ಮುಂಬೈ ಇಂಡಿಯನ್ಸ್​ ಪಾಳಯಕ್ಕೆ ಪೊಲಾರ್ಡ್​ ವಿದಾಯ: ಬದ್ಧ ವೈರಿ ಸೂಪರ್​ ಕಿಂಗ್ಸ್​ ಬಳಗ ಸೇರಿಕೊಂಡ ಕೆರೆಬಿಯನ್​ ದೈತ್ಯ! Kieron Pollard

ಮುಂಬೈ ಇಂಡಿಯನ್ಸ್ ಬಿಟ್ಟು ಬದ್ಧ ವೈರಿ ಸೂಪರ್ ಕಿಂಗ್ಸ್ ಬಳಗಕ್ಕೆ ಸೇರಿದ ಕೀರನ್ ಪೊಲಾರ್ಡ್! SA20 ಲೀಗ್‌ನಲ್ಲಿ ಭಾರಿ ಮೊತ್ತಕ್ಕೆ ಬಿಡ್ ಗೆದ್ದ ಜೋಬರ್ಗ್ ಸೂಪರ್ ಕಿಂಗ್ಸ್. ಪೂರ್ಣ ವಿವರ ಓದಿ.
Kieron Pollard has left Mumbai Indians and joined Super Kings
ಮುಂಬೈ ಇಂಡಿಯನ್ಸ್ ತೊರೆದು ಸೂಪರ್ ಕಿಂಗ್ಸ್ ಸೇರಿದ ಕೈರನ್ ಪೊಲಾರ್ಡ್
Published on: 

IPL: ಟಿ20 ಕ್ರಿಕೆಟ್ ಜಗತ್ತಿನ ದೈತ್ಯ ಪ್ರತಿಭೆ, ವಿಂಡೀಸ್‌ನ ಮಾಜಿ ನಾಯಕ ಕೈರಾನ್ ಪೊಲಾರ್ಡ್ ಕ್ರೀಡಾಭಿಮಾನಿಗಳಿಗೆ ಭರ್ಜರಿ ಸರ್ಪ್ರೈಸ್ ಕೊಟ್ಟಿದ್ದಾರೆ. ದಕ್ಷಿಣ ಆಫ್ರಿಕಾದ ಚುಟುಕು ಕ್ರಿಕೆಟ್ ‘SA20’ ಲೀಗ್‌ನಲ್ಲಿ ಪೊಲಾರ್ಡ್ ಹೊಸ ಅಧ್ಯಾಯ ಬರೆಯಲಿದ್ದು, ಈ ಬಾರಿ ಹಳದಿ ಜೆರ್ಸಿಯಲ್ಲಿ ಮಿಂಚಲು ಸಜ್ಜಾಗಿದ್ದಾರೆ.

SA20 ಟೂರ್ನಿಯ 2027ರ ಸೀಸನ್‌ಗಾಗಿ ಜೋಬರ್ಗ್ ಸೂಪರ್ ಕಿಂಗ್ಸ್ ಫ್ರಾಂಚೈಸಿ ಈ ವೆಸ್ಟ್ ಇಂಡೀಸ್ ಆಲ್‌ರೌಂಡರ್‌ನನ್ನು ಬರೋಬ್ಬರಿ 1.5 ಮಿಲಿಯನ್ ರಾಂಡ್ (ಸುಮಾರು 8.7 ಕೋಟಿ ರೂಪಾಯಿ) ಮೊತ್ತಕ್ಕೆ ಖರೀದಿಸಿದೆ. ಇಷ್ಟು ದಿನ ಮುಂಬೈ ಇಂಡಿಯನ್ಸ್ ಕುಟುಂಬದ ‘ಎಂಐ ಕೇಪ್ ಟೌನ್’ ತಂಡದ ಪರ ಆಡುತ್ತಿದ್ದ ಪೊಲಾರ್ಡ್, ಇದೀಗ ತಮ್ಮ ಪರಮ ಎದುರಾಳಿ ಪಾಳಯ ಎಂದೇ ಗುರುತಿಸಿಕೊಳ್ಳುವ ಸೂಪರ್ ಕಿಂಗ್ಸ್ ತೆಕ್ಕೆಗೆ ಜಿಗಿದಿದ್ದಾರೆ.

39ರ ಹರೆಯದಲ್ಲೂ ತಗ್ಗಿಲ್ಲ ಪೊಲಾರ್ಡ್ ಖದರ್!

