More

    ಕೋಮು ಸೌರ್ಹಾದತೆಗೆ ಕ್ರೀಡೆ ಮದ್ದು


    ಕೊಡಗು: ಕ್ರೀಡಾ ಮನೋಭಾವದಿಂದ ಕ್ರೀಡೆಗಳಲ್ಲಿ ಆಟಗಾರರು ಭಾಗವಹಿಸಬೇಕು ಎಂದು ಮೈಸೂರಿನ ಎಕ್ಸಲ್ ಸ್ಮಾರ್ಟ್ ಮೆಟೀರಿಯಲ್ಸ್ ಲ್ಯಾಬೋರೋಟರಿ ನಿರ್ದೇಶಕ ಕುಂಡಚ್ಚೀರ ನಿತಿನ್ ಅಭಿಪ್ರಾಯಪಟ್ಟರು.


    ಅಪ್ಪಾರಂಡ ಸುಗು ಸುಬ್ರಮಣಿ ಜ್ಞಾಪಕಾರ್ಥವಾಗಿ ಅಪ್ಪಾರಂಡ ಮುತ್ತಣ್ಣ ಕುಟುಂಬಸ್ಥರು ಇತ್ತೀಚೆಗೆ ವಿರಾಜಪೇಟೆ ಪ್ರಗತಿ ಶಾಲೆಯ ಬಾಸ್ಕೆಟ್ ಬಾಲ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕೊಡಗು ಬಾಸ್ಕೆಟ್ ಬಾಲ್ ಲೀಗ್ ಸೀಜನ್-1ಕ್ಕೆ ಚಾಲನೆ ನೀಡಿ ಮಾತನಾಡಿದರು.


    ಕ್ರೀಡೆಯಿಂದ ಸಾಮರಸ್ಯ ಬೆಸೆಯಲು ಸಾಧ್ಯ. ದೇಶದ ವಿವಿಧೆಡೆಗಳಲ್ಲಿ ಕೋಮುಗಲಭೆ, ಧರ್ಮಗಳ ಮಧ್ಯೆ ಒಳ ಜಗಳಗಳು ಪ್ರಾರಂಭವಾಗಿವೆ. ಇಂತಹ ವೇಳೆ ಕ್ರೀಡೆ ಅತ್ಯವಶ್ಯಕವಾಗಿದೆ. ಅಲ್ಲದೆ, ಕ್ರೀಡೆಯಲ್ಲಿ ತೊಡಗುವವರಿಗೆ ಯಾವುದೇ ಭೇದ-ಭಾವವಿರುವುದಿಲ್ಲ. ಸಮಾಜದಲ್ಲಿ ಉಂಟಾಗಿರುವ ಕಂದಕವನ್ನು ಜೋಡಿಸುವ ಕೆಲಸವನ್ನು ಕ್ರೀಡೆ ಮಾಡುತ್ತದೆ ಎಂದರು.


    ಮಾದಂಡ ಪಿ. ತಿಮ್ಮಯ್ಯ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಎಲ್ಲ ಕ್ರೀಡೆಗಳಿಗೂ ಪ್ರೋತ್ಸಾಹ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ಬಾಸ್ಕೆಟ್ ಬಾಲ್ ಕ್ರೀಡೆಗೂ ಪ್ರೋತ್ಸಾಹ ನೀಡಲಾಗುವುದು. ಪ್ರಥಮ ಬಾರಿಗೆ ಬಾಸ್ಕೆಟ್ ಬಾಲ್ ಲೀಗ್ ಅರಂಭಿಸಿದ್ದೇವೆ ಎಂದರು.

    ಕಾರ್ಯಕ್ರಮದಲ್ಲಿ ಕುಲ್ಲಚಂಡ ಬೋಪಣ್ಣ, ಪುರಸಭೆಯ ಸದಸ್ಯ ಮಹಮ್ಮದ್ ರಾಫಿ, ಹೆಚ್.ಎಸ್. ಮತೀನ್, ಉದ್ಯಮಿ ಮತ್ತು ಸಮಾಜ ಸೇವಕ ಶರೀಫ್ ಎಂ.ಇ. ಎಜಾಜ್ ಅಹಮ್ಮದ್, ಅಂತಾರಾಷ್ಟ್ರೀಯ ಬಾಸ್ಕೇಟ್ ಬಾಲ್ ಮಾಜಿ ಆಟಗಾರ್ತಿ ಪುಷ್ಪಾ ಕುಟ್ಟಯ್ಯ, ಪಂದ್ಯಾವಳಿ ಆಯೋಜಕ ಇರ್ಷಾದ್ (ಇಚ್ಚು) ನೌಶೀಬ್, ಲೇಖ್ ವ್ಯೆ ಹೋಟೆಲ್ ಮಾಲೀಕ ನವಾಸ್, ಪಂದ್ಯಾವಳಿ ಆಯೋಜಕರಾದ ಅಪ್ಪಾರಂಡ ಕುಟುಂಬಸ್ಥರು, ಎಕ್ಯೂಬ್ ಮಾಲೀಕ ಶಾನ್, ಉದ್ಯಮಿ ಅತೀಫ್ ಇತರರು ಇದ್ದರು. ಮ್ಯೇಡ್ ಎನ್ಸ್ ಮಡಿಕೇರಿ, ಬ್ಲಾಕ್ ಕೋಬ್ರಾಸ್, ಎವೇಂಜರ್ಸ್, ರಾಯಲ್ ರಜಥಾದ್ರೀಸ್, ಕಾವೇರಿಯನ್ಸ್ ಗೊಣಿಕೊಪ್ಪಲು, ಟೀಗಲ್ ಹೋಫ್ ಸ್ಟಾರ್ಸ್ ಪೊನ್ನಂಪೇಟೆ ಆರು ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.

    ವಿಜೇತ ತಂಡಗಳಿಗೆ ಪ್ರಥಮ ಬಹುಮಾನ 50,000ರೂ., ದ್ವಿತೀಯ 25,000ರೂ. ನಗದು ಮತ್ತು ಟ್ರೋಫಿ ನೀಡಿ ಗೌರವಿಸಲಾಯಿತು. ಟೀಗಲ್ ಹೋಫ್ ಸ್ಟಾರ್ಸ್ ಪೊನ್ನಂಪೇಟೆ ತಂಡದ ಅರ್ಪಣ್ ಅವರು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಬ್ಲಾಕ್ ಕೋಬ್ರಾಸ್ ವಿರಾಜಪೇಟೆ ತಂಡದ ಪ್ರತೀಕ್ ಪೂವಣ್ಣ ಅವರು ಉತ್ತಮ ಡಿಫೆಂಡರ್ ಪ್ರಶಸ್ತಿ ತಮ್ಮದಾಗಿಸಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts