ಎಲ್ಲ ಪಂದ್ಯವು... ಟೀಮ್ ಇಂಡಿಯಾ ವಿರುದ್ಧದ 2ನೇ ಟೆಸ್ಟ್​ಗೂ ಮುನ್ನವೇ ಮ್ಯಾಟ್​ ಹೆನ್ರಿ ಶಾಕಿಂಗ್ ಹೇಳಿಕೆ | IND vs NZ Test

IND vs NZ Test
ಎಲ್ಲ ಪಂದ್ಯವು... ಟೀಮ್ ಇಂಡಿಯಾ ವಿರುದ್ಧದ 2ನೇ ಟೆಸ್ಟ್​ಗೂ ಮುನ್ನವೇ ಮ್ಯಾಟ್​ ಹೆನ್ರಿ ಶಾಕಿಂಗ್ ಹೇಳಿಕೆ | IND vs NZ Test
Published on: 

IND vs NZ Test: ಪ್ರಸಕ್ತ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡು ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯವು ಡ್ರಾನಲ್ಲಿ ಕೊನೆಗೊಂಡಿದ್ದು, ದಾಖಲೆಗಳು ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಬೇಕಿತ್ತು ಎಂಬುದು ಕ್ರಿಕೆಟ್​ ಪ್ರೇಮಿಗಳ ಬಯಸಿದ್ದರು. ಆದರೆ, ಆಗಿದ್ದು ನಿರಾಶೆ. ಈಗ ಎರಡನೇ ಟೆಸ್ಟ್​ನಲ್ಲಿ ಗೆದ್ದರೆ, ಏಕದಿನ, ಟಿ20 ಬಳಿಕ ಟೆಸ್ಟ್ ಸರಣಿಯು ಭಾರತದ್ದೇ ಆಗಲಿದೆ ಎನ್ನುವಾಗಲೇ ನ್ಯೂಜಿಲೆಂಡ್​ ವೇಗಿ ಮ್ಯಾಟ್​ ಹೆನ್ರಿ ಅಚ್ಚರಿ ಹೇಳಿಕೆ ನೀಡಿದ್ದಾರೆ.

ಎರಡನೇ ಪಂದ್ಯವು ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್‌ನಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ, ಮಾತನಾಡಿರುವ ಮ್ಯಾಟ್ ಹೆನ್ರಿ, ಪಿಚ್ ಹೇಗಿರುತ್ತದೆ ಎಂದು ನಾವು ಮೊದಲೇ ಊಹಿಸಲು ತಲೆಕೆಡಿಸಿಕೊಳ್ಳದಿಲ್ಲ ಮತ್ತು ಅಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ಸಿದ್ಧರಾಗುವುದೇ ನಮ್ಮ ಗುರಿ ಎಂದು ಪರೋಕ್ಷವಾಗಿ ಟೀಮ್ ಇಂಡಿಯಾಗೆ ಕುಟುಕಿದರು.

ಸಾಮಾನ್ಯವಾಗಿ ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್ ಮೈದಾನವು ವೇಗದ ಬೌಲರ್‌ಗಳಿಗೆ ಅತ್ಯಂತ ಅನುಕೂಲಕರವಾದ ಪಿಚ್​ ಎಂದೇ ಹೇಳುತ್ತಾರೆ. ಆದರೆ, ಹಿಂದಿನ ಪಂದ್ಯಗಳನ್ನು ಆಧರಿಸಿ, ಪ್ರಸ್ತುತ ಪಿಚ್ ಹೇಗಿರುತ್ತದೆ ಎಂದು ಊಹಿಸುವುದು ಸರಿಯಲ್ಲ. ಪ್ರತಿ ಪಂದ್ಯದಲ್ಲೂ ಪಿಚ್‌ನ ಪರಿಸ್ಥಿತಿ ಬೇರೆಯೇ. ಮತ್ತು ಇತ್ತೀಚೆಗೆ ಈ ಮೈದಾನದಲ್ಲಿ ದೊಡ್ಡ ಸ್ಕೋರ್​ಗಳು ದಾಖಲಾಗಿವೆ. ಪರಿಸ್ಥಿತಿಗೆ ಅನುಗುಣವಾಗಿ ನಾವು ನಮ್ಮ ಟೆಕ್ನಿಕ್​ಗಳನ್ನು ಬದಲಾಯಿಸಿಕೊಳ್ಳುತ್ತೇವೆ ಎಂದರು.

