ಚಿನ್ನದ ಪದಕ ಸುಮ್ಮನೆ... ಏಷ್ಯನ್​ ಗೇಮ್ಸ್​ನಲ್ಲಿ ಪಾಕ್​ ತಂಡ ಮಣಿಸಿದ ಬೆನ್ನಲ್ಲೇ ಸಂಜು ಓಪನ್​ ಟಾಕ್ | Sanju Samson​

ಪಾಕ್​ ವಿರುದ್ಧದ ಫೈನಲ್​ ಪಂದ್ಯದಲ್ಲಿಯೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ಕೊಡಲು ವಿಫಲಗೊಂಡ ಸಂಜು ಸ್ಯಾಮ್ಸನ್​, ಗೆಲುವಿನ ಬಳಿಕ ಪಾಕಿಸ್ತಾನದ ಕ್ರಿಕೆಟ್​ ಅಭಿಮಾನಿಗಳಿಗೆ ಮುಖಕ್ಕೆ ಹೊಡೆದಂತೆ ಹೇಳಿಕೆಯನ್ನು ನೀಡಿದ್ದಾರೆ.
Sanju Samson​
ಚಿನ್ನದ ಪದಕ ಸುಮ್ಮನೆ... ಏಷ್ಯನ್​ ಗೇಮ್ಸ್​ನಲ್ಲಿ ಪಾಕ್​ ತಂಡ ಮಣಿಸಿದ ಬೆನ್ನಲ್ಲೇ ಸಂಜು ಓಪನ್​ ಟಾಕ್ | Sanju Samson​
Published on: 

ನಗೋಯಾ: ಇತ್ತೀಚೆಗಷ್ಟೇ ಆತಿಥೇಯ ಜಪಾನ್​ನಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡ ಏಷ್ಯನ್ ಗೇಮ್ಸ್​ ಕ್ರೀಡಾಕೂಟದಲ್ಲಿ ಭಾರತಕ್ಕೆ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳ ಸುರಿಮಳೆಯೇ ಹರಿದುಬಂದಿದ್ದು, ಹಲವು ವಿಭಾಗದಲ್ಲಿ ಭಾರತೀಯ ಕ್ರೀಡಾಪಟುಗಳು ಐತಿಹಾಸಿಕ ಸಾಧನೆಗೈದಿದ್ದಾರೆ. ಈ ಪೈಕಿ ಪುರುಷರ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ ಫೈನಲ್​ನಲ್ಲಿ ಪಾಕಿಸ್ತಾನವನ್ನು ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಟಿತು. ಈ ಪಂದ್ಯದ ಬೆನ್ನಲ್ಲೇ ತಂಡದ ಸ್ಟಾರ್ ಆಟಗಾರ ಸಂಜು ಸ್ಯಾಮ್ಸನ್​ (Sanju Samson) ಕೊಟ್ಟ ಹೇಳಿಕೆಯೊಂದು ಸದ್ಯ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

19 ರನ್​ಗಳ ಸೋಲು

ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 19 ರನ್​ಗಳಿಂದ ಸೋಲುಣಿಸಿದ ಶ್ರೇಯಸ್​ ಅಯ್ಯರ್​ ಪಡೆ, ಏಷ್ಯನ್​ ಗೇಮ್ಸ್​ನಲ್ಲಿ ರೋಚಕ ಜಯ ಸಾಧಿಸಿತು. ಈ ಮೂಲಕ ಚಿನ್ನದ ಪದಕವನ್ನು ಬಾಚಿಕೊಂಡಿತು. ಪಾಕ್​ ವಿರುದ್ಧದ ಫೈನಲ್​ ಪಂದ್ಯದಲ್ಲಿಯೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ಕೊಡಲು ವಿಫಲಗೊಂಡ ಸಂಜು ಸ್ಯಾಮ್ಸನ್​, ಗೆಲುವಿನ ಬಳಿಕ ಪಾಕಿಸ್ತಾನದ ಕ್ರಿಕೆಟ್​ ಅಭಿಮಾನಿಗಳಿಗೆ ಮುಖಕ್ಕೆ ಹೊಡೆದಂತೆ ಹೇಳಿಕೆಯನ್ನು ನೀಡಿದ್ದಾರೆ.

"ಭಾರತಕ್ಕೆ ಈ ಚಿನ್ನದ ಪದಕ ತಟ್ಟೆಯಲ್ಲಿಟ್ಟು ಕೊಟ್ಟಿದ್ದಲ್ಲ. ಅಷ್ಟು ಸುಲಭವಾಗಿ ಸಿಕ್ಕಿದ್ದಲ್ಲ. ಇದರ ಹಿಂದೆ ಇಡೀ ತಂಡದ ಕಠಿಣ ಪರಿಶ್ರಮ ಮತ್ತು ಆಟಗಾರರ ಸಮರ್ಪಣಾ ಭಾವವಿದೆ. ಫೈನಲ್ ಪಂದ್ಯದಂತಹ ತೀವ್ರ ಒತ್ತಡದ ಸನ್ನಿವೇಶವನ್ನು ನಿಭಾಯಿಸಲು ತಂಡದಲ್ಲಿದ್ದ 'ಎ' ಪಟ್ಟಿಯ ಅನುಭವಿ ಆಟಗಾರರ ಕೊಡುಗೆಯೇ ಈ ಗೆಲುವಿಗೆ ಮುಖ್ಯ ಕಾರಣ" ಎಂದು ಹೇಳಿದರು.

Also Read
ಈ ವಾರ 'ಬಿಗ್' ಮನೆಯಿಂದ ಹೊರಬಿದ್ದ ಮೊದಲ ಕಾಮ​ನ್​ಮ್ಯಾನ್​ ಸ್ಪರ್ಧಿ ಇವರೇ... | BBK13
Sanju Samson​

"ಕಠಿಣ ಶ್ರಮದಿಂದ ಈ ಗೆಲುವು ಸಿಕ್ಕಿದ್ದು ನಮಗೆ ಇನ್ನಷ್ಟು ತೃಪ್ತಿ ತಂದಿದೆ. ಖಂಡಿತವಾಗಿಯೂ, ಏಷ್ಯನ್ ಗೇಮ್ಸ್‌ನ ಫೈನಲ್‌ನಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸುವುದು ನಮ್ಮೆಲ್ಲರಿಗೂ ಒಂದು ದೊಡ್ಡ ಸಂದರ್ಭ ಹಾಗೂ ದೊಡ್ಡ ಅವಕಾಶ. ಮೈದಾನಕ್ಕಿಳಿದ ಮೇಲೆ ಪಂದ್ಯದ ಪರಿಸ್ಥಿತಿಗೆ ತಕ್ಕಂತೆ ಆಡಿದ್ದರಿಂದಲೇ ನಮಗೆ ಈ ಪ್ರಶಸ್ತಿ ಒಲಿದಿದೆ" ಎಂದು ಸಂತಸ ವ್ಯಕ್ತಪಡಿಸಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net