ಮೊದಲ ಇನ್ನಿಂಗ್ಸ್​ನಲ್ಲೇ... ವಿಂಡೀಸ್​ ಎದುರು 4ನೇ ಟಿ20 ಪಂದ್ಯ ಸೋತ ಬೆನ್ನಲ್ಲೇ ಶ್ರೇಯಸ್​ ಹೇಳಿಕೆ ವೈರಲ್​ | IND vs WI T20

ಮೊದಲ ಇನಿಂಗ್ಸ್ ಅಂತ್ಯದ ನಂತರ ನಮ್ಮ ಸೋಲು ಬಹುತೇಕ ಖಚಿತವಾಯಿತು. ಚೇಸಿಂಗ್‌ನಲ್ಲಿ ಸ್ವಲ್ಪ ಭರವಸೆ ಸಿಕ್ಕರೂ, ವೆಸ್ಟ್ ಇಂಡೀಸ್ ಬಿಗಿ ಬೌಲಿಂಗ್ ದಾಳಿ ನಡೆಸಿತು. ಚೇಸಿಂಗ್​ನಲ್ಲಿ ನಮ್ಮ ಬ್ಯಾಟ್ಸ್‌ಮನ್‌ಗಳು ಕ್ರೀಸ್​ಗೆ ಅಂಟಿ ನಿಲ್ಲಲಿಲ್ಲ ಎಂದರು.
IND vs WI T20
ಮೊದಲ ಇನ್ನಿಂಗ್ಸ್​ನಲ್ಲೇ... ವಿಂಡೀಸ್​ ಎದುರು 4ನೇ ಟಿ20 ಪಂದ್ಯ ಸೋತ ಬೆನ್ನಲ್ಲೇ ಶ್ರೇಯಸ್​ ಹೇಳಿಕೆ ವೈರಲ್​ | IND vs WI T20
Published on: 

IND vs WI T20: ಪ್ರಸಕ್ತ ತವರಿನಲ್ಲಿ ನಡೆಯುತ್ತಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಶ್ರೇಯಸ್​ ಅಯ್ಯರ್​ ಪಡೆ ನಾಲ್ಕನೇ ಪಂದ್ಯದಲ್ಲಿ ಹೀನಾಯವಾಗಿ ಸೋಲುಂಡಿತು. ವಿಂಡೀಸ್​ ಬ್ಯಾಟ್ಸ್​ಮನ್​ ಮತ್ತು ಬೌಲರ್​ಗಳ ಹಾವಳಿಗೆ ನಡುಗಿದ ಟೀಮ್ ಇಂಡಿಯಾ, ಪೈಪೋಟಿ ಕೊಡದೆ ಸೋತಿದ್ದು ಸದ್ಯ ಭಾರತೀಯ ಕ್ರಿಕೆಟ್​ ಪ್ರೇಮಿಗಳಲ್ಲಿ ಭಾರಿ ಬೇಸರ ಮೂಡಿಸಿದೆ.

ತಮ್ಮ ತಂಡದ ಸೋಲಿನ ಬೆನ್ನಲ್ಲೇ ಮಾತನಾಡಿದ ಕ್ಯಾಪ್ಟನ್ ಶ್ರೇಯಸ್​ ಅಯ್ಯರ್​, ಎದುರಾಳಿ ತಂಡಕ್ಕೆ ಇಷ್ಟು ದೊಡ್ಡ ಸ್ಕೋರ್​ ನೀಡಿದರೆ ಗೆಲ್ಲುವುದು ಕಷ್ಟ. ಬೆನ್ನತ್ತಲು ಯತ್ನಿಸಿದರೂ ಗೆಲುವಿನ ದಡ ಸೇರಲು ಸಾಧ್ಯವಾಗಲಿಲ್ಲ. ವಿಶ್ವದ ಎಷ್ಟೇ ಅಗ್ರ ತಂಡವಾಗಿದ್ದರೂ 248 ರನ್‌ಗಳ ಬೃಹತ್ ಸ್ಕೋರ್ ಬೆನ್ನಟ್ಟುವುದು ಕಷ್ಟ. ಮೊದಲ ಇನಿಂಗ್ಸ್ ಅಂತ್ಯದ ನಂತರ ನಮ್ಮ ಸೋಲು ಬಹುತೇಕ ಖಚಿತವಾಯಿತು. ಚೇಸಿಂಗ್‌ನಲ್ಲಿ ಸ್ವಲ್ಪ ಭರವಸೆ ಸಿಕ್ಕರೂ, ವೆಸ್ಟ್ ಇಂಡೀಸ್ ಬಿಗಿ ಬೌಲಿಂಗ್ ದಾಳಿ ನಡೆಸಿತು. ಚೇಸಿಂಗ್​ನಲ್ಲಿ ನಮ್ಮ ಬ್ಯಾಟ್ಸ್‌ಮನ್‌ಗಳು ಕ್ರೀಸ್​ಗೆ ಅಂಟಿ ನಿಲ್ಲಲಿಲ್ಲ ಎಂದರು.

