More

    ದೈಹಿಕ ಕ್ಷಮತೆಗೆ ಕ್ರೀಡೆ ಸಹಕಾರಿ


    ಕೊಡಗು : ಮೂರ್ನಾಡು ವಿದ್ಯಾಸಂಸ್ಥೆ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅಕಾಡೆಮಿ ಫಾರ್ ಸ್ಪೋರ್ಟ್ಸ್ ಆ್ಯಂಡ್ ಗೇಮ್ಸ್ ವತಿಯಿಂದ ಮೂರ್ನಾಡಿನಲ್ಲಿ ಆಯೋಜಿಸಿದ್ದ 15 ದಿನಗಳ ಹಾಕಿ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಇತ್ತೀಚೆಗೆ ನಡೆಯಿತು.


    ಲೆಫ್ಟಿನೆಂಟ್ ಕರ್ನಲ್, ಒಲಿಂಪಿಯನ್ ಬಾಳೇಯಡ ಕೆ.ಸುಬ್ರಮಣಿ ಮಾತನಾಡಿ, ಸೈನ್ಯ ಅಥವಾ ಇನ್ಯಾವುದೇ ಸೇವೆಗೆ ಸೇರಲು ಕ್ರೀಡೆ ಅಗತ್ಯ. ದೈಹಿಕ ಕ್ಷಮತೆ ಹೆಚ್ಚಿಸಿಕೊಳ್ಳಲು ಕ್ರೀಡೆ ಸಹಕಾರಿ. ಕೊಡಗು ಹಾಕಿ ಕ್ರೀಡೆಯ ತೊಟ್ಟಿಲು. ಇಲ್ಲಿಂದ ಹಲವಾರು ಹಾಕಿ ಕ್ರೀಡಾಪಟುಗಳು ರಾಷ್ಟ್ರ ತಂಡಕ್ಕೆ ಆಯ್ಕೆ ಆಗುವಂತಾಗಲಿ ಎಂದು ಶುಭ ಹಾರೈಸಿದರು.


    ಕ್ರೀಡಾ ವೀಕ್ಷಕ ಚೆಪ್ಪುಡಿರ ಕಾರ್ಯಪ್ಪ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡಾ ಶಿಬಿರದಲ್ಲಿ ಪಾಲ್ಗೊಳ್ಳುವ ಮೂಲಕ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ ವೃದ್ಧಿಸಿಕೊಳ್ಳಬೇಕು, ವರ್ಷಕ್ಕೆ ಎರಡು ಬಾರಿ ಶಿಬಿರ ನಡೆಸುವುದು ಸೂಕ್ತ. ಈ ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪಾಲ್ಗೊಳ್ಳುವಂತಾಗಲಿ ಎಂದು ಹರಸಿದರು.


    ಜನರಲ್ ತಿಮ್ಮಯ್ಯ ಅಕಾಡೆಮಿಯ ಸಂಚಾಲಕ ಪೆಮ್ಮಡಿಯಂಡ ವೇಣು ಅಪ್ಪಣ್ಣ ಪ್ರಾಸ್ತಾವಿಕ ನುಡಿಗಳನ್ನಾಡಿದರು. ತರಬೇತುದಾರರಾದ ಅವರೇಮಾದಂಡ ಪಚ್ಚು ಕುಶಾಲಪ್ಪ , ಮೇಕಜೆ ಸೀತಾರಾಮ್, ದೇವಂಡಿರ ನಾಗೇಶ್, ಕಂಬೀರಂಡ ಬೋಪಣ್ಣ, ಕೋರನ ಮಂಜುನಾಥ್ ಹಾಗೂ ಪಡಿನ್ಯಾರಂಡ ರಾಕೇಶ್ ಅವರಿಗೆ ನೆನಪಿನ ಕಾಣಿಕೆ ವಿತರಿಸಲಾಯಿತು. ಪದವಿ ಕಾಲೇಜಿನ ಉಪನ್ಯಾಸಕರಾದ ಹರೀಶ್ ಅವರು ಕಾರ್ಯಕ್ರಮ ನಡೆಸಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts