
ಹೆಬಾ ಅವರು ಅಗಲವಾದ ಜರಿ ಅಂಚನ್ನು ಹೊಂದಿರುವ ವೈನ್ ಬಣ್ಣದ ಪ್ಲೀಟೆಡ್ ಲೆಹೆಂಗಾವನ್ನು ಧರಿಸಿದ್ದಾರೆ. ಇದರ ಜೊತೆಗೆ ಗೋಲ್ಡ್ ಟ್ರಿಮ್, ಎಂಬ್ರಾಯ್ಡರಿ ಮಾಡಿದ ಅರ್ಧ ತೋಳುಗಳು, ಹಿಂದೆ ಕಟ್ಟುವ ವಿನ್ಯಾಸ ಮತ್ತು ಡೀಪ್ ಸ್ಕೂಪ್ ನೆಕ್‌ಲೈನ್ ಹೊಂದಿರುವ ಬ್ಲೌಸ್ ಅನ್ನು ಧರಿಸಿದ್ದಾರೆ.
ತಮ್ಮ ಸಾಂಪ್ರದಾಯಿಕ ಉಡುಗೆಗೆ ತಕ್ಕಂತೆ ಕೇಶವಿನ್ಯಾಸವನ್ನು ಸಿಂಪಲ್ ಆಗಿ 'ಸ್ಲೀಕ್ ಬನ್' (Sleek Bun) ಶೈಲಿಯಲ್ಲಿ ಕಾಯ್ದುಕೊಳ್ಳುವ ಮೂಲಕ ತಮ್ಮ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ.
ವೈನ್ ಬಣ್ಣದ ಲೆಹೆಂಗಾದಲ್ಲೂ ಎದೆ ಸೀಳು ಕಾಣುವಂತೆ ಹೆಬಾ ಪಟೇಲ್ ಮಾದಕ ನೋಟ ಬೀರಿದ್ದು, ಆಕೆಯ ಮೈಮಾಟವನ್ನು ನೋಡಿದ ಅಭಿಮಾನಿಗಳು ಕಾಮೆಂಟ್ಗಳ ಮೂಲಕ ಕೊಂಡಾಡುತ್ತಿದ್ದಾರೆ.
ಆರಂಭದಲ್ಲಿ ಗ್ಲಾಮರಸ್ ಪಾತ್ರಗಳ ಮೂಲಕವೇ ಗುರುತಿಸಿಕೊಂಡಿದ್ದ ಹೆಬಾ, ಕಾಲಕ್ರಮೇಣ ತಮ್ಮ ನಟನಾ ಕೌಶಲಕ್ಕೆ ಒತ್ತು ನೀಡುವ ಮೂಲಕ ನಟನೆ ಆಧಾರಿತ ಪಾತ್ರಗಳತ್ತ ಹೆಜ್ಜೆಹಾಕಿದ್ದಾರೆ.
ಹೆಬಾ ಪಟೇಲ್ ಅವರು ಚಲನಚಿತ್ರ ಇಂಡಸ್ಟ್ರಿಯಲ್ಲಿ ಈಗ ಒಟ್ಟು ಹತ್ತು ವರ್ಷಗಳಿಗೂ ಅಧಿಕ ಕಾಲದ ಯಶಸ್ವಿ ನಟನಾ ಪ್ರಯಾಣವನ್ನು ಪೂರೈಸಿದ್ದು, ಪ್ರೇಕ್ಷಕರ ಮನಸ್ಸಿನಲ್ಲಿ ತಮ್ಮದೇ ಆದ ಅಚ್ಚಳಿಯದ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಮುಂಬೈ ನಗರದಲ್ಲಿ ಜನಿಸಿ, ಅಲ್ಲೇ ಬೆಳೆದು ಬಂದ ಹೆಬ್ಬಾ ಪಟೇಲ್, ಮಾಡಲಿಂಗ್ ಕ್ಷೇತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿ ನಂತರ ಸಿನಿಮಾರಂಗಕ್ಕೆ ಕಾಲಿಟ್ಟರು.
2014ರಲ್ಲಿ ಕನ್ನಡ ಚಿತ್ರ ಅಧ್ಯಕ್ಷ (ಶರಣ್ ಜೊತೆಗೆ) ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿರು. ಅದೇ ವರ್ಷ ತಮಿಳು ಚಿತ್ರ ತಿರುಮನಂ ಎನುಂ ನಿಕ್ಕಾ ಮತ್ತು ತೆಲುಗು ಚಿತ್ರ ಅಲಾ ಎಲಾ ಮೂಲಕ ಬೇರೆ ಭಾಷೆಗಳಲ್ಲೂ ನಟಿಸಿದರು.
2015ರ ತೆಲುಗು ಚಿತ್ರ ಕುಮಾರಿ 21F ನಲ್ಲಿ ಮೀನಾ ಕುಮಾರಿ ಪಾತ್ರದ ಮೂಲಕ ದೊಡ್ಡ ಮನ್ನಣೆ ಪಡೆದರು. ಅಲ್ಲದೆ, ಸಂತೋಷಂ ಫಿಲ್ಮ್ ಅವಾರ್ಡ್ಸ್‌ನಲ್ಲಿ ಬೆಸ್ಟ್ ಡೆಬ್ಯೂಟ್ ಆಕ್ಟ್ರೆಸ್ ಸೇರಿ ಹಲವು ಪ್ರಶಸ್ತಿಗಳನ್ನು ಗೆದ್ದರು. ನಂತರ ಎಕ್ಕಡಿಕಿ ಪೊಥಾವು ಚಿನ್ನವಾಡ, ಅಂಧಗಾಡು, ಏಂಜೆಲ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
ಆರಂಭಿಕ ಹಂತದಲ್ಲಿ ಕೇವಲ ಗ್ಲಾಮರಸ್ ಇಮೇಜ್ ಹೊಂದಿದ್ದ ಅವರು, ಕಾಲಾನಂತರದಲ್ಲಿ ಕಥಾಹಂದರಕ್ಕೆ ಪ್ರಾಮುಖ್ಯತೆ ಇರುವ ಮತ್ತು ನಟನೆಗೆ ಹೆಚ್ಚು ಅವಕಾಶವಿರುವ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ತಮ್ಮ ನಟನಾ ಪರಿಧಿಯನ್ನು ವಿಸ್ತರಿಸಿಕೊಂಡಿದ್ದಾರೆ.
ಸದ್ಯ ಗ್ಲಾಮರಸ್ ಹಾಗೂ ಡಿಫರೆಂಟ್ ಪಾತ್ರಗಳ ಮೂಲಕ ಸಕ್ರಿಯವಾಗಿರುವ ಹೆಬ್ಬಾ ಪಟೇಲ್, ಮುಂಬರುವ ದಿನಗಳಲ್ಲಿ ತಮಿಳಿನ 'ಆದ್ಯಾ' (Aadya) ಹಾಗೂ ಕನ್ನಡದ 'ರುದ್ರ ಕಾಲ' (Rudra Kaala) ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.