ಬ್ಯಾಟಿಂಗ್​ ವೇಳೆಯ ಪವರ್ ಪ್ಲೇನಲ್ಲಿ ಪಂದ್ಯ ನಮ್ಮ ಕೈಯಲ್ಲಿತ್ತು. ಅವರು ಪ್ರತಿ ಓವರ್‌ಗೆ ಸುಮಾರು 12 ರನ್ ಗಳಿಸಿದ್ದರು. ಆದರೆ, ವೆಸ್ಟ್ ಇಂಡೀಸ್ ಬೌಲರ್ ಗಳಿಗೂ ಪಿಚ್​ನಿಂದ ಉತ್ತಮ ಸಾಥ್​ ಸಿಕ್ಕಿದೆ. ಬಾಲ್​ ನೇರವಾಗಿ ಬ್ಯಾಟ್‌ಗೆ ಬರುವ ಮುನ್ನ ಸ್ವಲ್ಪ ಸ್ಲೋ ಆಗುತ್ತಿತ್ತು ಮತ್ತು ಬೌನ್ಸ್ ಕೂಡ ಆಗ್ತಿತ್ತು. ಎದುರಾಳಿ ಬೌಲರ್‌ಗಳು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಮಧ್ಯಮ ಓವರ್‌ಗಳಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದ್ದಾರೆ. ಫೀಲ್ಡಿಂಗ್​ನಲ್ಲಿಯೂ ವಿಂಡೀಸ್​ ಪಡೆ ಉತ್ತಮ ಪ್ರದರ್ಶನ ನೀಡಿದೆ ಎಂದರು.

Also Read
50 ಡಿಗ್ರಿಗೂ ಮೀರಿದ ತಾಪಮಾನ, ಸಲ್ಫರ್‌ ಕೊಳಗಳು! ಇದೇ ನೋಡಿ ಭೂಮಿಯ ವಿಚಿತ್ರ ತಾಣ| Danakil Depression
IND vs WI T20

ಹೈದರಾಬಾದ್‌ನ ಉಪ್ಪಾಲ್​ ಸ್ಟೇಡಿಯಂನಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಭಾರತವನ್ನು 24 ರನ್‌ಗಳಿಂದ ಮಣಿಸಿ ಇದೀಗ ಸರಣಿಯನ್ನು 2-2 ಅಂತರದಲ್ಲಿ ಸಮಬಲಗೊಳಿಸಿದೆ. ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ ಕೇವಲ 3 ವಿಕೆಟ್​ ನಷ್ಟಕ್ಕೆ 247 ರನ್​ಗಳ ಬೃಹತ್ ಸ್ಕೋರ್ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ, ಪೈಪೋಟಿ ನೀಡುವಲ್ಲಿ ಸಂಪೂರ್ಣವಾಗಿ ಮುಗ್ಗರಿಸಿತು. ಸಂಜು ಸ್ಯಾಮ್ಸನ್​ (56 ರನ್, 23 ಎಸೆತ), ತಿಲಕ್​ ವರ್ಮಾ (43 ರನ್​, 25 ಎಸೆತ) ಬಿಟ್ಟರೆ ಉಳಿದ್ಯಾವ ಬ್ಯಾಟರ್​ ಕೂಡ ಹೆಚ್ಚು ರನ್​ ಗಳಿಸಲು ಸಾಧ್ಯವಾಗಲಿಲ್ಲ. ಈಗ ಕೊನೆಯ ಪಂದ್ಯ ಬಾಕಿ ಉಳಿದಿದ್ದು, ಬೆಂಗಳೂರಿನಲ್ಲಿ ನಡೆಯಲಿರುವ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಯಾರು ರೋಚಕ ಜಯ ಸಾಧಿಸಿ, ಸರಣಿ ಗೆಲ್ಲುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net