ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲು: ಬಿಸಿಸಿಐ-ಕ್ರಿಕೆಟ್ ಆಸ್ಟ್ರೇಲಿಯಾದಿಂದ ಐತಿಹಾಸಿಕ ನಿರ್ಧಾರ! BCCI and Cricket Australia

ಹೌದು, ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಅಂಪೈರ್‌ಗಳ ವಿನಿಮಯ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದ್ದು, ಇದರಡಿ ಆಸ್ಟ್ರೇಲಿಯಾದ ಅಂಪೈರ್​​ಗಳು ಭಾರತದಲ್ಲಿ ನಡೆಯುವ ಪಂದ್ಯಗಳಲ್ಲಿ ಹಾಗೂ ಭಾರತೀಯ ಅಂಪೈರ್​ಗಳು ಆಸ್ಟ್ರೇಲಿಯಾದಲ್ಲಿ ನಡೆಯುವ ಪ್ರತಿಷ್ಠಿತ ದೇಶೀಯ ಪಂದ್ಯಗಳಲ್ಲಿ ಅಧಿಕೃತ ಕಾರ್ಯನಿರ್ವಹಿಸಲಿದ್ದಾರೆ.
BCCI and Cricket Australia
ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲು: ಬಿಸಿಸಿಐ-ಕ್ರಿಕೆಟ್ ಆಸ್ಟ್ರೇಲಿಯಾದಿಂದ ಐತಿಹಾಸಿಕ ನಿರ್ಧಾರ!
Published on: 

BCCI and Cricket Australia : ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವಿನೂತನ ಹಾಗೂ ಐತಿಹಾಸಿಕ ಹೆಜ್ಜೆಯೊಂದನ್ನು ಇಟ್ಟಿರುವ ಬಿಸಿಸಿಐ ( BCCI ) ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ (CA), ಉಭಯ ದೇಶಗಳ ನಡುವೆ ಅಂಪೈರ್‌ಗಳ ವಿನಿಮಯ ಕಾರ್ಯಕ್ರಮಕ್ಕೆ (Umpire Exchange Program) ಅಧಿಕೃತ ಚಾಲನೆ ನೀಡಿವೆ. ಈ ಐತಿಹಾಸಿಕ ನಿರ್ಧಾರದಿಂದಾಗಿ ಇನ್ನು ಮುಂದೆ ದೇಶೀಯ ಕ್ರಿಕೆಟ್‌ನ ಗುಣಮಟ್ಟ ಹಾಗೂ ತೀರ್ಪುಗಾರರ ಕೌಶಲ ಮತ್ತಷ್ಟು ಉನ್ನತ ಮಟ್ಟಕ್ಕೇರಲಿದ್ದು, ವಿಶ್ವ ಕ್ರಿಕೆಟ್ ವಲಯದಲ್ಲಿ ಈ ಮಹತ್ವದ ಬೆಳವಣಿಗೆ ಭಾರೀ ಸಂಚಲನ ಸೃಷ್ಟಿಸಿದೆ.

ಹೌದು, ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಅಂಪೈರ್‌ಗಳ ವಿನಿಮಯ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದ್ದು, ಇದರಡಿ ಆಸ್ಟ್ರೇಲಿಯಾದ ಅಂಪೈರ್​​ಗಳು ಭಾರತದಲ್ಲಿ ನಡೆಯುವ ಪಂದ್ಯಗಳಲ್ಲಿ ಹಾಗೂ ಭಾರತೀಯ ಅಂಪೈರ್​ಗಳು ಆಸ್ಟ್ರೇಲಿಯಾದಲ್ಲಿ ನಡೆಯುವ ಪ್ರತಿಷ್ಠಿತ ದೇಶೀಯ ಪಂದ್ಯಗಳಲ್ಲಿ ಅಧಿಕೃತ ಕಾರ್ಯನಿರ್ವಹಿಸಲಿದ್ದಾರೆ. ಉಭಯ ದೇಶಗಳ ಅಂಪೈರ್‌ಗಳಿಗೆ ಅಂತಾರಾಷ್ಟ್ರೀಯ ಮಟ್ಟದ ಅನುಭವವನ್ನು ಒದಗಿಸುವುದು ಮತ್ತು ಮ್ಯಾಚ್ ಆಫಿಶಿಯಲ್‌ಗಳ ಕೌಶಲವನ್ನು ಅಭಿವೃದ್ಧಿಪಡಿಸುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

Also Read
ವೈನ್ ಕಲರ್ ಲೆಹೆಂಗಾದಲ್ಲಿ ಮೈದುಂಬಿದ ಅಂದ: ಹೆಬ್ಬಾ ಪಟೇಲ್ ಹೊಸ ಸ್ಟೈಲಿಶ್ ಲುಕ್‌ಗೆ ಫ್ಯಾನ್ಸ್ ಫಿದಾ! Hebah Patel
BCCI and Cricket Australia

ಈ ಐತಿಹಾಸಿಕ ವಿನಿಮಯ ಕಾರ್ಯಕ್ರಮದ ಭಾಗವಾಗಿ, ಆಸ್ಟ್ರೇಲಿಯಾದ ಅನುಭವಿ ಅಂಪೈರ್ ಬೆನ್ ಟ್ರೆಲರ್ (Ben Trelor) ಅವರು ಭಾರತಕ್ಕೆ ಆಗಮಿಸಿ ಎರಡು ರಣಜಿ ಟ್ರೋಫಿ ಪಂದ್ಯಗಳಲ್ಲಿ ಅಂಪೈರಿಂಗ್ ಮಾಡಿದ್ದಾರೆ. ಮತ್ತೊಂದೆಡೆ, ಭಾರತದ ಪ್ರತಿಭಾವಂತ ಅಂಪೈರ್ ಪರಾಶರ್ ಜೋಶಿ (Parashar Joshi) ಅವರು ಆಸ್ಟ್ರೇಲಿಯಾಕ್ಕೆ ತೆರಳಿ ಅಲ್ಲಿ ನಡೆಯಲಿರುವ ಎರಡು ಶೆಫೀಲ್ಡ್ ಶೀಲ್ಡ್ ಪಂದ್ಯಗಳು ಹಾಗೂ ಒಂದು ಒಡಿಐ ಕಪ್ (ODI Cup) ಪಂದ್ಯದಲ್ಲಿ ಅಂಪೈರ್​ ಆಗಿ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಈ ವಿನೂತನ ವಿನಿಮಯದಿಂದ ಇಬ್ಬರೂ ದೇಶಗಳ ಅಂಪೈರ್‌ಗಳಿಗೆ ವಿದೇಶಿ ಪಿಚ್‌ಗಳು ಹಾಗೂ ವಿಭಿನ್ನ ವಾತಾವರಣದಲ್ಲಿ ಪಂದ್ಯಗಳನ್ನು ನಿಯಂತ್ರಿಸುವ ಅಮೂಲ್ಯ ಅನುಭವ ಸಿಗಲಿದೆ.

ಆಸ್ಟ್ರೇಲಿಯಾದ ಅಂಪೈರ್ ಬೆನ್ ಟ್ರೆಲರ್ ಅವರು ದೇಶೀಯ ಕ್ರಿಕೆಟ್‌ನಲ್ಲಿ ಅಗಾಧ ಅನುಭವ ಹೊಂದಿದ್ದಾರೆ. ಬೆನ್ ಇದುವರೆಗೆ 30 ಪ್ರಥಮ ದರ್ಜೆ ಪಂದ್ಯಗಳು, 20 ಲಿಸ್ಟ್ 'ಎ' ಪಂದ್ಯಗಳು ಹಾಗೂ 39 ಬಿಗ್ ಬ್ಯಾಷ್ ಲೀಗ್ (BBL) ಪಂದ್ಯಗಳಲ್ಲಿ ಅಂಪೈರ್ ಆಗಿ ಸೇವೆ ಸಲ್ಲಿಸಿದ್ದಾರೆ. ಇದರೊಂದಿಗೆ ಎರಡು ಮಹಿಳಾ ಏಕದಿನ ಪಂದ್ಯಗಳು ಮತ್ತು ನಾಲ್ಕು ಮಹಿಳಾ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲೂ ಅವರು ತೀರ್ಪು ನೀಡಿದ್ದಾರೆ.

ಮೈದಾನದಲ್ಲಿ ಅಂಪೈರಿಂಗ್ ಮಾಡುವುದರ ಜೊತೆಗೆ, ನ್ಯೂ ಸೌತ್ ವೇಲ್ಸ್ ಕ್ರಿಕೆಟ್ ಸಂಘದ ಅಂಪೈರ್ ಶಿಕ್ಷಣ ಅಧಿಕಾರಿಯಾಗಿಯೂ ಕಾರ್ಯನಿರ್ವಹಿಸುತ್ತಿರುವ ಅವರು, ಹೊಸ ಅಂಪೈರ್‌ಗಳಿಗೆ ತರಬೇತಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಂಪೈರಿಂಗ್ ಶಿಕ್ಷಣಕ್ಕೆ ನೀಡಿದ ಕೊಡುಗೆಗಾಗಿ ಅವರು ನ್ಯೂ ಸೌತ್ ವೇಲ್ಸ್‌ನಿಂದ ನಾಲ್ಕು ಜಾರ್ಜ್ ಬೊರ್ವಿಕ್ ಸ್ಮಾರಕ ಪ್ರಶಸ್ತಿಗಳನ್ನೂ ಪಡೆದಿದ್ದಾರೆ.

