

ನವದೆಹಲಿ: ತಂಡಗಳಿಂದ ರಿಲೀಸ್ ಆಗಿರುವ ರಿಷಭ್ ಪಂತ್ (ಡೆಲ್ಲಿ), ಕನ್ನಡಿಗ ಕೆಎಲ್ ರಾಹುಲ್ (ಲಖನೌ), ಶ್ರೇಯಸ್ ಅಯ್ಯರ್ (ಕೆಕೆಆರ್), ಆರ್. ಅಶ್ವಿನ್, ಯಜುವೇಂದ್ರ ಚಾಹಲ್ (ರಾಜಸ್ಥಾನ), ಅರ್ಷದೀಪ್ ಸಿಂಗ್ (ಪಂಜಾಬ್), ಇಶಾನ್ ಕಿಶನ್ (ಮುಂಬೈ), ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಮೊಹಮದ್ ಶಮಿ (ಗುಜರಾತ್) ಗರಿಷ್ಠ ಎರಡು ಕೋಟಿ ರೂ. ಮೂಲಬೆಲೆಯೊಂದಿಗೆ ಹರಾಜಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ.
2 ಕೋಟಿ ರೂ. ಮೂಲಬೆಲೆಯ ಇತರ ಭಾರತೀಯ ಕ್ರಿಕೆಟಿಗರೆಂದರೆ ವೆಂಕಟೇಶ್ ಅಯ್ಯರ್, ಆವೇಶ್ ಖಾನ್, ಖಲೀಲ್ ಅಹ್ಮದ್, ದೀಪಕ್ ಚಹರ್, ಮುಕೇಶ್ ಕುಮಾರ್, ಭುವನೇಶ್ವರ್ ಕುಮಾರ್, ಪ್ರಸಿದ್ಧ ಕೃಷ್ಣ, ಟಿ. ನಟರಾಜನ್, ದೇವದತ್ ಪಡಿಕ್ಕಲ್, ಕೃನಾಲ್ ಪಾಂಡ್ಯ, ಹರ್ಷಲ್ ಪಟೇಲ್, ವಾಷಿಂಗ್ಟನ್ ಸುಂದರ್, ಮೊಹಮದ್ ಸಿರಾಜ್, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್.
ಪೃಥ್ವಿ, ಸರ್ಫ್ರಾಜ್ ಮೂಲಬೆಲೆ ಇಳಿಕೆ
ಡೆಲ್ಲಿ ತಂಡದಲ್ಲಿ ರಿಟೇನ್ ಆಗದ ಪೃಥ್ವಿ ಷಾ ಮತ್ತು ಕಳೆದ ಹರಾಜಿನಲ್ಲಿ ಸೇಲಾಗದ ಸರ್ಫ್ರಾಜ್ ಖಾನ್ ಈ ಬಾರಿ ಐಪಿಎಲ್ ಹರಾಜಿಗೆ ಮೂಲಬೆಲೆ ಇಳಿಕೆ ಮಾಡಿಕೊಂಡಿದ್ದಾರೆ. ಈ ಇಬ್ಬರು ಮುಂಬೈ ಬ್ಯಾಟರ್ಗಳು ತಲಾ 75 ಲಕ್ಷ ರೂ. ಮೂಲಬೆಲೆಯೊಂದಿಗೆ ಹರಾಜಿನಲ್ಲಿ ಭಾಗವಹಿಸಲಿದ್ದಾರೆ. ಪೃಥ್ವಿ ಷಾ ಸದ್ಯ ಫಿಟ್ನೆಸ್-ಅಶಿಸ್ತಿನ ಕಾರಣಕ್ಕೆ ಮುಂಬೈ ರಣಜಿ ತಂಡದಿಂದಲೂ ಹೊರಗಿದ್ದರೆ, ಸರ್ಫ್ರಾಜ್ ಖಾನ್ ಭಾರತ ಟೆಸ್ಟ್ ತಂಡದ ಆಟಗಾರರಾಗಿದ್ದಾರೆ.