ಹಾಲಿವುಡ್, ಬಾಲಿವುಡ್ ನಟರನ್ನೂ ಮೀರಿಸ್ತಾನೆ..ವೈಭವ್​ ಸೂರ್ಯವಂಶಿ ಭಾರತದ ನಯಾ ಸೂಪರ್​ ಸ್ಟಾರ್​; 15 ರ ಪೋರನನ್ನು ಹೊಗಳಿದ ಲಲಿತ್​ ಮೋದಿ! Lalit Modi on Vaibhav Suryavanshi

ವೈಭವ್​ ಬಾಲಿವುಡ್​, ಹಾಲಿವುಡ್​ ನಟರನ್ನೂ ಮೀರಿಸಲಿದ್ದಾನೆ: ಲಲಿತ್​ ಮೋದಿ
ವೈಭವ್​ ಬಾಲಿವುಡ್​, ಹಾಲಿವುಡ್​ ನಟರನ್ನೂ ಮೀರಿಸಲಿದ್ದಾನೆ: ಲಲಿತ್​ ಮೋದಿ
Published on

ಪ್ರಮುಖ ಮುಖ್ಯಾಂಶಗಳು

  • ಐಪಿಎಲ್​ನಲ್ಲಿ ಧೂಳೆಬ್ಬಿಸಿದ ವೈಭವ್​ ಸೂರ್ಯವಂಶಿ
  • ಆರೆಂಜ್​ ಕ್ಯಾಪ್​ ಜೊತೆಗೆ ಇತರೆ ನಾಲ್ಕು ಪ್ರಶಸ್ತಿಗಳನ್ನು ಗೆದ್ದ ಬ್ಯಾಟರ್​
  • ಇವನು ಭಾರತದ ಹೊಸಾ ಸೂಪರ್​ಸ್ಟಾರ್​ ಎಂದ ಲಲಿತ್​ ಮೋದಿ
  • ವೈಭವ್​ ಬಾಲಿವುಡ್​, ಹಾಲಿವುಡ್​ ನಟರನ್ನೂ ಮೀರಿಸಲಿದ್ದಾನೆ
ಲಂಡನ್​: ಈ ಭಾರಿಯ ಐಪಿಎಲ್​ನಲ್ಲಿ ಸಾಕಷ್ಟು ಖ್ಯಾತಿ, ಚರ್ಚೆ ಜೊತೆಗೆ ಪ್ರಶಂಸೆಗೆ ಒಳಗಾದ ಆಟಗಾರನೆಂದರೆ ಅದು 15 ವರ್ಷದ ವೈಭವ್​ ಸೂರ್ಯವಂಶಿ. ರಾಜಸ್ಥಾನ್​ ರಾಯಲ್ಸ್​ ತಂಡದ ಪರವಾಗಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಇತ ಈ ಭಾರಿ ಅತ್ಯಧಿಕ ರನ್​ ಗಳಿಸಿ ಆರೆಂಜ್​ ಜತೆಗೆ ಇತರ ನಾಲ್ಕು ಪ್ರಶಸ್ತಿಗಳಿಗೆ ಭಾಜನನಾಗಿದ್ದಾನೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಇವನ ಬಗ್ಗೆ ಮಾತನಾಡಿರುವ ಐಪಿಎಲ್​ ಸ್ಥಾಪಕ, ಬಿಸಿಸಿಐ ಮಾಜಿ ಉಪಾಧ್ಯಕ್ಷ ಹಾಗೂ ತೆರಿಗೆ ವಂಚನೆ ಪ್ರಕರಣದಲ್ಲಿ ಲಂಡನ್​ ಸೇರಿರುವ ಉದ್ಯಮಿ ಲಲಿತ್​ ಮೋದಿ (Lalit Modi on Vaibhav Suryavanshi), ವೈಭವ್​ ಸೂರ್ಯವಂಶಿಯನ್ನು ಮುಕ್ತ ಕಂಠದಿಂದ ಹೊಗಳಿದ್ದಾರೆ.

ಇವನು ಜಗತ್ತಿನ ಸೂಪರ್​ಸ್ಟಾರ್​ ಆಗುತ್ತಾನೆ!

ವೈಭವ್​ ಸೂರ್ಯವಂಶಿ ಬಗ್ಗೆ ಮಾತನಾಡಿರುವ ಲಲಿತ್​ ಮೋದಿ, ಈ ವೈಭವ್​ ಸೂರ್ಯವಂಶಿ ಎಲ್ಲಾ ಬಾಲಿವುಡ್​, ಹಾಲಿವುಡ್​ ನಟರನ್ನು ಮೀರಿಸಿದ ಖ್ಯಾತಿ ಗಳಿಸುತ್ತಾನೆ. ಜಗತ್ತಿನ ಎಲ್ಲಾ ಮೆಸ್ಸಿಗಳನ್ನು ಮೆಟ್ಟಿನಿಲ್ಲುವ ತಾಕತ್ತು ಅವನಿಗಿದೆ.
ಕೇವಲ 15 ವರ್ಷಕ್ಕೆ ಯಾವುದೇ ಬೌಲರ್​ಗಳಿಗೆ ಹೆದರದೆ ಬ್ಯಾಟಿಂಗ್​ ಮಾಡುವ ಶೈಲಿ, ಮ್ಯಾನರಿಸಂ ನನಗೆ ಬಹಳ ಇಷ್ಟವಾಗಿದೆ ಎಂದು ಲಲಿತ್​ ಮೋದಿ ಹೇಳಿದ್ದಾರೆ. ಕೇವಲ 16 ಮ್ಯಾಚ್​ಗಳಲ್ಲಿ 776 ರನ್​ಗಳಿಸುವ ಮೂಲಕ ವೈಭವ್​ ಆರೆಂಜ್​ ಕ್ಯಾಪ್​ಗೆ ಭಾಜನರಾಗಿದ್ದಾರೆ. ಅದು ಘಟಾನುಘಟಿ ಬೌಲರ್​ಗಳನ್ನು ಎದುರಿಸಿ, ಎಂದರೆ ಆತನ ಆಟಕ್ಕೆ ಶಿರಭಾಗಲೇ ಬೇಕೆಂದು ಮೋದಿ ಹೇಳಿದ್ದಾರೆ.

ಇನ್ನು ಕೆಲವೇ ದಿನಗಳಲ್ಲಿ ಟೆಸ್ಟ್ ಕ್ರಿಕೆಟ್​ ಸಾಯುತ್ತದೆ!

ಇದೇ ಸಂದರ್ಶನದಲ್ಲಿ ಮುಂಬರುವ ದಿನಗಳಲ್ಲಿ ಟೆಸ್ಟ್ ಕ್ರಿಕೆಟ್​ ಕೊನೆಯಾಗುತ್ತದೆ. ಕೇವಲ ಐಪಿಎಲ್​ ಮಾದರಿಯ ಟಿ-20 ಪಂದ್ಯಗಳು ಮಾತ್ರ ಜೀವಿಸುತ್ತವೆ ಎಂದು ಲಲಿತ್​ ಮೋದಿ ಭವಿಷ್ಯ ನುಡಿದಿದ್ದಾರೆ.
ನನ್ನ ಪ್ರಕಾರ, ಒನ್​ ಡೇ ಇಂಟರ್​ನ್ಯಾಷನಲ್​ (ODI) ಟೂರ್ನಿಗಳು ಈಗ ಅನಗತ್ಯವಾಗಿದೆ. ಈ ಓಡಿಐ ಸತ್ತರು ಏನು ಪ್ರಯೋಜನವಿಲ್ಲ, ಅದರೆ ಟೆಸ್ಟ್ ಕ್ರಿಕೆಟ್​ಗೆ ಅದರದೆ ಆದ ಮಹತ್ವವಿದೆ. ಹೀಗಾಗಿ ಟೆಸ್ಟ್​ ಕ್ರಿಕೆಟ್​​ಲ್ಲಿ ಏನಾದರೂ ಬದಲಾವಣೆ ತರಬೇಕಾದ ತುರ್ತು ಅಗತ್ಯವಿದೆ ಎಂದು ಹೇಳಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net