ಭಾರತದಲ್ಲಿ ತಮ್ಮ ಅಂಪೈರಿಂಗ್ ಪ್ರಯಾಣ ಆರಂಭಿಸಿರುವ ಬೆನ್ ಟ್ರೆಲರ್, ದೆಹಲಿಯಲ್ಲಿ ಅಕ್ಟೋಬರ್ 18 ರಿಂದ 21ರ ವರೆಗೆ ನಡೆದ ಗುಜರಾತ್ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಬಳಿಕ ಅಕ್ಟೋಬರ್ 26 ರಿಂದ 29ರ ವರೆಗೆ ಮುಂಬೈನಲ್ಲಿ ನಡೆಯಲಿರುವ ಹರಿಯಾಣ ವಿರುದ್ಧದ ಪಂದ್ಯದಲ್ಲೂ ಅವರು ತೀರ್ಪು ನೀಡಲಿದ್ದಾರೆ.

Also Read
4 ಪವನ್​ ಚಿನ್ನದ ಮಾಂಗಲ್ಯ ಸರಕ್ಕಾಗಿ ಸಹೋದ್ಯೋಗಿ ನರ್ಸ್ ಭೀಕರ ಹತ್ಯೆ: ಪೊಲೀಸರ ಬಲೆಗೆ ಬಿದ್ದ ಕಿರಾತಕ​! Gold Chain
BCCI and Cricket Australia

ಇತ್ತ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಭಾರತದ ಅಂಪೈರ್ ಪರಾಶರ್ ಜೋಶಿ ಕೂಡ ರಣಜಿ ಮತ್ತು ದುಲೀಪ್ ಟ್ರೋಫಿಯಲ್ಲಿ 19 ಪ್ರಥಮ ದರ್ಜೆ ಪಂದ್ಯಗಳು, ವಿಜಯ್ ಹಜಾರೆ ಹಾಗೂ ದೇವಧರ್ ಟ್ರೋಫಿಯಲ್ಲಿ 32 ಲಿಸ್ಟ್ 'ಎ' ಪಂದ್ಯಗಳಲ್ಲದೆ, ಐಪಿಎಲ್ ಮತ್ತು ಸೈಯದ್ ಮುಶ್ತಾಕ್ ಅಲಿ ಟ್ರೋಫಿ ಸೇರಿದಂತೆ ಒಟ್ಟು 40 ಟಿ20 ಪಂದ್ಯಗಳಲ್ಲಿ ಅಧಿಕೃತ ಅಂಪೈರ್ ಆಗಿ ಕೆಲಸ ಮಾಡಿದ ದೆಹಲಿ ಮತ್ತು ದೇಶೀಯ ಕ್ರಿಕೆಟ್‌ನ ದಿಗ್ಗಜ ಅನುಭವ ಹೊಂದಿದ್ದಾರೆ.

ಪರಾಶರ್ ಜೋಶಿ ಅವರ ಆಸ್ಟ್ರೇಲಿಯಾ ಪ್ರವಾಸವು ನವೆಂಬರ್ 11 ರಿಂದ 14ರ ವರೆಗೆ ಬ್ರಿಸ್ಬೇನ್‌ನ ಗಬ್ಬಾ ಮೈದಾನದಲ್ಲಿ ನಡೆಯಲಿರುವ ಕ್ವೀನ್ಸ್‌ಲ್ಯಾಂಡ್ ವಿರುದ್ಧದ ಶೆಫೀಲ್ಡ್ ಶೀಲ್ಡ್ ಪಂದ್ಯದೊಂದಿಗೆ ಆರಂಭವಾಗಲಿದೆ. ನಂತರ ನವೆಂಬರ್ 16 ರಂದು ಅದೇ ಮೈದಾನದಲ್ಲಿ ನಡೆಯಲಿರುವ ಉಭಯ ತಂಡಗಳ ಒಡಿಐ ಕಪ್ ಪಂದ್ಯದಲ್ಲಿ ಅವರು ಅಂಪೈರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅಂತಿಮವಾಗಿ ನವೆಂಬರ್ 22 ರಿಂದ 25ರ ವರೆಗೆ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ನ್ಯೂ ಸೌತ್ ವೇಲ್ಸ್ ಹಾಗೂ ಕ್ವೀನ್ಸ್‌ಲ್ಯಾಂಡ್ ನಡುವಿನ ಶೆಫೀಲ್ಡ್ ಶೀಲ್ಡ್ ಪಂದ್ಯದ ಮೂಲಕ ಜೋಶಿ ತಮ್ಮ ಯಶಸ್ವಿ ಆಸ್ಟ್ರೇಲಿಯಾ ಪ್ರವಾಸವನ್ನು ಮುಕ್ತಾಯಗೊಳಿಸಲಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net