More

    ಕ್ರೀಡೆಗಳು ಮನಸ್ಸಿಗೆ ನೀಡುತ್ತವೆ ಮುದ

    ಹೊಳೆಹೊನ್ನೂರು: ಗ್ರಾಮೀಣದ ಪ್ರತಿಭೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಬೇಕು ಎಂದು ಮಾಜಿ ಎಪಿಎಂಸಿ ಅಧ್ಯಕ್ಷ ಸತೀಶ್ ಸಾವಚಿತ್ ಹೇಳಿದರು.

    ಸಮೀಪದ ಎಮ್ಮೆಹಟ್ಟಿಯಲ್ಲಿ ಶುಕ್ರವಾರ ಛತ್ರಪತಿ ಸಂಘದಿಂದ ಆಯೋಜಿಸಿದ್ದ ಮರಾಠ ಪ್ರೀಮಿಯರ್ ಲೀಗ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
    ಕ್ರೀಡೆಗಳು ದೈಹಿಕ ವ್ಯಾಯಾಮ ನೀಡುವುದರ ಜತೆಗೆ ಮನಸ್ಸಿಗೆ ಮುದ ನೀಡುತ್ತವೆ. ತೆರೆಮರೆಗೆ ಸರಿಯುತ್ತಿರುವ ದೇಸಿ ಕ್ರೀಡೆಗಳನ್ನು ಮುನ್ನಲೆಗೆ ತರಬೇಕಿದೆ. ಆಟೋಟಗಳೊಂದಿಗೆ ಪ್ರತಿಯೊಬ್ಬರಲ್ಲಿನ ಪ್ರತಿಭೆಗಳ ಅನಾವರಣಕ್ಕೆ ಸೂಕ್ತ ವೇದಿಕೆ ದೊರಕಬೇಕು. ಹಳ್ಳಿಗಳಲ್ಲಿ ಆಯೋಜಿಸಿರುವ ಟಗರು ಕಾಳಗ ಸೇರಿ ಪಂದ್ಯಾವಳಿಗಳು ಜಿಲ್ಲೆಯ ಗಮನ ಸೆಳೆಯುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು.
    ಭದ್ರಾವತಿ ಮರಾಠ ಸಂಘದ ಅಧ್ಯಕ್ಷ ಲೋಕೇಶ್‌ರಾವ್, ಇಂಜಿನಿಯರ್ ಸಂಪತ್ ಕುಮಾರ್, ಯಶವಂತರಾವ್ ಘೋರ್ಪಡೆ, ಆರ್.ಉಮೇಶ್, ಪರುಶುರಾಮ್ ರಾವ್, ದೇವೇಂದ್ರ, ನಾಗರಾಜ್, ರಾಜಪ್ಪ, ನಿತೀನ್‌ರಾವ್, ಬಿ.ನಾಗಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts