ಹೋಟೆಲ್ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಪಾರಾ ಈಜುಗಾರ ಶಮ್ಸ್ ಆಲಂ ಕ್ರೀಡಾಕೂಟದಿಂದ ಉಚ್ಚಾಟನೆ! Shams Aalam Shaikh

ಜಪಾನ್‌ನಲ್ಲಿ ಹೋಟೆಲ್ ಮಹಿಳಾ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಭಾರತದ ಪಾರಾ ಈಜುಗಾರ ಮೊಹಮ್ಮದ್ ಶಮ್ಸ್ ಆಲಂ ಶೇಖ್‌ನನ್ನು ಪಾರಾ ಏಷ್ಯನ್ ಕ್ರೀಡಾಕೂಟದಿಂದ ಹೊರಹಾಕಲಾಗಿದೆ.
Indian para-swimmer Mohammad Shams Aalam Shaikh has been expelled from the Para Asian Games following allegations of misbehaving with hotel staff in Aichi-Nagoya, Japan.
ಜಪಾನ್‌ನ ಐಚಿ-ನಗೋಯಾದಲ್ಲಿ ಹೋಟೆಲ್ ಸಿಬ್ಬಂದಿ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪದ ಹಿನ್ನೆಲೆಯಲ್ಲಿ ಪಾರಾ ಏಷ್ಯನ್ ಗೇಮ್ಸ್‌ನಿಂದ ಉಚ್ಚಾಟನೆಗೊಂಡ ಭಾರತದ ಪಾರಾ ಈಜುಗಾರ ಮೊಹಮ್ಮದ್ ಶಮ್ಸ್ ಆಲಂ ಶೇಖ್.
Published on: 

ಜಪಾನ್​: ಜಪಾನಿನ ಐಚಿ-ನಗೋಯಾನಲ್ಲಿ ನಡೆಯುತ್ತಿರುವ 5 ನೇ ಪಾರಾ ಏಷ್ಯನ್​ ಕ್ರೀಡಾಕೂಟದಲ್ಲಿ, ಮೈದಾನದ ಹೊರಗೆ ನಡೆದಿರುವ ಘಟನೆಯೊಂದು ಭಾರೀ ವಿವಾದದ ರೂಪ ಪಡೆದುಕೊಂಡಿದೆ. ಭಾರತದ ಪಾರಾ ಈಜುಗಾರ (ಸ್ವಿಮ್ಮರ್​) ಮೊಹಮ್ಮದ್ ಶಮ್ಸ್ ಆಲಂ ಶೇಖ್, ತಂಗಿದ್ದ ಹೋಟೆಲ್​​ನಲ್ಲಿ ಮಹಿಳೆಯೊಬ್ಬಳ ಜತೆಗೆ ಕೆಟ್ಟದಾಗಿ ನಡೆದುಕೊಂಡ ಹಿನ್ನಲೆ ಕ್ರೀಡಾಕೂಟದಿಂದ ಹೊರಹಾಕಲಾಗಿದೆ ಎಂದು ವರದಿಯಾಗಿದೆ.

ಮಾಹಿತಿ ಪ್ರಕಾರ, ವಿಶ್ವದ ಮಾಜಿ ನಂ. 1 ಈಜುಗಾರ (100 ಮೀ. ಬಟರ್​ಫ್ಲೈ) ಮೊಹಮ್ಮದ್ ಶಮ್ಸ್ ಆಲಂ ಶೇಖ್, ತಾವು ತಂಗಿದ್ದ ಹೋಟೆಲ್​, ನಿರ್ವಹಣಾ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಲು ಮುಂದಾಗಿದ್ದು, ಆಕೆ ಅಲ್ಲಿಂದ ಓಡಿ ಬಂದು ಸ್ಥಳೀಯ ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಜಪಾನ್​ ಪೊಲೀಸರು ಈ ಘಟನೆ ಬಗ್ಗೆ ಭಾರತ ತಂಡಕ್ಕೆ ಹಾಗೂ ಪಾರಾ ಏಷ್ಯನ್​ ಗೇಮ್ಸ್​ ಆಯೋಜಕರಿಗೆ ಮಾಹಿತಿ ನೀಡಿದ್ದು, ಆಲಂ ಶೇಖ್ ಅವರನ್ನು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಆಟಗಾರನ ಮೇಲೆ ಲೈಂಗಿಕ ಆರೋಪದ ದೂರು ಕೇಳಿ ಬರುತ್ತಿದ್ದಂತೆ, ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಿದ ಪಾರಾ ಏಷ್ಯನ್​ ಗೇಮ್ಸ್​ ಆಯೋಜಕರು ಮೊಹಮ್ಮದ್ ಶಮ್ಸ್ ಆಲಂ ಶೇಖ್​ನನ್ನು ಕ್ರೀಡಾಕೂಟದಿಂದ ಹೊರಹಾಕಲು ನಿರ್ಧರಿಸಿದ್ದಾರೆ.

ಕ್ಷಮೆ ಕೇಳಿದ ಭಾರತ; ಕಠಿಣ ಕ್ರಮ ತೆಗೆದುಕೊಳ್ಳಲು ನಿರ್ಧಾರ!

ಇನ್ನು ಈ ಘಟನೆ ಜಾಗತಿಕವಾಗಿ ವಿವಾದವನ್ನು ಸೃಷ್ಟಿಸುತ್ತಲೇ ಎಚ್ಚೆತ್ತ ಭಾರತ ತಂಡವು ಹೋಟೆಲ್​ ಸಿಬ್ಬಂದಿ, ವ್ಯವಸ್ಥಾಪಕರು ಹಾಗೂ ಏಷ್ಯನ್​ ಗೇಮ್ಸ್​ ಆಯೋಜಕರಲ್ಲಿ ಕ್ಷಮೆಯನ್ನು ಕೇಳಿದ್ದಾರೆ. ಅಂತಯೇ ಈ ಕ್ರೀಡಾಪಟುವಿನ ಮೇಲೆ ಕಠಿಣ ಕ್ರಮವನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

Also Read
ತಾಯಿಗಾಗಿ 8,000 ಕಿ.ಮೀ ಓಟ! ಶಿವನಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು 19 ರ ಯುವಕನ ಸಾಹಸ! Monu Betaurabala
Indian para-swimmer Mohammad Shams Aalam Shaikh has been expelled from the Para Asian Games following allegations of misbehaving with hotel staff in Aichi-Nagoya, Japan.

ಈ ಘಟನೆ ಪಾರಾ ಒಲಿಂಪಿಕ್ಸ್​ ಕಮಿಟಿ ಮಟ್ಟದಲ್ಲಿ ಸದ್ದು ಮಾಡಿದ್ದು, ನಾವು ಕ್ರೀಡಾಪಟುಗಳಿಂದ ಇಂತಹ ವರ್ತನೆಯನ್ನು ಭಯಸುವುದಿಲ್ಲ. ಹಾಗೆಯೇ ಇಂತಹ ಆಟಗಾರರಿಗೆ ಮುಂದಿನ ದಿನಗಳಲ್ಲಿ ಅವಕಾಶವನ್ನು ಕೊಡುವುದಿಲ್ಲ. ಇವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದೇ ತಮ್ಮ ನಿಲುವಾಗಿದ್ದು, ಈ ವಿವಾದಿತ ಆಟಗಾರ, ಆತನ ದೇಶವನ್ನು ತಲುಪುತ್ತಲೇ, ಅವನನ್ನು ಪಾರಾ ಕ್ರೀಡಾಕೂಟದಿಂದ ಜೀವನಪರ್ಯಂತ ಬ್ಯಾನ್​ ಮಾಡುವ ಕುರಿತು ಚರ್ಚೆ ನಡೆಸುತ್ತಿದ್ದಾಗಿ ಪಾರಾ ಒಲಿಂಪಿಕ್​​​ ಕಮಿಟಿ ಮೂಲದಿಂದ ಮಾಹಿತಿ ಲಭ್ಯವಾಗಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net