ಹ್ಯಾಗ್ಲಿ ಓವಲ್‌ನಲ್ಲಿರುವ ಹುಲ್ಲುಹಾಸಿನ ಪಿಚ್‌ಗಳು ಸಾಮಾನ್ಯವಾಗಿ ಪಂದ್ಯದ ಆರಂಭಿಕ ಹಂತಗಳಲ್ಲಿ ವೇಗಿಗಳಿಗೆ ಹೆಚ್ಚು ಸಾಥ್ ನೀಡುತ್ತವೆ. ಪಂದ್ಯ ಮುಂದುವರೆದಂತೆ ಬ್ಯಾಟಿಂಗ್‌ಗೆ ಪರಿಸ್ಥಿತಿ ಅನುಕೂಲಕರವಾಗುವ ಸಾಧ್ಯತೆಯೂ ಇದೆ. ಪಿಚ್‌ನಲ್ಲಿನ ಬೌನ್ಸ್ ಮತ್ತು ಚೆಂಡಿನ ವೇಗವು ಬೌಲರ್‌ಗಳಿಗೆ ಲಾಭದಾಯಕವಾಗಿದ್ದರೂ, ಅದೇ ಸಮಯದಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ವೇಗವಾಗಿ ರನ್ ಗಳಿಸಲು ಅವಕಾಶವನ್ನೂ ನೀಡುತ್ತದೆ. ಬ್ಯಾಟರ್​ಗಳು ಕೆಲವೊಮ್ಮೆ ತಮ್ಮ ಡಿಫೆನ್ಸ್ ಆಟದ ಮೇಲೆ ನಂಬಿಕೆ ಇಡಬೇಕು ಎಂದು ಸಲಹೆ ನೀಡಿದರು.

Also Read
ಟೈಟಾನಿಕ್​, ಒಲಿಂಪಿಕ್​... ಮೂರಕ್ಕೆ ಮೂರು ಅತಿದೊಡ್ಡ ಹಡಗು ದುರಂತಗಳಿಂದ ಸಾವು ಗೆದ್ದು ವಿಧಿಗೆ ಚಳ್ಳೆಹಣ್ಣು ತಿನ್ನಿಸಿದ ಮಹಿಳೆ ಈಕೆ | Violet Jessop
IND vs NZ Test

ಮೊದಲ ಟೆಸ್ಟ್​ ವಿವರ

ವೆಲ್ಲಿಂಗ್ಟನ್‌ನಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯವು ಡ್ರಾನಲ್ಲಿ ಕೊನೆಗೊಂಡಿತು. ಭಾರತ ತನ್ನ ಮೊದಲ ಇನ್ನಿಂಗ್ಸ್ ಅನ್ನು 9 ವಿಕೆಟ್‌ಗೆ 720 ರನ್‌ಗಳಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ಆದರೆ, ನ್ಯೂಜಿಲೆಂಡ್ ತಂಡವು ಎರಡನೇ ಇನ್ನಿಂಗ್ಸ್‌ನಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ ಹೋರಾಟ ನಡೆಸಿ, ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ಐದು ದಿನಗಳ ಈ ಪಂದ್ಯದಲ್ಲಿ ಎರಡೂ ತಂಡಗಳು ಸೇರಿ ಕೇವಲ 24 ವಿಕೆಟ್‌ಗಳನ್ನು ಮಾತ್ರ ಕಳೆದುಕೊಂಡಿತು,(ಏಜೆನ್ಸೀಸ್).