ವಯಸ್ಸು 39 ಆದರೂ ಕೈರಾನ್ ಪೊಲಾರ್ಡ್ ಅವರ ಬ್ಯಾಟಿಂಗ್ ಖದರ್ ಕಿಂಚಿತ್ತೂ ಕಡಿಮೆಯಾಗಿಲ್ಲ. ಏಪ್ರಿಲ್ 2022ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರೂ, ಜಗತ್ತಿನ ನಾನಾ ಟಿ20 ಲೀಗ್‌ಗಳಲ್ಲಿ ಸಿಕ್ಸರ್ ಮಳೆ ಸುರಿಸುತ್ತಾ ಇಂದಿಗೂ ಬೌಲರ್‌ಗಳ ನಿದ್ದೆಗೆಡಿಸುತ್ತಿದ್ದಾರೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ದಶಕಗಳ ಕಾಲ ಬೆವರಿಳಿಸಿ, ಪಂದ್ಯಗಳನ್ನು ಏಕಾಂಗಿಯಾಗಿ ಗೆಲ್ಲಿಸಿಕೊಟ್ಟ ಇತಿಹಾಸ ಇವರದ್ದಾಗಿದ್ದು, ಈಗಲೂ ಕ್ರಿಕೆಟ್ ಮೈದಾನಕ್ಕಿಳಿದರೆ ಅದೇ ಹಳೆಯ ದರ್ಪ, ಅದೇ ಖಡಕ್ ಶಾಟ್‌ಗಳು ಮುಂದುವರಿದಿವೆ.

ಜೋಬರ್ಗ್ ಸೂಪರ್ ಕಿಂಗ್ಸ್ ಮ್ಯಾನೇಜ್‌ಮೆಂಟ್ ಕೂಡ ಪೊಲಾರ್ಡ್ ಅವರ ಇದೇ ಅಪಾರ ಅನುಭವ, ನಾಯಕತ್ವ ಗುಣ ಮತ್ತು ಡೆತ್ ಓವರ್‌ಗಳಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸುವ ಪವರ್ ಹಿಟ್ಟಿಂಗ್ ಸಾಮರ್ಥ್ಯವನ್ನು ನಂಬಿ ಕೋಟಿ ಕೋಟಿ ಹಣ ಸುರಿದಿದೆ ಎನ್ನಲಾಗಿದೆ.

Also Read
ಪ್ರೇಮಾನಂದ್​ ಮಹಾರಾಜರ ಭೇಟಿಗೆ 5 ಕೋಟಿ ಡೀಲ್​? ವಿರಾಟ್​ ಕೊಹ್ಲಿ ವಿರುದ್ಧದ ಆರೋಪಕ್ಕೆ ವಕ್ತಾರ ನೀಡಿದ ಸ್ಪಷ್ಟನೆ ಇಲ್ಲಿದೆ | Virat Kohli Controversy
Kieron Pollard has left Mumbai Indians and joined Super Kings

SA20 ನಲ್ಲಿ ಪೊಲಾರ್ಡ್ ಟ್ರ್ಯಾಕ್ ರೆಕಾರ್ಡ್ ಹೇಗಿದೆ?

ದಕ್ಷಿಣ ಆಫ್ರಿಕಾದ ಪಿಚ್‌ಗಳಲ್ಲಿ ಕೈರಾನ್ ಪೊಲಾರ್ಡ್‌ಗೆ ಆಡಿದ ಉತ್ತಮ ಅನುಭವವಿದೆ. SA20 ಟೂರ್ನಿಯಲ್ಲಿ ಇದುವರೆಗೆ 12 ಪಂದ್ಯಗಳನ್ನು ಆಡಿರುವ ಅವರು, 11 ಇನ್ನಿಂಗ್ಸ್‌ಗಳಲ್ಲಿ 207 ರನ್ ಸಿಡಿಸಿದ್ದಾರೆ. ಅವರ ಅಜೇಯ 33 ರನ್ ಗರಿಷ್ಠ ವೈಯಕ್ತಿಕ ಮೊತ್ತವಾಗಿದ್ದರೂ, ಅವರ ಬ್ಯಾಟಿಂಗ್‌ನ ಅಸಲಿ ತಾಕತ್ತು ಅಡಗಿರುವುದು 171.07ರ ಸ್ಪೋಟಕ ಸ್ಟ್ರೈಕ್ ರೇಟ್‌ನಲ್ಲಿ! ಕೊನೆಯ ಓವರ್‌ಗಳಲ್ಲಿ ಬಂದು ಪಂದ್ಯದ ಗತಿಯನ್ನೇ ಕ್ಷಣಾರ್ಧದಲ್ಲಿ ಬದಲಿಸುವ ಚಾಕಚಕ್ಯತೆ ಅವರಲ್ಲಿದೆ. ಇನ್ನು ಬೌಲಿಂಗ್‌ನಲ್ಲೂ ಕೈಜೋಡಿಸಿರುವ ಪೊಲಾರ್ಡ್, 8 ಇನ್ನಿಂಗ್ಸ್‌ಗಳಲ್ಲಿ 4 ವಿಕೆಟ್ ಕಿತ್ತಿದ್ದಾರೆ. ಕೇವಲ 22 ರನ್‌ಗೆ 2 ವಿಕೆಟ್ ಉರುಳಿಸಿದ್ದು ಬೆಸ್ಟ್ ಸ್ಪೆಲ್ ಆಗಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net